ಬೆಂಗಳೂರು: ಬ್ರಿಗೇಡ್ ಹಾಸ್ಪಿಟಾಲಿಟಿ ವತಿಯಿಂದ ಬೇಸಿಗೆಯ ರಾಜ ಎಂದು ಕರೆಯಲಾಗುವ ಮಾವಿನ ಹಣ್ಣಿನ ಸವಿಯನ್ನು ಸಂಭ್ರಮಿಸಲು ದೇವನಹಳ್ಳಿಯ ಸಿಗ್ನೇಚರ್ ಕ್ಲಬ್ ರೆಸಾರ್ಟ್‌ನ ಟ್ಯಾಮರಿಂಡ್ ಮತ್ತು ಧಾಬಾ ಆನ್ ದ ಹೈವೇ ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಮಾವಿನ ಹಣ್ಣಿನ ಉತ್ಸವವನ್ನು ಆಯೋಜಿಸಲಾಗಿದೆ. ಮೇ 1ರಿಂದ ಆರಂಭಗೊಂಡಿರುವ ಈ ಉತ್ಸವವು ಜೂನ್ 30, 2026ರವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಲಭ್ಯವಿರಲಿದೆ.
ಇದನ್ನೂ ಓದಿ: Mango crop: ರಾಜ್ಯದ ಮಾವು ಬೆಳೆಗಾರರಿಗೆ ಗುಡ್ ನ್ಯೂಸ್: 2.5 ಲಕ್ಷ ಮೆ.ಟನ್ ಮಾವು ಖರೀದಿಗೆ ಕೇಂದ್ರ ಅನುಮೋದನೆ
ಈ ವಿಶೇಷ ಮೆನುದಲ್ಲಿ ರಾ ಮ್ಯಾಂಗೋ ಫಿಶ್ ಕರ್ರಿ, ಮ್ಯಾಂಗೋ ವೆಜಿಟೆಬಲ್ ಪುಲಾವ್, ಮ್ಯಾಂಗೋ ಚಿಕನ್ ಕರ್ರಿ, ಮ್ಯಾಂಗೋ ಪನೀರ್ ಕರ್ರಿ, ಆಮ್ರಸ್ ಜೊತೆ ಪೂರಿ, ಮ್ಯಾಂಗೋ ಚಟ್ನಿ ಮತ್ತು ದಾಲ್, ಹಾಗೂ ರಾ ಮ್ಯಾಂಗೋ ದಾಲ್ ಸೇರಿದಂತೆ ವಿವಿಧ ಸವಿರುಚಿಗಳು ಅತಿಥಿಗಳನ್ನು ಆಕರ್ಷಿಸಲಿವೆ. ಇದರ ಜೊತೆಗೆ ಮ್ಯಾಂಗೋ ಚೀಸ್‌ಕೇಕ್, ಮ್ಯಾಂಗೋ ಐಸ್ ಕ್ರೀಂ, ಮ್ಯಾಂಗೋ ಮೂಸ್, ಮ್ಯಾಂಗೋ ಫಿರ್ನಿ, ಮ್ಯಾಂಗೋ ಪೇಸ್ಟ್ರಿ ಮತ್ತು ತಾಜಾ ಕಟ್ ಮ್ಯಾಂಗೋ ಪ್ಲಾಟರ್ ಸೇರಿದಂತೆ ಸಿಹಿ ತಿನಿಸುಗಳೂ ವಿಶೇಷ ಆಕರ್ಷಣೆಯಾಗಿವೆ.
ಮಾವಿನ ಹಣ್ಣಿನ ವೈವಿಧ್ಯಮಯ ರುಚಿ ಮತ್ತು ಬಳಕೆಯನ್ನು ಸಂಭ್ರಮಿಸಲು ರೂಪುಗೊಂಡಿರುವ ಈ ಉತ್ಸವವು ಸಾಂಪ್ರದಾಯಿಕ ಮತ್ತು ಆಧುನಿಕ ಖಾದ್ಯಗಳ ಸಂಯೋಜನೆಯನ್ನು ಪರಿಚಯಿಸು ತ್ತದೆ. ಸಿಹಿ ಹಾಗೂ ಖಾರದ ತಿನಿಸುಗಳಲ್ಲಿ ಮಾವಿನ ಹಣ್ಣಿನ ವಿಶಿಷ್ಟ ಸವಿಯನ್ನು ಮನಮುಟ್ಟುವ ರೀತಿಯಲ್ಲಿ ಅಳವಡಿಸಲಾಗಿದೆ. ತಾಜಾ ಋತುಸಜ್ಜಿತ ಪದಾರ್ಥಗಳು ಮತ್ತು ಪ್ರಾದೇಶಿಕ ಸುವಾಸನೆ ಗಳಿಂದ ತಯಾರಿಸಲಾದ ಈ ವಿಶೇಷ ಆಹಾರ ಮೇಳವು ಬೇಸಿಗೆಯ ಸೊಗಡನ್ನು ಅನಾವರಣ ಗೊಳಿಸುತ್ತದೆ.
ಸಿಗ್ನೇಚರ್ ಕ್ಲಬ್ ರೆಸಾರ್ಟ್‌ನ ಆತ್ಮೀಯ ಮತ್ತು ಆಕರ್ಷಕ ವಾತಾವರಣದಲ್ಲಿ ನಡೆಯುತ್ತಿರುವ ಈ ಮಾವಿನ ಹಣ್ಣಿನ ಉತ್ಸವವು ಕುಟುಂಬಗಳು, ಆಹಾರ ಪ್ರಿಯರು ಹಾಗೂ ಮಾವಿನ ಹಣ್ಣಿನ ಅಭಿಮಾನಿಗಳಿಗೆ ವಿಶಿಷ್ಟ ಹಾಗೂ ಮನಮೋಹಕ ಆಹಾರ ಅನುಭವವನ್ನು ನೀಡಲಿದೆ.