ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪ ಪ್ರಚಾರದಲ್ಲಿ ಭಾಗಿಯಾಗಿರುವ ಮತ್ತೊಬ್ಬ ವ್ಯಕ್ತಿ ಬಾಲನ್. ಈ ವ್ಯಕ್ತಿಯ ಮಾತುಗಳನ್ನು ಕೇಳಿದರೆ ನಗಲೂ ಆಗದು, ಅಳಲೂ ಆಗದು. ಒಮ್ಮೆ ಮಾಧ್ಯಮ ದಲ್ಲಿ ನಡೆಯುತ್ತಿದ್ದ ಚರ್ಚೆಯೊಂದರಲ್ಲಿ ‘ಭಾರತ್ ಮಾತಾ ಕಿ ಜೈ’ ಹೇಳಿಕೆಯು ಸಂವಿಧಾನ ವಿರೋಧಿ ಎಂದು ಹೇಳಿದ್ದ ನಟೋರಿಯಸ್ ಎಡಚರ ವ್ಯಕ್ತಿ ಈ ಬಾಲನ್.

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

-

ಮೋಹನ್‌ ವಿಶ್ವ ಮೋಹನ್‌ ವಿಶ್ವ Aug 30, 2025 6:35 AM

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

‘ನ್ಯಾಯ ನೀತಿ ಮೂರ್ತಿವೆತ್ತ ಸತ್ಯದೈವವೇ, ಮಹಾಮಹಿಮ ಮಂಜುನಾಥ ನಮೋ ಎನ್ನುವೆ’ ಎನ್ನುತ್ತದೆ ಒಂದು ಭಕ್ತಿಗೀತೆ. ಧರ್ಮಸ್ಥಳವೆಂದರೆ ನ್ಯಾಯ, ನೀತಿ, ಸತ್ಯದ ಪ್ರತಿಬಿಂಬ. ಮಂಜು ನಾಥನ ಮೇಲೆ ಆಣೆ ಮಾಡಲು ಜನರು ಇಂದಿಗೂ ಹೆದರುತ್ತಾರೆ. ದಕ್ಷಿಣ ಭಾರತದ ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿದ್ದ ಬುರುಡೆ ಗ್ಯಾಂಗ್ ದಿನದಿಂದ ದಿನಕ್ಕೆ ಬೆತ್ತಲಾಗುತ್ತಿದೆ.

ಕಡಲಿಗೆ ಒಂದು ಕೊನೆ ಇದೆ, ಆದರೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿದ ಬುರುಡೆ ಗ್ಯಾಂಗಿನ ಸುಳ್ಳುಗಳಿಗೆ ಮಾತ್ರ ಕೊನೆಯಿಲ್ಲದಂತಾಗಿದೆ. ಮೊದಲಿಗೆ, ಸೌಜನ್ಯ ಎಂಬಾಕೆಗೆ ಸಂಬಂಧಿ ಸಿದ ಹೋರಾಟವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಪ್ರಾರಂಭಿಸಿ ದರು.

ನಂತರ ಮುಸಲ್ಮಾನನೊಬ್ಬನ ಮೂಲಕ ಕೃತಕ ಬುದ್ಧಿಮತ್ತೆಯ (ಎಐ) ವಿಡಿಯೋ ಮಾಡಿಸಿ ಧರ್ಮಸ್ಥಳದ ವಿರುದ್ಧದ ಅಪಪ್ರಚಾರವನ್ನು ದೇಶದಾದ್ಯಂತ ತೆಗೆದುಕೊಂಡು ಹೋದರು. ನಂತರ ಸುಜಾತ ಭಟ್ ಮೂಲಕ ಮತ್ತಷ್ಟು ಸುಳ್ಳುಗಳನ್ನು ಹೇಳಿಸಿ ಹೊಸ ವರಸೆ ಆರಂಭಿಸಿದ್ದರು. ಕೇವಲ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳುಗಳನ್ನು ಹೇಳಿ ಭಕ್ತರನ್ನು ನಂಬಿಸಿಬಿಡಬಹುದೆಂಬ ಆತ್ಮವಿಶ್ವಾಸದಲ್ಲಿತ್ತು ಬುರುಡೆ ಗ್ಯಾಂಗ್.

