ಬೆಂಗಳೂರು: ಯೋಗಕ್ಷೇಮ ಮೀಡಿಯಾ ಪ್ರೈವೇಟ್ ಲಿಮಿಟೆಡ್, ವಿಶ್ವಂ ವೈಚಾರಿಕ ವಾಹಿನಿ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಜನವರಿ 30 ರಂದು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗಾಂಧಿ ಸ್ಮರಣಾರ್ಥ ಆಯೋಜಿಸಲಾಗಿದ್ದ ಪತ್ರಿಕಾ ವಿತರಕರ ಬದುಕಿನ ಕುರಿತಾದ ಏಕವ್ಯಕ್ತಿ ರಂಗ ಪ್ರದರ್ಶನ "ನಸುಕಿನ ನೊಗ" ನಾಟಕದ ಪ್ರದರ್ಶನದ ಸಂದರ್ಭದಲ್ಲಿ ವಿಶ್ವವಾಣಿ (Vishwavani) ಪತ್ರಿಕೆಯ ಪ್ರಧಾನ ಸಂಪಾದಕರಾದ ( Vishweshwar Bhat) ವಿಶ್ವೇಶ್ವರ ಭಟ್ಟರಿಗೆ ಪ್ರದಾನ ಮಾಡಬೇಕಾಗಿದ್ದ ಗಾಂಧಿ ಪುರಸ್ಕಾರ (Gandhi Award) ಪ್ರಶಸ್ತಿಯನ್ನು ಇಂದು ವಿಶ್ವವಾಣಿ ಕಚೇರಿಯಲ್ಲಿ ನೀಡಲಾಯಿತು.
ಪತ್ರಿಕಾ ವಿತರಕರ ಸಂಕಷ್ಟಗಳ ಬಗ್ಗೆ ಚರ್ಚಿಸಿದ ವಿಶ್ವೇಶ್ವರ ಭಟ್ಟರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ , ಮುಂಬರುವ ಬಜೆಟ್ ನಲ್ಲಿ ಪತ್ರಿಕಾ ವಿತರಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಲು ವಿಶ್ವವಾಣಿ ಪತ್ರಿಕೆಯ ಮುಖಾಂತರ ಹಕ್ಕೊತ್ತಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವಂ ವಾಹಿನಿಯ ಸಿ ಇ ಓ ಹಾಗೂ ನಸುಕಿನ ನೊಗ ನಾಟಕದ ನಿರ್ದೇಶಕರಾದ ನಾಟಕ ಬ್ರಹ್ಮ ಡಾ. ಎಸ್ ಎಲ್ ಎನ್ ಸ್ವಾಮಿ ವತ್ಸ, ಮಂಡ್ಯ ರವಿ, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೆ ಶಂಭುಲಿಂಗ, ಕಾರ್ಯದರ್ಶಿ ಜಗದೀಶ್, ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಚಲುವರಾಜು (ರಘು) ಉಪಸ್ಥಿತರಿದ್ದರು.