ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಬ್ಬನ್‌ ಪಾರ್ಕ್‌ʼಗಳ ಮೀನುಗಳ ಮಾರಣ ಹೋಮ

ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಹಾಗೂ ಸುತ್ತಮುತ್ತ ಪ್ರದೇಶಗಳಿಂದ ಹರಿಯುತ್ತಿರುವ ಕೊಳಚೆ ನೀರು ದುರ್ವಾಸನೆ ಬೀರಿದ್ದು, ನಡಿಗೆದಾರರು ಸಾರ್ವಜನಿಕರು ಮುಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಪಾರ್ಕ್ ಸಿಬ್ಬಂದಿ ಕೊಳಚೆ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವು ದರಿಂದ ಪಾರ್ಕ್ ಪರಿಸ್ಥಿತಿ ಹದಗೆಟ್ಟಿದೆ.

ವೈಭವ ಸಿ.ಕೊಳ್ಳಿ, ಬೆಂಗಳೂರು

ದುರ್ವಾಸನೆ ಬೀರುತ್ತಿರುವ ನೀರು, ನಡಿಗೆದಾರರು ಬೇಸರ

ಪಾರ್ಕ್ ನಿರ್ವಹಣಾ ಸಿಬ್ಬಂದಿ ವಿರುದ್ಧ ಆಕ್ರೋಶ

ನಗರದ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಪರಿಸರ ಮಾಲಿನ್ಯದಿಂದ ನೀರು ವಿಷಯ ವಾಗಿದೆಯೇ ಎನ್ನುವ ಅನುಮಾನ ಶುರುವಾಗಿದೆ. ಪಾರ್ಕ್‌ʼನೊಳಗಿರುವ ಲೋಟಸ್ ಕೊಳದಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಪರಿಸರ ಪ್ರೇಮಿಗಳು ಹಾಗೂ ಕಬ್ಬನ್ ಪಾರ್ಕ್ ಪಾದಚಾರಿಗಳಿಗೆ ಆತಂಕ ಮೂಡಿಸಿದೆ.

ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಹಾಗೂ ಸುತ್ತಮುತ್ತ ಪ್ರದೇಶಗಳಿಂದ ಹರಿಯುತ್ತಿರುವ ಕೊಳಚೆ ನೀರು ದುರ್ವಾಸನೆ ಬೀರಿದ್ದು, ನಡಿಗೆದಾರರು ಸಾರ್ವಜನಿಕರು ಮುಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಪಾರ್ಕ್ ಸಿಬ್ಬಂದಿ ಕೊಳಚೆ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಪಾರ್ಕ್ ಪರಿಸ್ಥಿತಿ ಹದಗೆಟ್ಟಿದೆ.

ಕಬ್ಬನ್ ಪಾರ್ಕ್ ಲೋಟಸ್ ಕೊಳದಲ್ಲಿ ಸಾವಿರಾರು ಮೀನುಗಳು ಮೃತಪಟ್ಟು, ತೇಲುತ್ತಿರುವುದು ಪತ್ತೆಯಾಗಿದೆ. ಮಳೆ ಸಮಯದಲ್ಲಿ ಒಳಚರಂಡಿ ನೀರು ಕ್ವೀ ಪಾರ್ಕ್ ರಸ್ತೆ ಮೂಲಕ ಪಾರ್ಕ್ ಸೇರುತ್ತಿದ್ದು, ಹಳೆಯ ರಾಜಕಾಲುವೆ ಮೂಲಕ ಬಾಂಬೂ ಗ್ರೋವ್, ವೆಟ್‌ಲ್ಯಾಂಡ್ ಪ್ರದೇಶಗಳನ್ನು ದಾಟಿ ಕೊನೆಗೆ ಲೋಟಸ್ ಕೊಳಕ್ಕೆ ಹರಿಯುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್