mohan Vishwa 3008

ಆದರೆ ಬುರುಡೆ ಗ್ಯಾಂಗ್ ಮಾಡಿದ ಷಡ್ಯಂತ್ರಗಳನ್ನು, ಮುಖ್ಯವಾಹಿನಿ ಮಾಧ್ಯಮಗಳು ತನಿಖಾ ಪತ್ರಿಕೋದ್ಯಮದ ಮೂಲಕ ಒಂದೊಂದಾಗಿ ಬಯಲು ಮಾಡಲು ಪ್ರಾರಂಭಿಸಿದ ನಂತರ, ಇಡೀ ಗ್ಯಾಂಗ್ ಪತರಗುಟ್ಟಿದೆ.

ಎಸ್‌ಐಟಿ ತನಿಖಾ ಸಮಯದಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಮಾತ ನಾಡುತ್ತಿದ್ದ ಬುರುಡೆ ಗ್ಯಾಂಗಿನ ಸುಳ್ಳುಗಳಿಗೆ ಮಿತಿ ಇಲ್ಲದಂತಾಗಿತ್ತು. ಬುರುಡೆ ಗ್ಯಾಂಗ್ ಬೆತ್ತಲಾಗು ತ್ತಿದ್ದಂತೆ ಅವರ ಹಿಂದಿದ್ದ ನಗರ ನಕ್ಸಲರ ಮುಖವಾಡ ಕಳಚಿತು. ತೆರೆಯ ಹಿಂದಿದ್ದವರು ಒಬ್ಬೊಬ್ಬರಾಗಿ ಮುಂದಕ್ಕೆ ಬಂದರು. ಧರ್ಮಸ್ಥಳದ ವಿರುದ್ಧ ‘ಎಐ’ ವಿಡಿಯೋ ಮೂಲಕ ಅಪಪ್ರಚಾರ ನಡೆಸಿದ್ದ ಸಮೀರ್‌ನ ಪರವಾಗಿ ವಕಾಲತ್ತು ವಹಿಸಿದ್ದು ಕರ್ನಾಟಕ ಕಾಂಗ್ರೆಸ್ಸಿನ ಸಾಮಾಜಿಕ ನ್ಯಾಯ ವಿಭಾಗದ ಮುಖ್ಯಸ್ಥ ದ್ವಾರಕಾನಾಥ್.

ತಮ್ಮ ಜತೆ ಸಮೀರ್ ಇದ್ದನೆಂದು ಸ್ವತಃ ದ್ವಾರಕಾನಾಥ್ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿದ್ದರು. ಒಂದೆಡೆ ಕಾಂಗ್ರೆಸ್ಸಿನವರು ಧರ್ಮಸ್ಥಳದ ಪರವಾಗಿ ತಾವು ನಿಂತಿದ್ದೇವೆಂದು ಹೇಳು ತ್ತಾರೆ, ಮತ್ತೊಂದೆಡೆ ತಮ್ಮದೇ ಪಕ್ಷದ ಪದಾಧಿಕಾರಿ ಅಪಪ್ರಚಾರ ನಡೆಸಿದ ಸಮೀರ್‌ನ ಪರವಾಗಿ ನಿಲ್ಲುತ್ತಾರೆ.

ಇದನ್ನೂ ಓದಿ: Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪ ಪ್ರಚಾರದಲ್ಲಿ ಭಾಗಿಯಾಗಿರುವ ಮತ್ತೊಬ್ಬ ವ್ಯಕ್ತಿ ಬಾಲನ್. ಈ ವ್ಯಕ್ತಿಯ ಮಾತುಗಳನ್ನು ಕೇಳಿದರೆ ನಗಲೂ ಆಗದು, ಅಳಲೂ ಆಗದು. ಒಮ್ಮೆ ಮಾಧ್ಯಮದಲ್ಲಿ ನಡೆಯುತ್ತಿದ್ದ ಚರ್ಚೆಯೊಂದರಲ್ಲಿ ‘ಭಾರತ್ ಮಾತಾ ಕಿ ಜೈ’ ಹೇಳಿಕೆಯು ಸಂವಿಧಾನ ವಿರೋಧಿ ಎಂದು ಹೇಳಿದ್ದ ನಟೋರಿಯಸ್ ಎಡಚರ ವ್ಯಕ್ತಿ ಈ ಬಾಲನ್.

