ಬೆಂಗಳೂರು: ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಸಚಿವೆ ಪ್ಯಾಟ್ರಿಷಿಯಾ ಡಿ ಲಿಲ್ಲೆ ಅವರು, ಭಾರತದ 2026ರ BRICS ಅಧ್ಯಕ್ಷತೆಯ ಅಡಿಯಲ್ಲಿ ಭಾರತ ಆಯೋಜಿಸುತ್ತಿರುವ BRICS ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಲು ಆ.21 ಮತ್ತು 22ರಂದು ಜೈಪುರಕ್ಕೆ ಭೇಟಿ ನೀಡಲಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಇಸ್ಮಾಯಿಲ್ ಡೋಕ್ರಾಟ್ ಕೂಡ ದಕ್ಷಿಣ ಆಫ್ರಿಕಾ ನಿಯೋಗದ ಭಾಗವಾಗಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಭೇಟಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಲಿಷ್ಠ ಹಾಗೂ ಮಹತ್ವದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಬಾಂಧವ್ಯದ ಇತಿಹಾಸದ ತಳಹದಿಯ ಮೇಲೆ ನಿರ್ಮಾಣಗೊಂಡಿರುವ ಈ ಸಂಬಂಧವು ನಿಕಟ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ಜನರಿಂದ ಜನರ ನಡುವಿನ ಬಾಂಧವ್ಯಗಳಿಂದ ಮತ್ತಷ್ಟು ಬಲಗೊಂಡಿದೆ. ಗ್ಲೋಬಲ್ ಸೌತ್‌ನ ಎರಡು ಪ್ರಮುಖ ಧ್ವನಿಗಳಾಗಿ ಹಾಗೂ BRICS ಸದಸ್ಯ ರಾಷ್ಟ್ರಗಳಾಗಿ, ಎರಡೂ ದೇಶಗಳು ವ್ಯಾಪಾರ ಮತ್ತು ಹೂಡಿಕೆ, ಪ್ರವಾಸೋದ್ಯಮ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸಲಿವೆ.
BRICS ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಸಚಿವೆ ಡಿ ಲಿಲ್ಲೆ ಅವರ ಭಾಗವಹಿಸುವಿಕೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಮತ್ತು ದಕ್ಷಿಣ ಆಫ್ರಿಕಾದ ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತದೊಂದಿಗೆ ತನ್ನ ಸಹಭಾಗಿತ್ವವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಲು ಮಹತ್ವದ ಅವಕಾಶವನ್ನು ಒದಗಿಸುತ್ತದೆ.
ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಸಚಿವೆ ಪ್ಯಾಟ್ರಿಷಿಯಾ ಡಿ ಲಿಲ್ಲೆ ಅವರು ಮಾತನಾಡುತ್ತಾ, “ಭಾರತವು ದಕ್ಷಿಣ ಆಫ್ರಿಕಾದ ಪಾಲಿಗೆ ಅತ್ಯಂತ ಮೌಲ್ಯಯುತ ಮತ್ತು ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿದೆ. ನಮ್ಮ ಸಂಬಂಧವು ಹಂಚಿಕೊಂಡ ಇತಿಹಾಸದ ಮೇಲೆ ನಿರ್ಮಾಣ ಗೊಂಡಿದ್ದು, ದೀರ್ಘಕಾಲದಿಂದ ಬೆಳೆದು ಬಂದಿರುವ ಜನರಿಂದ ಜನರ ನಡುವಿನ, ಸಾಂಸ್ಕೃತಿಕ ಮತ್ತು ಆರ್ಥಿಕ ಬಾಂಧವ್ಯಗಳಿಂದ ಮತ್ತಷ್ಟು ಬಲಗೊಂಡಿದೆ.
BRICS ವೇದಿಕೆಯ ಮೂಲಕ ನಾವು ಒಂದಾಗುತ್ತಿರುವ ಈ ಸಂದರ್ಭದಲ್ಲಿ, ಪ್ರವಾಸೋದ್ಯಮದ ಮೂಲಕ ಈ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸಲು ಮತ್ತು ಎರಡೂ ದೇಶಗಳ ಜನರು ಪರಸ್ಪರ ಸಂಪರ್ಕ ಹೊಂದಿ, ಪರಸ್ಪರರ ದೇಶಗಳನ್ನು ಅನುಭವಿಸಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಮಹತ್ವದ ಸಾಮರ್ಥ್ಯವನ್ನು ನಾವು ಕಾಣುತ್ತಿದ್ದೇವೆ. ಕ್ರಿಕೆಟ್ ಬಹುಕಾಲದಿಂದಲೂ ನಮ್ಮ ಎರಡೂ ರಾಷ್ಟ್ರಗಳನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿದೆ.
2027ರ ICC ಕ್ರಿಕೆಟ್ ವಿಶ್ವಕಪ್ ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಮತ್ತೊಂದು ಅವಕಾಶವನ್ನು ಒದಗಿಸಲಿದೆ. ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ (Electronic Travel Authorisation) ಪರಿಚಯಿಸುವ ನಮ್ಮ ನಿರ್ಧಾರವು ಭಾರತೀಯ ಮಾರುಕಟ್ಟೆಗೆ ನಾವು ನೀಡುತ್ತಿರುವ ಮಹತ್ವವನ್ನು ಹಾಗೂ ನಮ್ಮ ಎರಡೂ ದೇಶಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಬಲಪಡಿಸಿ ಸುಗಮಗೊಳಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.” ಎಂದು ಹೇಳಿದರು.
