ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Festival Saree Shopping 2026: ವರಮಹಾಲಕ್ಷ್ಮೀ ಹಬ್ಬಕ್ಕೆ ಶುರುವಾದ ಸೀರೆ ಶಾಪಿಂಗ್‌!

ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ಎಲ್ಲೆಡೆ ಸೀರೆ ಶಾಪಿಂಗ್‌ ಶುರುವಾಗಿದೆ. ಹಬ್ಬಕ್ಕೆ ಇನ್ನೂ ಸಾಕಷ್ಟು ದಿನಗಳು ಬಾಕಿ ಇದೆ. ಆದರೂ ಆಗಲೇ ಎಲ್ಲೆಡೆ ಸೀರೆ ಶಾಪಿಂಗ್‌ ಶುರುವಾಗಿದೆ. ಸೀರೆ ಸೆಂಟರ್‌ಗಳಲ್ಲಿನ ಸದ್ಯದ ಚಿತ್ರಣ ಹೇಗಿದೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು
1/5

ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ಎಲ್ಲೆಡೆ ಸೀರೆ ಶಾಪಿಂಗ್‌ ಶುರುವಾಗಿದೆ. ಹೌದು, ಹಬ್ಬಕ್ಕೆ ಇನ್ನೂ ಸಾಕಷ್ಟು ದಿನಗಳು ಬಾಕಿ ಇದೆ. ಆದರೂ ಆಗಲೇ ಎಲ್ಲೆಡೆ ಸೀರೆ ಶಾಪಿಂಗ್‌ ಶುರುವಾಗಿದೆ.

2/5

ಮಹಿಳೆಯರ ಕಾರುಬಾರು

ಎಲ್ಲೆಡೆ ಸೀರೆ ಶಾಪಿಂಗ್‌ ಸೆಂಟರ್‌ಗಳಲ್ಲಿ ಎಲ್ಲಿ ನೋಡಿದರೂ ಹೆಂಗಸರ ಹಾಗೂ ಹೆಣ್ಣು ಮಕ್ಕಳ ಕಲರವ ಹೆಚ್ಚಾಗಿದೆ. ಒಟ್ಟಾರೆ, ವರಮಹಾಲಕ್ಷ್ಮೀಯ ಹಬ್ಬಕ್ಕೂ ಮುನ್ನವೇ ಸೀರೆ ಶಾಪಿಂಗ್‌ ಅಬ್ಬರ ಹೆಚ್ಚಾಗಿದೆ ಎನ್ನುತ್ತಾರೆ ದೇವತಾ ಸೀರೆ ಸೆಂಟರ್‌ವೊಂದರ ಸೇಲ್ಸ್ ಮ್ಯಾನ್‌. ಇದೇ ರೀತಿ ಇತರೇ ಸೀರೆ ಅಂಗಡಿಗಳಲ್ಲೂ ಚಿತ್ರಣವಿದೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.

3/5

ಬೆಂಗಳೂರಿನ ಸೀರೆ ಲೋಕ ಸೃಷ್ಟಿಸಿರುವ ಏರಿಯಾಗಳು

ಬೆಂಗಳೂರಿನಲ್ಲಿ ಹಬ್ಬಗಳ ಸೀಸನ್‌ನಲ್ಲಿ ತುಂಬಿತುಳುಕಾಡುತ್ತಿರುವ ಪಾಪುಲರ್‌ ಸೀರೆ ಸೆಂಟರ್‌ಗಳಿವೆ. ಲಕ್ಷಗಟ್ಟಲೇ ಬೆಲೆ ಬಾಳುವ ಸೀರೆಗಳ ಶಾಪ್‌ಗಳಿಂದಿಡಿದು ಸಾವಿರದ ತನಕ ದೊರೆಯುವ ಸೀರೆಗಳ ಅಂಗಡಿಗಳಿವೆ. ಅಷ್ಟೇಕೆ! ಆಯಾ ವರ್ಗಕ್ಕೆ ಅನುಗುಣವಾಗಿ ಶಾಪಿಂಗ್‌ ಮಾಡುವ ಸೌಲಭ್ಯ ಕೂಡ ಇಲ್ಲಿದೆ.