ಬಾಯಿ ಬಿಟ್ಟರೆ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಈ ವ್ಯಕ್ತಿಯ ಚಾಳಿ. ತಾವೊಬ್ಬ ನಾಸ್ತಿಕ ಎಂದು ಹೇಳಿಕೊಂಡು ಇವರು ಹಿಂದೂ ಧರ್ಮದ ಮೇಲೆ ಸದಾ ಕೆಂಡ ಕಾರುತ್ತಿರುತ್ತಾರೆ. ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಹಾಸ್ಯನಟನಂತೆ ಮಾತನಾಡುವ ಈ ವ್ಯಕ್ತಿ, ತಾವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವುದು ತಿಳಿದಿದ್ದರೂ ಆಡುವ ಮಾತುಗಳನ್ನು ನಿಲ್ಲಿಸುವುದಿಲ್ಲ.

‘ಮೂರೂ ಬಿಟ್ಟವರು ಊರಿಗೆ ದೊಡ್ಡವರು’ ಎಂಬಂತಾಗಿದೆ ಇವರ ಜೀವನ. ತಮ್ಮ ಸುಳ್ಳುಗಳು ದಿನನಿತ್ಯ ಬೆತ್ತಲಾದರೂ ಹಿಂದೂ ಧರ್ಮದ ವಿರುದ್ಧ ನಾಲಿಗೆ ಹರಿಬಿಡುವ ಇವರ ಬುದ್ಧಿ ಮಾತ್ರ ಬದಲಾಗುವುದಿಲ್ಲ. ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಒಂದೊಂದಾಗಿ ಬಯಲಾಗುತ್ತಿದ್ದಂತೆ ಎಡಚರ ಪಟಾಲಂ ಒಂದು ಸಭೆ ನಡೆಸಿ ಮತ್ತೊಂದು ಸುತ್ತಿನ ಸುಳ್ಳಿನ ಕಥೆ ಹೆಣೆಯಲು ಪ್ರಾರಂಭಿ ಸಿತ್ತು.

ಈ ಸಭೆಯಲ್ಲಿ ಬಾಲನ್ ಧರ್ಮಸ್ಥಳದ ಬಗ್ಗೆ ಮಾತನಾಡುತ್ತಾ, 2,00,000/- ಕೋಟಿಯ ಸಾಮ್ರಾಜ್ಯ ವನ್ನು ವೀರೇಂದ್ರ ಹೆಗ್ಗಡೆ ಕಟ್ಟಿದ್ದಾರೆಂದು ಹೇಳುವ ಮೂಲಕ, ನಗರ ನಕ್ಸಲರ ಮೂಲ ಟಾರ್ಗೆಟ್ ಏನೆಂಬುದನ್ನು ಸ್ಪಷ್ಟವಾಗಿ ಹೇಳಿದ್ದರು.

ತಲೆಬುಡವಿಲ್ಲದ ಎಡಚರರ ವಾದ, ಲೆಕ್ಕಾಚಾರಗಳನ್ನು ಕೇಳಿ ಜನ ನಗುತ್ತಾರೆಂಬ ಸಣ್ಣ ಕಲ್ಪನೆ ಇವರಿಗೆ ಇರುವುದಿಲ್ಲ. ತಮ್ಮನ್ನು ತಾವು ಅತಿ ಬುದ್ಧಿವಂತರೆಂದು ತಿಳಿದು, ತಾವುಗಳು ನೀಡುವ ಹೇಳಿಕೆಗಳಿಗೆ ತಮ್ಮವರಿಂದಲೇ ಹೊಗಳಿಸಿಕೊಂಡು ಆಕಾಶದಲ್ಲಿ ತೇಲಾಡುತ್ತಿರುತ್ತಾರೆ.

