Greater Bengaluru Authority: ರಾಜಧಾನಿಯ ನಾಗರಿಕರಿಗೆ ಸಮರ್ಥ, ಉತ್ತಮ ಸೇವೆ ನೀಡಲು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ರಚನೆ: ಡಿಕೆಶಿ
DK Shivakumar: ವಿಧಾನಸಭಾ ಕ್ಷೇತ್ರದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ವಾರ್ಡ್ ವಿಂಗಡಣೆ ಮಾಡಲಾಗುವುದು. ನವೆಂಬರ್ 1, 2025ರಂದು ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

-

ಬೆಂಗಳೂರು: ನಗರದ ನಾಗರಿಕರಿಗೆ ಸಮರ್ಥ ಮತ್ತು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (Greater Bengaluru Authority) ರಚಿಸಿದ್ದು, ಇದರ ಕೆಳಗೆ ಐದು ನಗರ ಪಾಲಿಕೆಗಳಿದ್ದು, ಇಂದು ಅಧಿಕೃತವಾಗಿ ಜಿಬಿಎ ಅಸ್ತಿತ್ವಕ್ಕೆ ಬಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಕುರಿತು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ವಿಧಾನಸಭಾ ಕ್ಷೇತ್ರದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ವಾರ್ಡ್ ವಿಂಗಡಣೆ ಮಾಡಲಾಗುವುದು. ನವೆಂಬರ್ 1, 2025ರಂದು ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದೇವೆ. ಅಷ್ಟೇ ಅಲ್ಲದೇ 30 ನವೆಂಬರ್ 2025ರಂದು ವಾರ್ಡ್ ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ.
ಎಲ್ಲಾ ವಲಯಗಳಿಗೂ ಈಗಾಗಲೇ ಆ ವಲಯ ವ್ಯಾಪ್ತಿಯಲ್ಲಿರುವ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಐದು ನಗರ ಪಾಲಿಕೆಯ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. 27 ವಿಭಾಗಗಳನ್ನು 50 ವಿಭಾಗಗಳಾಗಿ ಪರಿವರ್ತನೆಯನ್ನು ಮಾಡಿದ್ದೇವೆ. 75 ಉಪ ವಿಭಾಗಗಳನ್ನು 150 ಉಪ ವಿಭಾಗಗಳಾಗಿ ಪರಿವರ್ತನೆಯನ್ನು ಮಾಡಿದ್ದೇವೆ. ನಾಳೆಯಿಂದ ಸಂಗ್ರಹವಾಗುವ ತೆರಿಗೆ ಸಂಬಂಧಪಟ್ಟ ಆಯಾ ನಗರ ಪಾಲಿಕೆಗೆ ಸೇರಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಅಭಿವೃದ್ಧಿಯೇ ನಮ್ಮ ಧ್ಯೇಯ!
— DK Shivakumar (@DKShivakumar) September 2, 2025
ಬೆಂಗಳೂರಿನ ಸಾರ್ವಜನಿಕ ಪ್ರಾಧಿಕಾರಗಳ ಸಮನ್ವಯ ಮತ್ತು ಮೇಲ್ವಿಚಾರಣೆ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇಂದಿನಿಂದ ಅಧಿಕೃತವಾಗಿ ಕಾರ್ಯಾರಂಭಿಸಿದೆ. ಇದರನ್ವಯ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ನಗರದ ಸರ್ವಾಂಗೀಣ ಅಭಿವೃದ್ಧಿಯ ಹೊಸ… pic.twitter.com/JvgOqXhayq
ಈ ಸುದ್ದಿಯನ್ನೂ ಓದಿ | Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ; 5 ನಗರ ಪಾಲಿಕೆ ರಚನೆ, ಯಾವ ಕ್ಷೇತ್ರ ಯಾವ ವಲಯಕ್ಕೆ?
ಪ್ರತಿಯೊಂದು ಪಾಲಿಕೆಗೂ ಅಂದಾಜು 100 ವಾರ್ಡ್‌ಗಳು ರಚನೆಯಾದರೂ ಬೆಂಗಳೂರು ನಗರದಲ್ಲಿ 500 ಹೊಸ ನಾಯಕರು ತಯಾರಾಗುವುದು ಒಂದು ದೊಡ್ಡ ಸಂದೇಶ. ಇದರಲ್ಲಿ 50% ಮಹಿಳೆಯರು ಇದ್ದರೇ ಶೇ.50ರಷ್ಟು ಪುರುಷರು ಇರುತ್ತಾರೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ 5 ಪಾಲಿಕೆ ಕಚೇರಿಗಳ ವಿವರ ಹೀಗಿವೆ..#GreaterBengaluruAuthority pic.twitter.com/2NEzJW3vw7
— DK Shivakumar (@DKShivakumar) September 2, 2025