ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Festival Shopping 2026: ಗೌರಿ-ಗಣೇಶನ ಹಬ್ಬಕ್ಕೆ ಶುರುವಾದ ಪೂಜಾ ಸಾಮಗ್ರಿಗಳ ಶಾಪಿಂಗ್

ಗೌರಿ-ಗಣೇಶನ ಹಬ್ಬಕ್ಕೆ ಈಗಾಗಲೇ ಪೂಜಾ ಸಾಮಗ್ರಿಗಳ ಶಾಪಿಂಗ್ ಎಲ್ಲೆಡೆ ಭರಾಟೆಯಿಂದ ಸಾಗಿದೆ. ಈಗಾಗಲೇ ಮಾರುಕಟ್ಟೆಗಳಲ್ಲಿ, ಬೀದಿಬದಿಗಳಲ್ಲಿ ಗೌರಿ ಗಣೇಶನ ವಿಗ್ರಹ, ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಯಾವ್ಯಾವ ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ. ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು
1/5

ಗೌರಿ-ಗಣೇಶ ಹಬ್ಬದ ಪೂಜಾ ಸಾಮಗ್ರಿಗಳ ಶಾಪಿಂಗ್ ಎಲ್ಲೆಡೆ ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಈಗಾಗಲೇ ಖರೀದಿಯ ಭರಾಟೆ ಜೋರಾಗಿದೆ.

2/5

ಪರಿಸರ ಸ್ನೇಹಿ ಗಣೇಶನಿಗೆ ಬೇಡಿಕೆ

ಈಗಾಗಲೇ ಮಾರುಕಟ್ಟೆಗಳಲ್ಲಿ, ಬೀದಿಬದಿಗಳಲ್ಲಿ ಗೌರಿ ಗಣೇಶನ ವಿಗ್ರಹ, ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಈ ಬಾರಿ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಮಣ್ಣಿನ ಗಣಪನ ಮೂರ್ತಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು,ಮೊದಲಿಗಿಂತ ಬೇಡಿಕೆ ಹೆಚ್ಚಿದೆ.

ಪೂಜಾ ಸಾಮಗ್ರಿಗಳ ಕಿಟ್

ಹಬ್ಬದಂದು ಕೈಗೊಳ್ಳುವ ವ್ರತ, ಪೂಜೆಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಕಿಟ್‌ನಲ್ಲಿ ಲಭ್ಯವಿರುವಂತಹ ಪ್ಯಾಕೇಜ್‌ಗಳು ದೊರೆಯುತ್ತಿವೆ. ಆಯಾ ಕಿಟ್ ಆಧಾರದ ಮೇಲೆ ದರ ನಿಗದಿಯಾಗಿದ್ದು, ದಿನದಿಂದ ದಿನಕ್ಕೆ ಮಾರಾಟದಲ್ಲಿ ಹೆಚ್ಚಳ ಕಂಡಿದೆ ಎಂದಿದ್ದಾರೆ ಮಾರಾಟಗಾರರು.

3/5

ಹಬ್ಬಕ್ಕೆ ಬಂತು ವೆರೈಟಿ ವಿನ್ಯಾಸದ ಗೆಜ್ಜೆ ವಸ್ತ್ರ

ಪೂಜೆಗೆಂದು ಬಳಸುವುದು ಅರಿಶಿನ ಮತ್ತು ಕುಂಕುಮದ ಎಳೆಗಳನ್ನೇ. ಮಾಮೂಲಿ ಪೂಜೆಯಲ್ಲಿ ಸಾಮಾನ್ಯವಾಗಿ ಎರಡು ಎಳೆಯ ಗೆಜ್ಜೆ ವಸ್ತ್ರ, ಗೌರಿ ಪೂಜೆಗೆ 16 ಎಳೆಯ ಗೆಜ್ಜೆ ವಸ್ತ್ರ, ಸ್ವಾಭಾವಿಕ ಹೂವಿನಂತೆ ಕಾಣುವ ಗೆಜ್ಜೆ ವಸ್ತ್ರಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಖರೀದಿದಾರರು ಹೆಚ್ಚಾಗಿದ್ದಾರೆ.

4/5

ಇನ್ಸ್ಟಂಟ್ ಮೋದಕ

ಗಣೇಶನ ಹಬ್ಬಕ್ಕೆ ನೈವೇದ್ಯವಾಗಿರಿಸಲು ಬಗೆಬಗೆಯ ಕರ್ಜಿಕಾಯಿ ಹಾಗೂ ಮೋದಕಗಳು ಬಂದಿವೆ. ಸಮಯದ ಅಭಾವವಿರುವವರು ಕೊಳ್ಳತೊಡಗಿದ್ದಾರೆ. ವಿಶೇಷವಾಗಿ ಹಬ್ಬಕ್ಕೆಂದೇ ತಯಾರಾಗಿರುವ ವಿವಿಧ ಲಡ್ಡು, ಮೋದಕ, ಕರ್ಜಿಕಾಯಿಯ ಬಾಕ್ಸ್‌ಗಳು ಬೇಕರಿಗಳಿಂದಿಡಿದು ಇನ್ಸ್ಟಂಟ್ ತಿನಿಸಿನ ಅಂಗಡಿಗಳಲ್ಲಿ ದೊರಕಲಾರಂಭಿಸಿವೆ.

5/5

ಗೌರಿಗೆ ರೆಡಿಮೇಡ್ ಬಾಗಿನ

ಮೊರದ ಬಾಗಿನ, ಚಿನ್ನ-ಬೆಳ್ಳಿಯಿಂದ ಮಾಡಿದ ಬಾಗಿನಗಳು, ವಿವಿಧ ಡಿಸೈನರ್ ಬಾಗಿನಗಳು ಮಾರುಕಟ್ಟೆಯಲ್ಲಿ ಮೇಳೈಸಿವೆ. ವಿವಿಧ ರೀತಿಯ ಡಿಸೈನ್ ಇರುವಂತಹ ತರಹೇವಾರಿ ಬಾಗಿನಗಳು ಕೂಡ ಸಿಗುತ್ತಿವೆ. ಆನ್‌ಲೈನ್ ಮೂಲಕವೂ ದೊರೆಯುತ್ತಿವೆ.

ಆನ್‌ಲೈನ್‌ನಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ಹೆಚ್ವಳ

ಅದರ ಹೊರತಾಗಿ ಗೌರಿ ಗಣೇಶನ ಪೂಜೆಗೆ ಬೇಕಾಗುವ ಎಲ್ಲಾಸಾಮಗ್ರಿಗಳು ಒಂದೇ ಕಿಟ್‌ನಲ್ಲಿ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಖರೀದಿಸುವ ಅವಕಾಶವಿದೆ.

ಶೀಲಾ ಸಿ ಶೆಟ್ಟಿ

View all posts by this author