ಧರ್ಮಸ್ಥಳದ ವಿರುದ್ಧದ ಅಪ ಪ್ರಚಾರದ ಹಿಂದೆ ಕೇಳಿಬರುತ್ತಿರುವ ಮತ್ತೊಂದು ಹೆಸರು ಕಾಂಗ್ರೆಸ್ಸಿನ ಸಂಸದ ಶಶಿಕಾಂತ್ ಸೆಂಥಿಲ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಯಾಗಿದ್ದ ಸೆಂಥಿಲ್ 2019ರಲ್ಲಿ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.

ಕಾಂಗ್ರೆಸ್ಸಿನ ನೆಹರು ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ನೇತೃತ್ವದ ಕೇಂದ್ರ ಸರಕಾರವು ಆಗ 2019ರಲ್ಲಿ ರದ್ದು ಪಡಿಸಿದ ಕೆಲವು ದಿನಗಳ ನಂತರ ಶಶಿಕಾಂತ್ ಸೆಂಥಿಲ್ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್ ಪಕ್ಷದಿಂದ ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದಿಂದ 2024ರಲ್ಲಿ ಚುನಾವಣೆ ಗೆದ್ದು ಸಂಸದರಾಗಿದ್ದಾರೆ. ಶಶಿಕಾಂತ್ ಸೆಂಥಿಲ್ ಕೆಲವು ಮಾಧ್ಯಮಗಳಿಗೆ ನೀಡಿರುವ ಸಂದರ್ಶನವನ್ನು ಗಮನಿಸಿದರೆ ಅವರ ಹಿಂದೂ ವಿರೋಧಿ ಮನಸ್ಥಿತಿ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಶಶಿಕಾಂತ್ ಸೆಂಥಿಲ್‌ರ ಸಂದರ್ಶನ ನಡೆಸುವ ಮಾಧ್ಯಮದ ನಿರೂಪಕರು ಮರುಪ್ರಶ್ನೆಯನ್ನು ಕೇಳದೆ, ಅವರು ಹೇಳಿದ ನಿರೂಪಣೆಗಳನ್ನು ಸುಮ್ಮನೆ ಅನುಮೋದಿಸುತ್ತಾರೆ. ಬಾಬಾಸಾಹೇಬರ ಸಂವಿಧಾನದ ಬಗ್ಗೆ ತಮ್ಮ ಸಂದರ್ಶನದಲ್ಲಿ ಮಾತನಾಡುವ ಶಶಿಕಾಂತ್ ಸೆಂಥಿಲ್,‌ ಬಾಬಾ ಸಾಹೇಬರು ವಿರೋಧಿಸಿದ್ದ ಸಂವಿಧಾನದ ಪರಿಚ್ಛೇದ 370ನ್ನು ರದ್ದು ಪಡಿಸಿದ ಕೆಲವು ದಿನಗಳಲ್ಲಿ ತಮ್ಮ ವೃತ್ತಿಗೆ ರಾಜೀನಾಮೆ ಘೋಷಿಸಿದ್ದರು.

ಸೆಂಥಿಲ್ ತಮ್ಮ ಸಂದರ್ಶನ ಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ಸುಳ್ಳುಗಳನ್ನು ಹೇಳುವುದು ಸ್ಪಷ್ಟವಾಗಿ ಕಾಣುತ್ತದೆ. ತಮ್ಮ ಜೀವನದಲ್ಲಿ ಒಮ್ಮೆಯೂ ಸಂಘದ ಶಾಖೆಗೆ ಹೋಗದ ಈ ವ್ಯಕ್ತಿ ಬಾಯಿಗೆ ಬಂದಂತೆ ಸುಳ್ಳುಗಳನ್ನು ಪೋಣಿಸು ತ್ತಾರೆ,

