ಸಂದರ್ಶನ: ಶೀಲಾ ಸಿ. ಶೆಟ್ಟಿ
ಮಿಸೆಸ್ ಗ್ಲೋಬ್ ಇಂಡಿಯಾ ಕ್ಲಾಸಿಕ್ 2026 ರ ಟೈಟಲ್ ವಿಜೇತರಾಗಿರುವ ಅರ್ಪಿತಾ ಲಂಕೇಶ್ (Arpitha Lankesh) ವಿಶ್ವವಾಣಿ ನ್ಯೂಸ್‌ನೊಂದಿಗೆ ಮುಕ್ತವಾಗಿ ಮಾತನಾಡಿದ್ದು, ಅವರ ಸಂದರ್ಶನದ ಸಾರಾಂಶ ಇಲ್ಲಿದೆ.
ವಿಶ್ವವಾಣಿ ನ್ಯೂಸ್: ಬ್ಯೂಟಿ ಪೇಜೆಂಟ್‌ನಲ್ಲಿ ವಿಜೇತರಾದ ನಂತರ ನಿಮ್ಮ ಮುಂದಿನ ಹೆಜ್ಜೆಯೇನು?
ಅರ್ಪಿತಾ ಲಂಕೇಶ್: ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು.
ವಿಶ್ವವಾಣಿ ನ್ಯೂಸ್: ಕೀರೀಟ ಮುಡಿಗೇರಿಸಿಕೊಂಡ ನಂತರ ನಿಮಗೆ ಅನಿಸಿದ್ದೇನು?
ಅರ್ಪಿತಾ ಲಂಕೇಶ್: ಫ್ಯಾಷನ್ ಕ್ಷೇತ್ರದಲ್ಲಿ ಟೈಟಲ್ ಮೂಲಕ ನನ್ನದೇ ಆದ ಪ್ರತಿಷ್ಠಿತ ಐಡೆಂಟಿಟಿ ಪಡೆದ ಬಗ್ಗೆ ಹೆಮ್ಮೆ ಎಂದೆನಿಸಿರುವುದು.
ವಿಶ್ವವಾಣಿ ನ್ಯೂಸ್: ಈ ಬ್ಯೂಟಿ ಪೇಜೆಂಟ್‌ಗೆ ನಿಮ್ಮ ತಯಾರಿ ಹೇಗಿತ್ತು?
ಅರ್ಪಿತಾ ಲಂಕೇಶ್: ನ್ಯಾಷನಲ್ ಡೈರೆಕ್ಟರ್ ವೀಣಾ ಜೈನ್ ಮಾರ್ಗದರ್ಶನದಲ್ಲಿ, ರಾಜೇಶ್ ಶೆಟ್ಟಿಯವರ ಟ್ರೈನಿಂಗ್ ನನ್ನನ್ನು ಪರ್ಫೆಕ್ಟ್ ಸ್ಪರ್ಧಿಯಾಗಿ ರೂಪಿಸಿತು. ನನ್ನ 6 ತಿಂಗಳ ಪರಿಶ್ರಮಕ್ಕೆ ಕೊನೆಗೂ ಗೆಲುವು ನನ್ನದಾಯಿತು.
ವಿಶ್ವವಾಣಿ ನ್ಯೂಸ್: ಸೆಲೆಬ್ರೆಟಿಗಳ ಕುಟುಂಬವಾದ ನಿಮ್ಮ ಮನೆಯಲ್ಲಿ ದೊರೆತ ಪ್ರೋತ್ಸಾಹ ಹೇಗಿತ್ತು?
ಅರ್ಪಿತಾ ಲಂಕೇಶ್: ಇಂದ್ರಜೀತ್ ಖುಷಿಖುಷಿಯಿಂದ ಒಪ್ಪಿಕೊಂಡು, ಪ್ರೋತ್ಸಾಹಿಸಿದರು. ಮಕ್ಕಳು ಕೂಡ ಅಷ್ಟೇ! ಮೊದಲಿಗೆ ಅಚ್ಚರಿಗೊಂಡರೂ ನಂತರ ಸಂತೋಷದಿಂದಲೇ ಪ್ರೋತ್ಸಾಹಿಸಿದರು.
ವಿಶ್ವವಾಣಿ ನ್ಯೂಸ್: ವಿದೇಶದಲ್ಲಿ ಬ್ಯೂಟಿ ಪೇಜೆಂಟ್‌ಗೆಂದು ಹೋದಾಗ ಅತ್ತೆಯವರ ನಿಧನದ ಸುದ್ದಿ ಕೇಳಿದರೂ ಹೇಗೆ ಗೆಲುವಿನತ್ತ ಸಾಗಲು ಸಾಧ್ಯವಾಯಿತು?
ಅರ್ಪಿತಾ ಲಂಕೇಶ್: ತೀರಾ ದುಃಖಿತಳಾದೆ. ವಿಚಲಿತಳಾದೆ. ಆದರೆ, ಸದಾ ಅವರು ನನಗೆ ಪ್ರೋತ್ಸಾಹಿಸುತ್ತಿದ್ದ ಸನ್ನಿವೇಶಗಳನ್ನು ನೆನೆದು, ಮತ್ತೊಮ್ಮೆ ಗಟ್ಟಿ ನಿರ್ಧಾರ ಮಾಡಿ, ಮುನ್ನಡೆದೆ. ತುಸು ಕಷ್ಟವಾದರೂ ಛಲ ಬಿಡದೇ ಗೆಲುವಿನತ್ತ ಸಾಗಿದೆ. ಟೈಟಲ್ ನನ್ನದಾಗಿಸಿಕೊಂಡೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)