ಬೆಂಗಳೂರು, ಫೆ.23: ರಾಜ್ಯದಲ್ಲಿ ಈ ವರ್ಷ ಬೇಸಿಗೆ (Summer) ಅಬ್ಬರ ಜೋರಾಗಲಿದೆ. ಫೆಬ್ರವರಿಯಲ್ಲೇ (February) ಬಿಸಿಲ ಝಳ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ವರದಿಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜಧಾನಿಯ (Bengaluru) ಜನರಿಗೆ ಬಿಸಿಲ ಶಾಕ್ ನಡುವೆಯೇ ನೀರಿನ ಅಭಾವದ (Drinking Water scarcity) ಸಂಕಷ್ಟ ಎದುರಾಗಬಹುದು ಎಂಬ ಆತಂಕ ಎದುರಾಗಿದೆ.
ಈ ಬಾರಿ ವಾಡಿಕೆಗಿಂತ ಅಧಿಕ ತಾಪಮಾನ ಎದುರಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರ ನಡುವೆ ಬೇಸಿಗೆಯಲ್ಲಿ ಪವರ್ ಕಟ್ ಹಾಗೂ ನೀರಿನ ಅಭಾವದ ಬಿಸಿ ತಟ್ಟುವ ಆತಂಕ ಜನರಲ್ಲಿದೆ. ರಾಜಧಾನಿಗೆ ನೀರೊದಗಿಸುವ ಜಲಾಶಯಗಳ ಸ್ಥಿತಿಗತಿ ಗಮನಿಸಿದರೆ ಈ ಆತಂಕ ಸುಳ್ಳು ಎನ್ನಲಾಗದು.
ಯಾವ ಜಲಾಶಯದಲ್ಲಿ ನೀರು ಎಷ್ಟಿದೆ?
ಬೆಂಗಳೂರು ಮೈಸೂರು ಭಾಗದ ರೈತರ ಜೀವನಾಡಿಯಾದ ಕಾವೇರಿ ಹಾಗೂ ಕಪಿಲಾ ನದಿಗಳಿಗೆ ಈಗ ಬೇಸಿಗೆಯ ಕಾಟ ಶುರುವಾಗಿದೆ. ಫೆಬ್ರವರಿ ತಿಂಗಳಿನಲ್ಲಿಯೇ ಬೇಸಿಗೆ ಆರಂಭವಾಗಿದ್ದು ಜಲಾಶಯಗಳು ತಮ್ಮ ಒಡಲಿನಲ್ಲಿ ನೀರನ್ನು ಇಟ್ಟುಕೊಂಡಿವೆ. ಮುಂದೆ ನೀರು ಕಡಿಮೆಯಾಗುತ್ತಾ ಬೇಸಿಗೆಗೆ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ.
ಮೂರರಲ್ಲಿ ಒಂದು ಗ್ಲಾಸ್ ಕುಡಿಯುವ ನೀರು ಕಲುಷಿತ; ಜಲ ಜೀವನ್ ಮಿಷನ್ ವರದಿಯಲ್ಲಿ ಬಹಿರಂಗ
ರಾಜ್ಯವಲ್ಲದೇ ನೆರೆಯ ರಾಜ್ಯವಾದ ತಮಿಳುನಾಡಿನ ರೈತರಿಗೂ ಜೀವನಾಡಿಯಾಗಿರಯವ ಕಾವೇರಿಯ 124.80 ಅಡಿಗಳ ಸಾರ್ಮಥ್ಯದ ಜಲಾಶಯದಲ್ಲಿ ಇಂದು 115.10 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 239 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಜಲಾಶಯದಿಂದ 4316 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಇನ್ನು ಹೆಚ್. ಡಿ ಕೋಟೆಯ ಕಬಿನಿ ಜಲಾಶಯ. 2284 ಅಡಿಗಳ ಸಾಮರ್ಥ್ಯದ ಜಲಾಶಯದಲ್ಲಿ ಇಂದು 2272.66 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಕೇವಲ 185 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಜಲಾಶಯದಿಂದ 1200 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ.
ರಾಜಧಾನಿಯ ಹೈ ರಿಸ್ಕ್ ಏರಿಯಾಗಳು
ಬೇಸಿಗೆಗೂ ಮುನ್ನ ಜಿಬಿಎ, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದಾದ 21 ಹೈ ರಿಸ್ಕ್ ಏರಿಯಾಗಳನ್ನು ಗುರುತಿಸುವ ಕೆಲಸ ಮಾಡಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಹಳೆ ಗುಡ್ಡದಳ್ಳಿ , ಬಾಪೂಜಿ ನಗರ, ಮೈಸೂರು ರಸ್ತೆ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಡಿಜೆ ಹಳ್ಳಿ, ದೇವಿ ನಗರ, ಗೆದ್ದಲಹಳ್ಳಿ , ನಾರಾಯಣಪುರ ಕಾಲೋನಿ, ಬಂಡೆಪಾಳ್ಯ, ಚಾಮರಾಜಪೇಟೆ, ರಾಗಿಗುಡ್ಡ, ಹೊಸಕೆರೆಹಳ್ಳಿ ಸೇರಿದಂತೆ ಒಟ್ಟು 21 ಏರಿಯಾಗಳಲ್ಲಿ ನೀರಿನ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.
ನೀರಿನ ತೊಂದರೆ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಹೈ ರಿಸ್ಕ್ ಏರಿಯಾಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲು ಪ್ಲಾನ್ ಮಾಡಲಾಗಿದೆ. ಅಲ್ಲಲ್ಲಿ ಚಿಕ್ಕ ಟ್ಯಾಂಕರ್ಗಳ ಅಳವಡಿಕೆ ಮಾಡುವ ಸಾಧ್ಯತೆ ಇದ್ದು, ಜೊತೆ ಟ್ಯಾಂಕರ್ ಮಾಫಿಯಾಗಳ ಮೇಲೆ ನಿಗಾ ವಹಿಸಿಲಿದ್ದಾರೆ.