ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒಂದೇ ದಿನ ಸಾವಿರ ತಂಡಗಳಿಂದ ಚಿನ್ನ ಖರೀದಿ: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಇಂದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಸಾಧನೆ

ಕೌಶಲ್ಯ ಮತ್ತು ಕಲಾ ಸಂವೇದನೆಯ ಈ ವಿನೂತನ ಸಂಗಮ ಕಾರ್ಯಕ್ರಮದಲ್ಲಿ ಕರುಣೆ, ಶಕ್ತಿ ಮತ್ತು ನಿತ್ಯ ಸೌಂದರ್ಯದ ಚಿಹ್ನೆಯಾದ ದೇವಿ ದುರ್ಗೆಯ ನವ ರೂಪಗಳಿಗೆ ಗೌರವ ನಮನ ಸಲ್ಲಿಸುವ “ಸ್ವರ್ಣಾರ್ಪಣಂ – ಶಕ್ತಿಯ ನವರತ್ನ ” ಕಾರ್ಯಕ್ರಮ ಪ್ರಸ್ತುತವಾಗಲಿದೆ. ಸಂಜೆ 5.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಡಾ. ಅನುರಾಧ ವಿಕ್ರಾಂತ್ ಹಾಗೂ ದೃಷ್ಟಿ ಡ್ಯಾನ್ಸ್ ಎನ್ಸೆಂಬರ್ ತಂಡ ಈ ವಿನೂತನ ಕಾರ್ಯಕ್ರಮವನ್ನು ಪ್ರಸ್ತುಪಡಿಸುತ್ತಿದೆ.

ಬೆಂಗಳೂರು: ಚಿನ್ನದ ದರ ಏರಿಕೆ ನಡುವೆಯೂ ಬೆಂಗಳೂರಿನಲ್ಲಿ ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ತಂಡಗಳು ಚಿನ್ನ ಖರೀದಿ ಮಾಡಿ ಮೂಲಿಯಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆ ನಿರ್ಮಿಸಿದ್ದು, ಇದರ ಸಂಭ್ರಮಾಚರಣೆಯ ಪ್ರಯುಕ್ತ ಹಾಗೂ ಸ್ಥಾಪಕರ ದಿನಾಚರಣೆ ಪ್ರಯುಕ್ತ ಡಿಕನ್ಸ್‌ ಸನ್‌ ರಸ್ತೆಯ ಮಣಿಪಾಲ್‌ ಸೆಂಟರ್‌ ನಲ್ಲಿ ಡಿ.7 ರಂದು ಬೆಂಗಳೂರು ಮುಳಿಯಾ ಹಾಗೂ ದೃಷ್ಟಿ ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಸ್ವರ್ಣಾರ್ಪಣಂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ಶಕ್ತಿಯ, ನವರತ್ನಗಳ , ಪಾರಂಪರೆ, ಕಲೆ ಹಾಗೂ ಮಹಿಳಾ ದೈವೀ ಶಕ್ತಿಯನ್ನು ಆಚರಿಸುವ ವಿಷಯಾಧಾರಿತ ಆಭರಣ ಪ್ರದರ್ಶನ ಸಹ ಏರ್ಪಡಿಸಲಾಗಿದೆ.

ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್

ಕೌಶಲ್ಯ ಮತ್ತು ಕಲಾ ಸಂವೇದನೆಯ ಈ ವಿನೂತನ ಸಂಗಮ ಕಾರ್ಯಕ್ರಮದಲ್ಲಿ ಕರುಣೆ, ಶಕ್ತಿ ಮತ್ತು ನಿತ್ಯ ಸೌಂದರ್ಯದ ಚಿಹ್ನೆಯಾದ ದೇವಿ ದುರ್ಗೆಯ ನವ ರೂಪಗಳಿಗೆ ಗೌರವ ನಮನ ಸಲ್ಲಿಸುವ “ಸ್ವರ್ಣಾರ್ಪಣಂ – ಶಕ್ತಿಯ ನವರತ್ನ ” ಕಾರ್ಯಕ್ರಮ ಪ್ರಸ್ತುತವಾಗಲಿದೆ.

muliya

ಸಂಜೆ 5.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಡಾ. ಅನುರಾಧ ವಿಕ್ರಾಂತ್ ಹಾಗೂ ದೃಷ್ಟಿ ಡ್ಯಾನ್ಸ್ ಎನ್ಸೆಂಬರ್ ತಂಡ ಈ ವಿನೂತನ ಕಾರ್ಯಕ್ರಮವನ್ನು ಪ್ರಸ್ತುಪಡಿಸುತ್ತಿದೆ. ಪ್ರತಿ ಪ್ರದರ್ಶನದ ಬಳಿಕ “ಸ್ವರ್ಣ ನಡಿಗೆ” — ಪರಂಪರೆಯ ಆಭರಣ ರ್ರಾಂಪ್ ಮೇಲೆ ಸ್ವರ್ಣ ನಡಿಗೆ ಪ್ರದರ್ಶನ ನಡೆಯಲಿದೆ. ನವ ರತ್ನ ಸಂಗ್ರಹದ — ಮಾಣಿಕ್ಯ, ಮುಕ್ತ, ಮರಕತ, ಹವಳ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ, ವೈಢೂರ್ಯ ಮತ್ತಿತರೆ ಆಭರಣಗಳ ವಿನೂತನ ವಿನ್ಯಾಸಗಳನ್ನು ಪ್ರದರ್ಶಿಸಲಾಗುತ್ತಿದೆ.