ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bangalore News: ​ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ

​ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ​ಡಾ.ಸುದರ್ಶನ್ ಕುಮಾರ್. ಡಿ, ಪ್ರಾಂಶುಪಾಲರು, ಎ.ಪಿ.ಎಸ್ ಸಂಜೆ ಪದವಿ ಕಲಾ ಮತ್ತು ವಾಣಿಜ್ಯ ಕಾಲೇಜು, ಸಮುದಾಯ ರಂಗ ತಂಡ ಕಲಾವಿದರು ಹಾಗೂ ಸಂಪನ್ಮೂಲ ವ್ಯಕ್ತಿ-ಶಿಕ್ಷಣ ಹಾಗೂ ಸಂಸ್ಥೃತಿ ಅಧ್ಯಯನ. ಇವರು ಭಾಷೆಯ ಮಹತ್ವ, ಅಧ್ಯಯನದಲ್ಲಿ ಭಾಷೆಯ ಪಾತ್ರ ಮತ್ತು ಸಂಸ್ಕೃತಿ-ಭಾಷೆಯ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಪ್ರೇರಣಾದಾಯಿಕ ಉಪನ್ಯಾಸ ನೀಡಿದರು.

​ಬೆಂಗಳೂರು: ಶ್ರೀ ರೇವಣ ಸಿದ್ಧೇಶ್ವರ ಎಜುಕೇಶನ್ ಟ್ರಸ್ಟ್ (ರಿ.) ನ ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾ, ಚೊಕ್ಕನಹಳ್ಳಿ, ಚಿಕ್ಕಜಾಲ, ಬೆಂಗಳೂರು ಸಂಸ್ಥೆಯಲ್ಲಿ ಬಿ.ಎ.ಎಲ್.ಎಲ್.ಬಿ ಮತ್ತು ಎಲ್.ಎಲ್.ಬಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ "ಕನ್ನಡ ಕಲರವ" ಕನ್ನಡ ರಾಜ್ಯೋತ್ಸವ(Kannada rajyotsava) ಆಯೋಜಿಸಲಾಗಿತ್ತು.

​ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ​ಡಾ.ಸುದರ್ಶನ್ ಕುಮಾರ್. ಡಿ, ಪ್ರಾಂಶುಪಾಲರು, ಎ.ಪಿ.ಎಸ್ ಸಂಜೆ ಪದವಿ ಕಲಾ ಮತ್ತು ವಾಣಿಜ್ಯ ಕಾಲೇಜು, ಸಮುದಾಯ ರಂಗ ತಂಡ ಕಲಾವಿದರು ಹಾಗೂ ಸಂಪನ್ಮೂಲ ವ್ಯಕ್ತಿ-ಶಿಕ್ಷಣ ಹಾಗೂ ಸಂಸ್ಥೃತಿ ಅಧ್ಯಯನ. ಇವರು ಭಾಷೆಯ ಮಹತ್ವ, ಅಧ್ಯಯನದಲ್ಲಿ ಭಾಷೆಯ ಪಾತ್ರ ಮತ್ತು ಸಂಸ್ಕೃತಿ-ಭಾಷೆಯ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಪ್ರೇರಣಾದಾಯಿಕ ಉಪನ್ಯಾಸ ನೀಡಿದರು.

ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ

​ನಾರಾಯಣ್ ಜಿ., ವಕೀಲರು, ಬೆಂಗಳೂರು. ಇವರು ಕಾನೂನು ವೃತ್ತಿಯ ಮೌಲ್ಯಗಳು, ನಿಯಮಗಳು ಮತ್ತು ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

​ಪ್ರೊಫೆಸರ್ ಬೋರೇಗೌಡ, ವಿ.ವಿ.ಪುರಂ ಕಾನೂನು ಕಾಲೇಜು, ಬೆಂಗಳೂರು. ಇವರು ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ನಡುವೆ ಕನ್ನಡ ಮಾಧ್ಯಮದ ಮಕ್ಕಳು ಅನುಭವಿಸುವ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಮಾತನಾಡಿ, ಅವುಗಳನ್ನು ಧೈರ್ಯವಾಗಿ ಎದುರಿಸಲು ಪ್ರೋತ್ಸಾಹಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ಕೃಷ್ಣಪ್ಪ, ಮಾಜಿ ಸಚಿವರು, ಜನ ಸೇವಕರು ಹಾಗೂ ಅಧ್ಯಕ್ಷರು ಕೆ.ಪಿ.ಸಿ.ಸಿ.ಮುಖಂಡರು, ಶ್ರೀ ರೇವಣ ಸಿದ್ಧೇಶ್ವರ ಎಜುಕೇಶನ್ ಟ್ರಸ್ಟ್ ವಹಿಸಿದ್ದರು.

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆರ್. ಕೃಷ್ಣಪ್ಪ ಹಾಗೂ ಇತರ ಅತಿಥಿ ಗಣ್ಯರು ಬಹುಮಾನ ವಿತರಿಸಿದರು.

​ಶ್ರೀ ಕೇಶವ್ ಕೃಷ್ಣಪ್ಪ, ನಿರ್ದೇಶಕರು, ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾ. ​ಡಾ.ಎಂ.ಆರ್. ಶಿವಕುಮಾರ್, ಪ್ರಾಂಶುಪಾಲರು, ರೇವಣ ಸಿದ್ಧೇಶ್ವರ ಇನ್ಸ್ಟಿಟ್ಯೂಟ್ ಆಫ್ ತಂತ್ರಜ್ಞಾನ. ರಮ್ಯಾ ಎ.ಎಸ್., ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು, ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾ. ಮುಂತಾದ ಗಣ್ಯರು ಉಪಸ್ಥಿತರಿದ್ದರು.