ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಘೋರ ಘಟನೆ; ಗರ್ಭಿಣಿ ಫೋಟೊಶೂಟ್​ ವೇಳೆ ನೀರಿನ ತೊಟ್ಟಿಗೆ ಬಿದ್ದು ಮೊದಲ ಮಗು ಸಾವು

Maternity Photoshoot Tragedy: ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ ಘಟನೆ ನಡೆದಿದೆ. ಮೆಟರ್ನಿಟಿ ಫೋಟೊಶೂಟ್​ ಮಾಡಿಸಿಕೊಳ್ಳುತ್ತಿದ್ದ ಸಂತಸದ ಸಮಯದಲ್ಲೇ ಮೊದಲ ಮಗುವನ್ನು ದಂಪತಿ ಕಳೆದುಕೊಂಡಿರುವುದು ದುರಂತವಾಗಿದೆ. ಮೂರು ವರ್ಷದ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ನೆಲಮಂಗಲ: ಬೆಂಗಳೂರಿನ ಹೊರವಲಯದ ಮಾದನಾಯಕಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘೋರ ಘಟನೆ (Maternity Photoshoot Tragedy) ನಡೆದಿದೆ. ಗರ್ಭಿಣಿಯೊಬ್ಬರ ಫೋಟೊಶೂಟ್​ ವೇಳೆ ನೀರಿನ ತೊಟ್ಟಿಗೆ ಬಿದ್ದು ಮೊದಲ ಮಗು ಸಾವನ್ನಪ್ಪಿದ್ದು, ಇದರಿಂದ ಎರಡನೇ ಮಗು ನಿರೀಕ್ಷೆಯಲ್ಲಿದ್ದ ದಂಪತಿಗೆ ದೊಡ್ಡ ಆಘಾತವಾಗಿದೆ.

ಲಕ್ಷ್ಮೀರ್ ಮೃತಪಟ್ಟ ಬಾಲಕನಾಗಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೂರು ವರ್ಷದ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮೆಟರ್ನಿಟಿ ಫೋಟೊಶೂಟ್​ ಮಾಡಿಸಿಕೊಳ್ಳುತ್ತಿದ್ದ ಸಂತಸದ ಸಮಯದಲ್ಲೇ ಮೊದಲ ಮಗುವನ್ನು ದಂಪತಿ ಕಳೆದುಕೊಂಡಿರುವುದು ದುರಂತವಾಗಿದೆ.

ಪೋಟೊ ಶೂಟ್ ಸ್ಥಳದಲ್ಲಿ ಮೊದಲ ಮಗನನ್ನು ಬಿಟ್ಟು ದಂಪತಿ ಫೋಟೋ ತೆಗೆಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದರು. ಈ ವೇಳೆ ಆಟವಾಡುತ್ತಿದ್ದ ಬಾಲಕ ಅಲ್ಲೇ ಇದ್ದ ವೇಳೆ ಸಣ್ಣ ನೀರಿನ ಪೂಲ್​​ಗೆ ಬಿದ್ದು ಮೃತಪಟ್ಟಿದ್ದಾನೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Road Accident: ಹೊಸಕೋಟೆಯಲ್ಲಿ ಭೀಕರ ರಸ್ತೆ ಅಪಘಾತ, 7 ಮಂದಿ ಸಾವು

ನೆಲಮಂಗಲ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ; ಐವರು ಯುವಕರ ಸಾವು

ಬೆಂಗಳೂರು: ನೆಲಮಂಗಲ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿದದು, ಈ ವೇಳೆ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಮಕೂರಿನಿಂದ ಬರುತ್ತಿದ್ದ ಇಂಡಿಕಾ ಕಾರು, ನೆಲಮಂಗಲ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಎದುರು ದಿಕ್ಕಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಬಸ್‌ನ ಮುಂಭಾಗಕ್ಕೂ ತೀವ್ರ ಹಾನಿಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಂದಾಲ್ ಮೇಲ್ಸೇತುವೆ ಬಳಿ ರಾತ್ರಿ 11.30ರ ವೇಳೆಗೆ ಅವಘಡ ಸಂಭವಿಸಿದೆ. ಅತಿವೇಗದ ಚಾಲನೆಯೇ ಅಪಘಾತ್ರೆ ಕಾರಣ ಎನ್ನಲಾಗಿದೆ.