ಭಾರತವು ದಕ್ಷಿಣ ಆಫ್ರಿಕಾಕ್ಕೆ ಪ್ರಮುಖ ಹಾಗೂ ವೇಗವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ಮಾರುಕಟ್ಟೆಯಾಗಿ ಮುಂದುವರಿದಿದೆ. ವನ್ಯಜೀವಿ ಮತ್ತು ಸಫಾರಿ, ಸಾಹಸ ಪ್ರವಾಸ, ಸಂಸ್ಕೃತಿ, ಪಾಕಶೈಲಿ, ಐಷಾರಾಮಿ ಪ್ರವಾಸೋದ್ಯಮ ಹಾಗೂ ವ್ಯಾಪಾರ ಕಾರ್ಯಕ್ರಮಗಳು ಸೇರಿದಂತೆ ದಕ್ಷಿಣ ಆಫ್ರಿಕಾದ ವೈವಿಧ್ಯಮಯ ಪ್ರವಾಸೋದ್ಯಮ ಕೊಡುಗೆಗಳು ಭಾರತೀಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾವು ಭಾರತೀಯ ಪ್ರವಾಸಿಗರಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಗಳನ್ನು ಹೊಂದಿರುವ ಪ್ರವಾಸಿ ತಾಣವನ್ನು ಒದಗಿಸುತ್ತದೆ.
ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುವ Trusted Tour Operator Scheme (TTOS) ಮತ್ತು Electronic Travel Authorisation (ETA) ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ಭಾರತೀಯ ಪ್ರವಾಸಿಗರಿಗೆ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕ್ರಮಗಳು ಹೆಚ್ಚು ತಡೆರಹಿತ ಪ್ರಯಾಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ವಿರಾಮ ಪ್ರವಾಸ, ವ್ಯಾಪಾರ ಕಾರ್ಯಕ್ರಮಗಳು, ಕ್ರೀಡೆ ಹಾಗೂ ಅನುಭವಾಧಾರಿತ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ವನ್ನು ಹೊಂದಿವೆ.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಆಯೋಜಿಸಲಾಗಿರುವ ICC ಕ್ರಿಕೆಟ್ ವಿಶ್ವಕಪ್ 2027, ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ಮಾರುಕಟ್ಟೆಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಉತ್ತಮ ಅವಕಾಶವನ್ನು ಒದಗಿಸಲಿದೆ. ಕ್ರಿಕೆಟ್ ಕ್ರೀಡೆಯ ಆಚೆಗೆ, ಈ ಪಂದ್ಯಾವಳಿಯು ಕ್ರೀಡಾ ಪ್ರವಾಸೋದ್ಯಮಕ್ಕೆ ಮಹತ್ವದ ವೇದಿಕೆಯಾಗುವ ನಿರೀಕ್ಷೆಯಿದ್ದು, ದಕ್ಷಿಣ ಆಫ್ರಿಕಾದ ವೈವಿಧ್ಯಮಯ ಪ್ರವಾಸೋದ್ಯಮ ಅನುಭವಗಳನ್ನು ಅನ್ವೇಷಿಸಲು ಭಾರತೀಯ ಪ್ರವಾಸಿಗರನ್ನು ಉತ್ತೇಜಿಸಲಿದೆ.
BRICSನಲ್ಲಿ ದಕ್ಷಿಣ ಆಫ್ರಿಕಾದ ಭಾಗವಹಿಸುವಿಕೆಯು, ಭಾರತ ಮತ್ತು ಇತರ BRICS ಸದಸ್ಯ ರಾಷ್ಟ್ರಗಳೊಂದಿಗೆ ಸಾಮಾನ್ಯ ಆದ್ಯತೆಗಳನ್ನು ಮುನ್ನಡೆಸಲು ಹಾಗೂ ಗ್ಲೋಬಲ್ ಸೌತ್‌ನಾದ್ಯಂತ ಸಹಕಾರವನ್ನು ಬಲಪಡಿಸಲು ಹೊಂದಿರುವ ತನ್ನ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತದೆ. BRICS ಪ್ರವಾಸೋದ್ಯಮ ಸಚಿವರ ಸಭೆಯು, ಪ್ರವಾಸೋದ್ಯಮದ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಹಾಗೂ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗುವ ಕ್ಷೇತ್ರಗಳನ್ನು ಗುರುತಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.
ಸಚಿವೆ ಡಿ ಲಿಲ್ಲೆ ಅವರ ಭೇಟಿ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (COO) ಇಸ್ಮಾಯಿಲ್ ಡೋಕ್ರಾಟ್ ಅವರ ಭಾಗವಹಿಸುವಿಕೆಯು, ಭಾರತದೊಂದಿಗೆ ತನ್ನ ಸಹಭಾಗಿತ್ವವನ್ನು ಮತ್ತಷ್ಟು ಗಾಢಗೊಳಿಸುವ ಮತ್ತು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಬಲಿಷ್ಠ ಅಡಿಪಾಯವನ್ನು ಮತ್ತಷ್ಟು ಬಲಪಡಿಸುವ ದಕ್ಷಿಣ ಆಫ್ರಿಕಾದ ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತದೆ.
ಈ ಅವಕಾಶವನ್ನು ಬಳಸಿಕೊಂಡು ಭಾರತದೊಂದಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸಹಕಾರ ವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಪರಸ್ಪರ ಸಂಪರ್ಕ, ವಿನಿಮಯ ಮತ್ತು ಹಂಚಿಕೆಯ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ದಕ್ಷಿಣ ಆಫ್ರಿಕಾ ಎದುರುನೋಡುತ್ತಿದೆ.