ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gunashree Dance Performance: ಆ.31ರಂದು ನೃತ್ಯಕಲಾವಿದೆ ಗುಣಶ್ರೀಯ ನೃತ್ಯ ವೈಭವ!.

Gunashree Dance: ನಾಡಿನಾದ್ಯಂತ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ‘ಸಾಧನ ಸಂಗಮದ ‘ನೃತ್ಯ ನಿಪುಣ’ ತಂಡದ ಭಾಗವಾಗಿರುವ ಗುಣಶ್ರೀ, ಇದೀಗ ‘’ನೃತ್ಯಸುಗುಣ’’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ತನ್ನ ರಂಗಪ್ರವೇಶಕ್ಕೆ ಸಿದ್ಧಗೊಂಡಿದ್ದಾಳೆ. ಇದೀಗ ವಿಜಯನಗರದ ‘ಕಾಸಿಯಾ’ ಸಭಾಂಗಣದಲ್ಲಿ ಇದೇ ತಿಂಗಳ 31 ಭಾನುವಾರ ಬೆಳಗ್ಗೆ 10 ಗಂಟೆಗೆ ತಮ್ಮ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಉದಯೋನ್ಮುಖ ನೃತ್ಯಕಲಾವಿದೆ ಗುಣಶ್ರೀಯ ‘ನೃತ್ಯ  ವೈಭವ'!.

-

Profile Pushpa Kumari Aug 29, 2025 4:23 PM

ಬೆಂಗಳೂರು: ಉದಯೋನ್ಮುಖ ನೃತ್ಯಕಲಾವಿದೆ ಗುಣಶ್ರೀಯವರ ನೃತ್ಯ ಪ್ರದರ್ಶನ ಇದೇ ಭಾನುವಾರ ವಿಜಯನಗರದ ‘ಕಾಸಿಯಾ’ ಸಭಾಂಗಣದಲ್ಲಿ ನಡೆಯಲಿದೆ. ನಾಡಿನಾದ್ಯಂತ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ‘ಸಾಧನ ಸಂಗಮದ ‘ನೃತ್ಯ ನಿಪುಣ’ ತಂಡದ ಭಾಗವಾಗಿರುವ ಗುಣಶ್ರೀ, ಇದೀಗ ‘’ನೃತ್ಯಸುಗುಣ’’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ತನ್ನ ರಂಗಪ್ರವೇಶಕ್ಕೆ ಸಿದ್ಧಗೊಂಡಿದ್ದಾರೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಈ ನೃತ್ಯ ಪ್ರದರ್ಶನ ನಡೆಯಲಿದ್ದು, ನಾಟ್ಯಪ್ರಿಯರನ್ನು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಆಹ್ವಾನಿಸಲಾಗಿದೆ.

ಪ್ರಸಿದ್ಧ `ಸಾಧನ ಸಂಗಮ ಡಾನ್ಸ್ ಸೆಂಟರ್‘ ನ ನೃತ್ಯಗುರುದ್ವಯರಾದ ವಿ. ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ ಸಾಧನಶ್ರೀ ಅವರ ಕಾಳಜಿಪೂರ್ಣ ಭರತನಾಟ್ಯ ಮಾರ್ಗದರ್ಶನದಲ್ಲಿ ರೂಪುಗೊಂಡ ನೃತ್ಯಪ್ರತಿಭೆ ಕು. ಪಿ. ಗುಣಶ್ರೀ (Gunashree) ಬಹುಮುಖ ಪ್ರತಿಭೆ. ಸಂಗೀತ -ನಾಟ್ಯ ಗಳಲ್ಲಿ ಭರವಸೆಯ ಅಡಿಗಳನ್ನಿಡುತ್ತಿರುವ ಗುಣಶ್ರೀ ಬೆಂಗಳೂರಿನ ಎಸ್. ಪುಟ್ಟಸ್ವಾಮಿ ಮತ್ತು ಟಿ. ಸವಿತಾ ದಂಪತಿಗಳ ಪುತ್ರಿಯಾಗಿದ್ದು, ಕಳೆದ ಹನ್ನೆರಡು ವರ್ಷಗಳಿಂದ ಸತತ ಅಭ್ಯಾಸ- ಪರಿಶ್ರಮಗಳಿಂದ ನೃತ್ಯ ಕಲಿಯುತ್ತಿದ್ದಾರೆ. ಇವಳು ಗಂಧರ್ವ ಮಹಾಮಂಡಲದ 5 ಹಂತದ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ತೇರ್ಗಡೆಯಾಗಿರುವುದಲ್ಲದೆ, ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದು ಜಯಶೀಲಳಾಗಿದ್ದಾರೆ.

Gunashree ..

ಬಿಕಾಂ ಫೈನಲ್ ತರಗತಿಯಲ್ಲಿ ಓದುತ್ತಿರುವ ಗುಣಶ್ರೀ, ಕವಿತಾ ರಚನೆ, ಚಿತ್ರಕಲೆ, ಯೋಗ ಮತ್ತು ಕ್ರೀಡೆಯಲ್ಲೂ ಮುಂದಿದ್ದು, 20 ಸಂಶೋಧನಾ ಪ್ರಬಂಧಗಳನ್ನು ಬರೆದು ಮಂಡಿಸಿರುವ ವೈಶಿಷ್ಟ್ಯ ಪಡೆದಿದ್ದಾರೆ. ನಾಡಿನಾದ್ಯಂತ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ‘ಸಾಧನ ಸಂಗಮ’ ದ ‘ನೃತ್ಯ ನಿಪುಣ’ ತಂಡದ ಭಾಗ ವಾಗಿರುವ ಗುಣಶ್ರೀ, ಇದೀಗ ‘’ನೃತ್ಯಸುಗುಣ’’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ತನ್ನ ರಂಗಪ್ರವೇಶಕ್ಕೆ ಸಿದ್ಧಗೊಂಡಿದ್ದಾರೆ.

ಇದನ್ನು ಓದಿ:Peddi Movie: 40 ವರ್ಷದ ರಾಮ್‌ ಚರಣ್‌ ತಾಯಿ ಪಾತ್ರಕ್ಕೆ 33 ವರ್ಷದ ಸ್ವಾಸಿಕಾಗೆ ಆಫರ್‌; ʼಪೆದ್ದಿʼ ಚಿತ್ರದ ಬಗ್ಗೆ ನಟಿ ಹೇಳಿದ್ದೇನು?