ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿ ಬಂದಿದ್ದ ಬೆಂಗಳೂರಿನ ಯುವಕ 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

Student suicide in Bengaluru: ಬೆಂಗಳೂರಿನ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಮಂಗಳೂರು ಮೂಲದ 26 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿ ವಾಪಸ್ ಆದ ಬೆನ್ನಲ್ಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಂಗಳೂರಿನಲ್ಲಿ 16ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ. -

Prabhakara R
Prabhakara R Jan 7, 2026 5:46 PM

ಬೆಂಗಳೂರು: 16ನೇ ಮಹಡಿಯಿಂದ ಜಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ (Student suicide in Bengaluru) ಮಾಡಿಕೊಂಡ ಘಟನೆ ಬೆಂಗಳೂರಿನ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮಂಗಳೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ನಿಕ್ಷೇಪ್ ಬಂಗೇರಾ (26) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿಕ್ಷೇಪ್ ಬಂಗೇರಾ ತನ್ನ ತಂದೆ-ತಾಯಿ ಜತೆ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ವಿದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿ ವಾಪಸ್ ಆಗಿದ್ದ ನಿಕ್ಷೇಪ್ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದಿಂದ ನಿಕ್ಷೇಪ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೈಕ್‌ಗೆ ಹಾನಿ; ಮನೆಯಲ್ಲಿ ಬೈಯುತ್ತಾರೆ ಎಂಬ ಭಯದಿಂದ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ಉಡುಪಿ: ಸ್ಕೂಟಿ ಕಲಿಯುವ ವೇಳೆ ಬಿದ್ದು ವಾಹನಕ್ಕೆ ಹಾನಿಯಾಗಿದ್ದರಿಂದ ಮನೆಯಲ್ಲಿ ಬೈಯುತ್ತಾರೆ ಎಂಬ ಭಯದಿಂದ ಪಿಯುಸಿ ವಿದ್ಯಾರ್ಥಿ, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ನಡೆದಿದೆ. ಮಂದಾರ್ತಿಯಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಉದ್ಯೋಗಿ ಮಂಜುನಾಥ ಶೆಟ್ಟಿಗಾರ್ ಅವರ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ವಂಶಿತ್‌ (17) ಆತ್ಮಹತ್ಯೆಗೆ ಶರಣಾದ ಬಾಲಕ.

ಭಾನುವಾರ ಬೆಳಗ್ಗೆ ಕಾರ್ಕಳದಲ್ಲಿ ವಂಶಿತ್‌ ಅವರ ತಂದೆಯ ಸಂಬಂಧಿಯೊಬ್ಬರ ಮನೆಯಲ್ಲಿ ಕಾರ್ಯಕ್ರಮವಿತ್ತು. ಹೀಗಾಗಿ ಸಂಬಂಧಿಯೊಬ್ಬರು ಸಾಬ್ರಕಟ್ಟೆಯಲ್ಲಿರುವ ಮಂಜುನಾಥ ಶೆಟ್ಟಿಗಾರ್ ಮನೆ ಬಳಿ ಸ್ಕೂಟಿ ನಿಲ್ಲಿಸಿ, ಅವರ ಕುಟುಂಬದವರೊಂದಿಗೆ ಕಾರ್ಕಳಕ್ಕೆ ತೆರಳಿದ್ದರು. ಆಗ ವಂಶಿತ್‌ ತಾತ ಒಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭ ಸಂಬಂಧಿಕರ ಸ್ಕೂಟಿಯನ್ನು ಕಲಿಯುವ ಸಲುವಾಗಿ ಬಾಲಕ ತೆಗೆದುಕೊಂಡು ಹೋಗಿದ್ದು, ನಿಯಂತ್ರಣ ತಪ್ಪಿ ಬಿದ್ದು ವಾಹನಕ್ಕೆ ಹಾನಿಯಾಗಿತ್ತು. ಇದರಿಂದ ಹೆದರಿದ ಆತ ತನ್ನ ಮೊಬೈಲ್ ಹಾಗೂ ಹೆಲ್ಮೆಟ್ ಅನ್ನು ಸ್ಕೂಟಿ ಬಿದ್ದ ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದ.

Self Hraming: ಮದುವೆಯಾಗಲು ಒಪ್ಪದ ಯುವತಿ, ಪುರೋಹಿತ ಆತ್ಮಹತ್ಯೆ

ಮನೆಯವರು ಕಾರ್ಯಕ್ರಮ ಮುಗಿಸಿ ವಾಪಸಾದಾಗ ಸ್ಕೂಟಿಯೊಂದಿಗೆ ತೆರಳಿದ ಮಗ ಮಧ್ಯಾಹ್ನವಾದರೂ ಮನೆಗೆ ವಾಪಸಾಗದಿರುವುದನ್ನು ಗಮನಿಸಿ , ಸ್ನೇಹಿತರು ಹಾಗೂ ಅಕ್ಕಪಕ್ಕದ ಮನೆಯವರೊಂದಿಗೆ ಹುಡುಕಾಟ ನಡೆಸಿದಾಗ ಸ್ಕೂಟಿ ಹಾಗೂ ಮೊಬೈಲ್, ಹೆಲ್ಮೆಟ್ ಪತ್ತೆಯಾಗಿತ್ತು. ಆನಂತರ ಮನೆಯ ಸಮೀಪದಲ್ಲೇ ಇದ್ದ ಕೃಷಿ ಹೊಂಡದ ಬಳಿ ಆತನ ಚಪ್ಪಲಿ ಹಾಗೂ ಶರ್ಟ್ ಪತ್ತೆಯಾಗಿತ್ತು. ಹೊಂಡವನ್ನು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.