ಪೋಷಕ ನಟನಂತೆ ತಮ್ಮ ನಟನಾ ಶೈಲಿಯ ಮೂಲಕ ಅವನ್ನು ಹೇಳುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಟಾರ್ಗೆಟ್ ಹಿಂದೂಗಳೆಂಬ ಹಸಿ ಸುಳ್ಳನ್ನು ನಟನಾ ಶೈಲಿಯಲ್ಲಿ ಹೇಳುತ್ತಾರೆ. 80:20 ಅನುಪಾತದ ನಿಯಮದಡಿಯಲ್ಲಿ ಹಿಂದೂ ಧರ್ಮವನ್ನು ಸಂಘದ ಮೇಲ್ವರ್ಗ ದವರು ಹತೋಟಿಗೆ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಹಿಂದೂಗಳ ನಡುವೆ ತಾರತಮ್ಯವಿದೆಯೆಂದು ಪದೇ ಪದೆ ಸುಳ್ಳು ಹೇಳುತ್ತಾರೆ. ಇವರು ತಾವು ಹೇಳುವ ಸುಳ್ಳು ನಿರೂಪಣೆಗಳಿಗೆ ಒಂದೇ ಒಂದು ಸಾಕ್ಷ್ಯ ನೀಡುವುದಿಲ್ಲ, ಅವರ ಮಾತನ್ನು ಕೇಳಿಸಿಕೊಳ್ಳುವ ನಿರೂಪಕರು ಮರುಪ್ರಶ್ನೆಯನ್ನು ಹಾಕುವು ದಿಲ್ಲ.

ಶಶಿಕಾಂತ್ ಸೆಂಥಿಲ್ ತಮಿಳುನಾಡಿನ ಮುಖ್ಯವಾಹಿನಿ ಮಾಧ್ಯಮಗಳಿಗೆ ಹೆಚ್ಚಿನ ಸಂದರ್ಶನ ನೀಡದೆ ಆನ್‌ಲೈನ್ ವೇದಿಕೆಗಳಲ್ಲಿ ಹೆಚ್ಚಾಗಿ ಮಾತನಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು 100 ವರ್ಷಗಳನ್ನು ಪೂರೈಸುತ್ತಿದೆ; ಸಮಾಜದಲ್ಲಿರುವ ತಾರತಮ್ಯವನ್ನು ಹೋಗಲಾಡಿಸಿ ಹಿಂದೂಗಳನ್ನು ಒಗ್ಗೂಡಿಸುವುದು ಸಂಘದ ಮೂಲ ಉದ್ದೇಶ.

ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಜಾತಿಗಳ ಬಗ್ಗೆ ಚರ್ಚೆ ಆಗುವುದೇ ಇಲ್ಲ. ಮಹಾತ್ಮ ಗಾಂಧಿಯವರು ನಾಗಪುರದ ಶಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಂಡಂಥ ಹಿಂದೂ ಸಮಾಜದ ಸಾಮರಸ್ಯದ ಬಗ್ಗೆ ಹೊಗಳಿದ್ದಾರೆ.

ಈಶಾನ್ಯ ಭಾರತದ ಕಾಡುಗಳಲ್ಲಿ ವಾಸವಾಗಿದ್ದ ಪರಿಶಿಷ್ಟ ಪಂಗಡದ ಜನರನ್ನು ಮುಖ್ಯವಾಹಿನಿಗೆ ತರಲು ಸಂಘದ ಪ್ರಚಾರಕರು ದಶಕಗಳ ಕಾಲ ಶ್ರಮ ಪಟ್ಟಿದ್ದಾರೆ. ಭಾರತೀಯ ಜನತಾ ಪಕ್ಷವು ‘ದಲಿತ ವಿರೋಧಿ’ ಎಂಬಂತೆ ಹಸಿ‌ ಸುಳ್ಳು ಹೇಳುವ ಶಶಿಕಾಂತ್ ಸೆಂಥಿಲ್, ಗುಡ್ಡಗಾಡು ಪ್ರದೇಶ ದಿಂದ ಬಂದಿರುವ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅವರು ಭಾರತೀಯ ಜನತಾ ಪಕ್ಷದ ಅವಧಿಯಲ್ಲಿ ರಾಷ್ಟ್ರಪತಿಯಾಗಿದ್ದಾರೆಂಬುದನ್ನು ಹೇಳುವುದಿಲ್ಲ.

