ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಬ್ಲೂ ಲೈನ್ ಸಂಚಾರಕ್ಕೆ ಸಿದ್ಧತೆ

Blue Line Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದೆ. ನಗರದ ಪ್ರಮುಖ ಐಟಿ ಕಾರಿಡಾರ್ ಅನ್ನು ಸಂಪರ್ಕಿಸುವ ಬ್ಲೂ ಲೈನ್ ಮಾರ್ಗದ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈ ಮಾರ್ಗವನ್ನು ಶೀಘ್ರದಲ್ಲೇ ಸಾರ್ವಜನಿಕರಿಗಾಗಿ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ಆರಂಭಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದೆ. ನಗರದ ಪ್ರಮುಖ ಐಟಿ ಕಾರಿಡಾರ್ ಅನ್ನು ಸಂಪರ್ಕಿಸುವ ಬ್ಲೂ ಲೈನ್ (Blue Line Metro) ಮಾರ್ಗದ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈ ಮಾರ್ಗವನ್ನು ಶೀಘ್ರದಲ್ಲೇ ಸಾರ್ವಜನಿಕರಿಗಾಗಿ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ಆರಂಭಿಸಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂವರೆಗೆ ಸುಮಾರು 19 ಕಿಲೋಮೀಟರ್ ಉದ್ದದ ಬ್ಲೂ ಲೈನ್ ಮಾರ್ಗ ನಿರ್ಮಾಣವಾಗಿದೆ.

ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಈ ಮಾರ್ಗದಲ್ಲಿ ಅಕ್ಟೋಬರ್ ತಿಂಗಳಿನಿಂದ ಪ್ರಾಯೋಗಿಕ ಸಂಚಾರ ಸಾಧ್ಯತೆ ಹೆಚ್ಚಿದೆ. ಸುರಕ್ಷತಾ ಪರಿಶೀಲನೆಗಳು ಮತ್ತು ತಾಂತ್ರಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಸಂಚಾರಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಈ ಮಾರ್ಗದಲ್ಲಿ ಒಟ್ಟು 13 ಮೆಟ್ರೋ ನಿಲ್ದಾಣಗಳು ಇರಲಿದ್ದು, ಪ್ರಮುಖವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಹೆಚ್‌ಎಸ್‌ಆರ್ ಲೇಔಟ್, ಅಗಸರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕದಬೀಸನಹಳ್ಳಿ, ಮಾರತ್‌ಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ ಹಾಗೂ ಕೆ.ಆರ್.ಪುರಂ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ.

ಬ್ಲೂ ಲೈನ್ ಕಾರ್ಯಾರಂಭವಾದ ಬಳಿಕ ಔಟರ್ ರಿಂಗ್ ರೋಡ್ ಹಾಗೂ ಐಟಿ ಹಬ್ ಪ್ರದೇಶಗಳಲ್ಲಿ ಪ್ರತಿದಿನ ಎದುರಾಗುವ ಟ್ರಾಫಿಕ್ ಸಮಸ್ಯೆಗೆ ಸಾಕಷ್ಟು ಮಟ್ಟಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಅಂದಾಜಿನಂತೆ, ಅಗತ್ಯ ಪರೀಕ್ಷೆಗಳು ಮತ್ತು ಅನುಮೋದನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡರೆ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.

Bengaluru Metro fire: ಬೆಂಗಳೂರಿನ ನಾಗಸಂದ್ರ ಮೆಟ್ರೋ ಸ್ಟೇಷನ್‌ನಲ್ಲಿ ಬೆಂಕಿ ಅವಘಡ; ಆತಂಕದ ಸ್ಥಿತಿ ನಿರ್ಮಾಣ

ಮೆಟ್ರೋ ಲೈನ್‌ ವಿಸ್ತರಣೆ

ನಮ್ಮ ಮೆಟ್ರೋ' ಜಾಲವು ಮುಂಬರುವ ಮಾರ್ಚ್‌ 2028ರ ವೇಳೆಗೆ ಒಟ್ಟು 175 ಕಿಲೋಮೀಟರ್‌ಗೆ ವಿಸ್ತರಣೆಯಾಗಲಿದೆ. ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ ಶುಕ್ರವಾರ ಬಿಎಂಆರ್‌ಸಿಎಲ್‌ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಈ ಮಹತ್ವದ ಮಾಹಿತಿ ನೀಡಿದರು. ಪ್ರಸ್ತುತ ರಾಜಧಾನಿಯಲ್ಲಿ 96 ಕಿ.ಮೀ ಉದ್ದದ ಮೆಟ್ರೋ ಜಾಲ ಕಾರ್ಯಾಚರಣೆಯಲ್ಲಿದ್ದು, ಸದ್ಯ ಪ್ರಗತಿಯಲ್ಲಿರುವ ಪಿಂಕ್‌ ಲೈನ್‌ ಮತ್ತು ಬ್ಲೂ ಲೈನ್‌ ಕಾರಿಡಾರ್‌ಗಳು ಸಂಪೂರ್ಣವಾಗಿ ಮುಕ್ತಾಯಗೊಂಡರೆ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

Vishakha Bhat Heggar

View all posts by this author