ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Byrathi Basavaraj: ಪದವಿಯು ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ: ಶಾಸಕ ಭೈರತಿ ಬಸವರಾಜ್

ಅಂತಾರಾಷ್ಟ್ರೀಯ ಜನಪದ ಗಾಯಕ ಡಾ. ಅಮ್ಮರಾಮಚಂದ್ರ ಮಾತನಾಡಿ, ನಾವು ಗಳಿಸಿದ ಯಾವ ಪದವಿಯು ತಂದೆ ತಾಯಿಗಿಂತ ದೊಡ್ಡದಲ್ಲ. ಹೀಗಾಗಿ ನನ್ನ ಹೆಸರಿನೊಂದಿಗೆ ನಾನು ಅವರ ಹೆಸರನ್ನು ಸೇರಿಸಿಕೊಂಡಿದ್ದೇನೆ. ಅವರ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಸಾಧ್ಯವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಬಾರದು, ನಿರಂತರವಾಗಿ ಪ್ರಗತಿಯತ್ತ ಸಾಗುವ ಮೂಲಕ ಪ್ರಯತಿಸಬೇಕು ಎಂದು ಹೇಳಿದರು.

ಬೆಂಗಳೂರು: ಪದವಿ ಎಂಬುದು ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟ, ಹಾಗಾಗಿ ವಿದ್ಯಾರ್ಥಿ ಗಳು ಈ ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಶಾಸಕ ಭೈರತಿ ಬಸವರಾಜ್(Byrati Basavaraj) ಹೇಳಿದರು.

ಕೆ.ಆರ್.ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ್ & ರೆಂಜಸ್, ಯುವ ರೆಡ್ ಕ್ರಾಸ್ ಮತ್ತು ಮಹಿಳಾ ಸಬಲೀಕರಣ ಕೋಶ ಹಾಗೂ ಇತರೆ ಚಹಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ತಂದೆ-ತಾಯಿ ಕಷ್ಟ ಪಟ್ಟು ನಿಮ್ಮನ್ನು ಕಾಲೇಜಿಗೆ ಕಳುಹಿಸಿದ್ದಾರೆ ಎಂಬುದು ಎಂಬುದು ಸದಾ ನಿಮ್ಮ ನೆನಪಿನಲ್ಲಿರಲಿ. ನೀವು ಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೆ ಹೋಗುವುದೇ ನಿಮ್ಮ ತಂದೆ-ತಾಯಿಗೆ ಕೊಡುವ ಬಹುದೊಡ್ಡ ಉಡುಗೊರೆ ಎಂದು ಹೇಳಿದರು.

ಇದನ್ನೂ ಓದಿ: Byrati Suresh: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ: ಸಾರಿಗೆ ಸಚಿವ ಬೈರತಿ ಸುರೇಶ್

ಅಂತಾರಾಷ್ಟ್ರೀಯ ಜನಪದ ಗಾಯಕ ಡಾ. ಅಮ್ಮರಾಮಚಂದ್ರ ಮಾತನಾಡಿ, ನಾವು ಗಳಿಸಿದ ಯಾವ ಪದವಿಯು ತಂದೆ ತಾಯಿಗಿಂತ ದೊಡ್ಡದಲ್ಲ. ಹೀಗಾಗಿ ನನ್ನ ಹೆಸರಿನೊಂದಿಗೆ ನಾನು ಅವರ ಹೆಸರನ್ನು ಸೇರಿಸಿಕೊಂಡಿದ್ದೇನೆ. ಅವರ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಸಾಧ್ಯವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಬಾರದು, ನಿರಂತರವಾಗಿ ಪ್ರಗತಿಯತ್ತ ಸಾಗುವ ಮೂಲಕ ಪ್ರಯತಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರೊ. ರಾಮಕೃಷ್ಣ ರೆಡ್ಡಿ, ಪ್ರಾಂಶುಪಾಲರಾದ ಪ್ರೊ. ನಳಿನಿ ಆರ್. ಅಂತಾರಾಷ್ಟ್ರೀಯ ಕ್ರೀಡಾಪಟು ಕು. ಪೂಜಿತಾ ಎಂ.ಆರ್. ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.