ಒಳಚರಂಡಿ ಅಥವಾ ಮಳೆನೀರಿನ ಜತೆ ಮಿಶ್ರಣಗೊಂಡ ಮಾಲಿನ್ಯ ನೀರು ಕೊಳಕ್ಕೆ ಸೇರುತ್ತಿರುವು ದರಿಂದ ನೀರಿನ ಗುಣಮಟ್ಟ ಹದಗೆಟ್ಟು, ಆಮ್ಲಜನಕ ಪ್ರಮಾಣ ಕುಸಿದ ಪರಿಣಾಮ ಮೀನುಗಳು ಸಾವನ್ನಪ್ಪಿವೆ ಎಂದು ಮೂಲಗಳು ತಿಳಿಸಿವೆ. ಪಾರ್ಕ್‌ʼನಲ್ಲಿ ನಿರ್ವಹಣಾ ಕಾರ್ಯಗಳು ಸಹ ಕುಂಟಿತಗೊಂಡಿದೆ.

Screenshot_2

ತೋಟಗಾರಿಕೆ ಇಲಾಖೆಯ ಅನೇಕ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವು ದರಿಂದ ನಿಯಮಿತ ಸ್ವಚ್ಛತೆ, ಕೊಂಬೆ ತೆರವು ಸೇರಿದಂತೆ ಮೂಲಭೂತ ಕಾರ್ಯಗಳು ನಡೆಯು ತ್ತಿಲ್ಲ. ಇತ್ತೀಚಿನ ಮಳೆಯ ಪರಿಣಾಮವಾಗಿ ಬಿದ್ದ ಮರದ ಕೊಂಬೆಗಳು ಇನ್ನೂ ತೆರವುಗೊಳ್ಳದಿರು ವುದು ಪರಿಸ್ಥಿತಿಯ ತೀವ್ರತೆಯನ್ನು ತೋರಿಸುತ್ತದೆ.

ಪಕ್ಷಿಗಳು ಹಾಗೂ ಇತರೆ ಸಣ್ಣ ಪ್ರಾಣಿಗಳಿಗೆ ಆಶ್ರಯವಾಗಿರುವ ಈ ಪ್ರದೇಶದಲ್ಲಿ ಇಂತಹ ಘಟನೆ ಮರುಕಳಿಸಿದರೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ತಕ್ಷಣ ಸಂಬಂಧ ಪಟ್ಟ ಇಲಾಖೆ ಕ್ರಮ ಕೈಗೊಂಡು, ಕಲುಷಿತ ನೀರಿನ ಪ್ರವಾಹವನ್ನು ತಡೆಯಬೇಕು ಹಾಗೂ ಕೊಳ ದಲ್ಲಿ ಸ್ವಚ್ಛತೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

image

ಸುತ್ತಮುತ್ತಲಿನ ಅಂಡರ್‌ಗ್ರೌಂಡ್ ಮೂಲಸೌಕರ್ಯಗಳು, ವಿಶೇಷವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಭಾಗಗಳಿಂದ ಕಪ್ಪು, ದುರ್ವಾಸನೆಯ ನೀರನ್ನು ಪಾರ್ಕ್ ಒಳಗೆ ಪಂಪ್ ಮಾಡಲಾಗುತ್ತಿದೆ. ಇದರಿಂದ ನೀರಿನ ಗುಣಮಟ್ಟ ಸಂಪೂರ್ಣ ಹದಗೆಟ್ಟಿದೆ.

-ಉಮೇಶ್.ಎಸ್. ಅಧ್ಯಕ್ಷ, ಕಬ್ಬನ್‌ಪಾರ್ಕ್ ವಾಕರ್ಸ್ ಅಸೋಸಿಯೇಷನ್
image

ಇದು ಕೇವಲ ಮೀನುಗಳ ಸಮಸ್ಯೆ ಅಲ್ಲ, ಇಲ್ಲಿ ಪಕ್ಷಿಗಳು ಕೂಡ ಇದನ್ನೇ ಕುಡಿಯುತ್ತವೆ. ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ಮಾಡಬಾರದು.

- ಅನಿಲ್ ಕುಮಾರ್ ಪರಿಸರ ಪ್ರೇಮಿ