ಮಾಲ್‌ಗಳಲ್ಲಿನ ಸೀರೆ ಸೆಂಟರ್‌ಗಳನ್ನು ಹೊರತುಪಡಿಸಿದರೇ, ಎಲ್ಲವೂ ಗಿಜಿಗಿಜಿ ಎನ್ನುತ್ತಿವೆ. ಇನ್ನು, ಚಿಕ್ಕಪೇಟೆ, ಜಯನಗರ, ಮಲ್ಲೇಶ್ವರ, ರಾಜಾಜಿನಗರ, ಗಾಂಧಿಬಜಾರ್‌ ಸೇರಿದಂತೆ ನಾನಾ ಏರಿಯಾಗಳಲ್ಲಿರುವ ಬ್ರಾಂಡೆಡ್‌ ಸೀರೆ ಅಂಗಡಿಗಳು, ಚಿಕ್ಕ ಪುಟ್ಟ ಸೀರೆ ಸೆಂಟರ್‌ಗಳು ಕೂಡ ಈಗಾಗಲೇ ಜಾಹೀರಾತು ಹಾಗೂ ಡಿಸ್ಕೌಂಟ್‌ಗಳನ್ನು ಪ್ರಕಟಿಸುವ ಮೂಲಕ ಮಹಿಳಾ ಗ್ರಾಹಕರನ್ನು ಸೆಳೆಯುತ್ತಿವೆ.

4/5

ಆನ್‌ಲೈನ್‌ ಸೀರೆ ಶಾಪಿಂಗ್‌

ಸೋಷಿಯಲ್‌ ಮೀಡಿಯಾ ಹಾಗೂ ಆನ್‌ಲೈನ್‌ ಮೂಲಕವೂ ಸೀರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಇಲ್ಲಿ ಕೊಳ್ಳುವಾಗ ಸಾಕಷ್ಟು ಎಚ್ಚರವಹಿಸಬೇಕು ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.

5/5

ಸೀರೆ ಶಾಪಿಂಗ್‌ ಪ್ರಿಯರಿಗೆ 7 ಟಿಪ್ಸ್

1) ಈಗಲೇ ಶಾಪಿಂಗ್‌ ಮಾಡಿದಲ್ಲಿ ಸೂಕ್ತ ಆಯ್ಕೆಗೆ ಸಾಕಷ್ಟು ಸಮಯವಿರುತ್ತದೆ.

2) ಎಕ್ಸ್‌ಚೇಂಜ್‌ ಮಾಡಲು ಅವಕಾಶವಿರುತ್ತದೆ.

3) ಎಕ್ಸ್‌ಕ್ಲೂಸೀವ್‌ ಟ್ರೆಂಡಿ ಸೀರೆಗಳನ್ನು ಕೊಳ್ಳಲು ಅವಕಾಶವಿರುತ್ತದೆ.

4) ಆಫರ್‌ಗಳ ಸದಾವಕಾಶ ಪಡೆಯಬಹುದು.

5) ವೀಕೆಂಡ್‌ ಬದಲು ವಾರದ ಮಧ್ಯದ ದಿನಗಳಲ್ಲಿ ಆಯ್ಕೆಗೆ ಹೆಚ್ಚು ಸಮಯವಿರುತ್ತದೆ.

6) ಟ್ರೆಂಡಿಯಾಗಿರುವ ಲೆಕ್ಕವಿಲ್ಲದಷ್ಟು ವಿನ್ಯಾಸದ ಸೀರೆಗಳ ಮೇಲೆ ಕಣ್ಣಾಯಿಸಬಹುದು.

7) ಮೈ ಮೇಲೆ ಹೊದ್ದು ಟ್ರಯಲ್‌ ನೋಡಲು ಅವಕಾಶವಿರುತ್ತದೆ.

ಶೀಲಾ ಸಿ ಶೆಟ್ಟಿ

View all posts by this author