ಸಮಾಜದಲ್ಲಿನ ತೀರಾ ಹಿಂದುಳಿದ ಜಾತಿಗಳನ್ನು ಮುನ್ನೆಲೆಗೆ ತರುವ ಕೆಲಸವನ್ನು, ಸಂಘದಲ್ಲಿ ಎಲೆಮರೆಯ ಕಾಯಿಗಳಂತಿರುವ ಅನೇಕ ಪ್ರಚಾರಕರು ಇಂದಿಗೂ ನಿರಂತರವಾಗಿ ಮಾಡುತ್ತಿದ್ದಾರೆ. ಎಡಚರರ ದೊಡ್ಡ ಸಮಸ್ಯೆ ಎಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕೆಲಸ ಮಾಡುತ್ತಿರು ವವರು ತಮ್ಮ ಜಾತಿಯನ್ನು ಹೇಳಿಕೊಳ್ಳುವುದಿಲ್ಲ, ಹಾಗಾಗಿ ಎಡಚರರು ಎಲ್ಲರನ್ನೂ ಬ್ರಾಹ್ಮಣ ರೆಂದುಕೊಂಡಿದ್ದಾರೆ.

ಶಶಿಕಾಂತ್ ಸೆಂಥಿಲ್ ನೀಡಿರುವ ಹಲವು ಸಂದರ್ಶನಗಳು ಕೇವಲ ಭಾಷಣವಾಗಿವೆ. ಪರ ವಿರೋಧದ ಚರ್ಚೆಗೆ ಈ ವ್ಯಕ್ತಿ ಬರುವುದಿಲ್ಲ. ಸೆಂಥಿಲ್ ನೀಡುವ ಹೇಳಿಕೆಗಳಿಗೆ ಸಂದರ್ಶಕರು ಮರುಪ್ರಶ್ನೆ ಹಾಕುವುದಿಲ್ಲ. ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ಮತ್ತು ನಗರ ನಕ್ಸಲರು ನಡೆಸಿದ ಅಪಪ್ರಚಾರವು ಕೂಡ ‘ಒನ್ ವೇ’. ಮುಕ್ತ ಚರ್ಚೆಗೆ ಆಹ್ವಾನಿಸಿದರೆ ಈ ಗ್ಯಾಂಗ್ ಬರುವು ದಿಲ್ಲ.

ಶಶಿಕಾಂತ್ ಸೆಂಥಿಲ್ ನೀಡಿರುವ ಸಂದರ್ಶನಗಳನ್ನು ಗಮನಿಸಿದರೆ ಆ ವ್ಯಕ್ತಿಯ ಹಿಂದೂ ವಿರೋಧಿ ಮನಸ್ಥಿತಿ ಸ್ಪಷ್ಟವಾಗಿ ತಿಳಿಯುತ್ತದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ ದಲ್ಲಿ, ಕಾಂಗ್ರೆಸ್ ಪಕ್ಷದ ‘ವಾರ್ ರೂಮ’ನಲ್ಲಿ ಈ ವ್ಯಕ್ತಿ ಕೆಲಸ ಮಾಡುತ್ತಿದ್ದರೆಂಬ ಸತ್ಯ ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಪಕ್ಷ 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ನಡೆಸಿದ ‘ಪೇಸಿಎಂ’ ಅಭಿಯಾನದ ಮಾಸ್ಟರ್ ಮೈಂಡ್ ಶಶಿಕಾಂತ್ ಸೆಂಥಿಲ್ ಎಂದು ಹೇಳಲಾಗುತ್ತದೆ.

ಚುನಾವಣೆ ಮುಗಿದ ನಂತರ ಸ್ವತಃ ಡಿ.ಕೆ.ಶಿವಕುಮಾರ್, ‘ಅದು ಕೇವಲ ಮಾರ್ಕೆಟಿಂಗ್ ಪ್ರಚಾರ’ ಎಂದು ಹೇಳುವ ಮೂಲಕ, ನಡೆಸಿದ ಅಭಿಯಾನವೇ ಸುಳ್ಳೆಂದು ಗೊತ್ತಾಗಿತ್ತು. ‘ಪೇಸಿಎಂ’ ಸುಳ್ಳನ್ನು ಪ್ರಚಾರ ಮಾಡುವುದರ ಹಿಂದೆ ಶಶಿಕಾಂತ್ ಸೆಂಥಿಲ್ ಇದ್ದದ್ದು ನಿಜವಾದರೆ, ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರವನ್ನು ಅದೇ ಮಾದರಿಯಲ್ಲಿ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿರುವುದರ ಹಿಂದೆ ಸೆಂಥಿಲ್ ಇರಬಹುದೆಂಬ ಅನುಮಾನವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕಾಗಿ ಹೆಚ್ಚಾಗಿ ಸಾಮಾಜಿಕ ಜಾಲ ತಾಣ ಗಳನ್ನು ಬಳಸಿಕೊಳ್ಳಲಾಗಿತ್ತು. ‘ಪೇಸಿಎಂ’ ಎಂಬ ಸುಳ್ಳು ಅಭಿಯಾನವನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಲಾಗಿತ್ತು. ಜೈನರು ಹಿಂದೂಗಳ ದೇವಸ್ಥಾನವನ್ನು ನಡೆಸುತ್ತಿದ್ದಾ ರೆಂಬುದು ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರದಲ್ಲಿ ಎಡಚರರು ಆರಂಭಿಸಿದ ಹೊಸ ನಿರೂಪಣೆ.

ಮುಸ್ಲಿಂ ಯುವಕ ಸಮೀರ್ ಹಿಂದೂ ದೇವಸ್ಥಾನದ ಬಗ್ಗೆ ‘ಎಐ’ ವಿಡಿಯೋ ಮಾಡಿ ಅಪಪ್ರಚಾರ ನಡೆಸಿದರೆ ನಗರ ನಕ್ಸಲರಿಗೆ ತಕರಾರಿಲ್ಲ, ಆದರೆ ಧರ್ಮಸ್ಥಳದ ಆಡಳಿತದ ಬಗ್ಗೆ ಮಾತ್ರ ಇವರ ತಕರಾರು. ಧರ್ಮಸ್ಥಳದ ಮಂಜುನಾಥನನ್ನು ಪೂಜೆ ಮಾಡುವವರು ಹಿಂದೂಗಳೆಂಬ ಸಾಮಾನ್ಯ ಜ್ಞಾನ ಎಡಚರರಿಗಿಲ್ಲ.

ಎಡಚರರು ಧರ್ಮಸ್ಥಳದ ವಿರುದ್ಧ ತಾವು ನಡೆಸಿದ ಅಪಪ್ರಚಾರವನ್ನು ನಿಜವೆಂದು ಬಿಂಬಿಸಲು ಪ್ರತಿನಿತ್ಯ ಹೇಳುತ್ತಿರುವ ಸುಳ್ಳುಗಳನ್ನು ಗಮನಿಸಿದರೆ, 1996ರಲ್ಲಿ ಅನಂತ್‌ನಾಗ್ ಅಭಿನಯದ ‘ಸಮಯಕ್ಕೊಂದು ಸುಳ್ಳು’ ಸಿನಿಮಾ ನೆನಪಾಗುತ್ತದೆ. ಒಟ್ಟಿನಲ್ಲಿ ಹಿಂದೂಗಳ ಶ್ರದ್ದಾ ಕೇಂದ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಪ್ರತಿಯೊಂದು ಸುಳ್ಳು ನಿರೂಪಣೆಗಳನ್ನು ಹಿಂದೂ ಸಮಾಜ ಸತತವಾಗಿ ಬೆತ್ತಲಾಗಿಸುತ್ತಿರುವುದರಿಂದಾಗಿ ನಗರ ನಕ್ಸಲರ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ.