ಬೆಂಗಳೂರು, ಮಾ. 26: ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ವಿಶೇಷ ಪ್ರಶಸ್ತಿಗೆ (Havyaka Special Award) ಸಾಧಕರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 29ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ 83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಪ್ರಶಸ್ತಿ ಪ್ರದಾನ ನಡೆಯಲಿದೆ.
2025-26ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ವಿವರ
ಹವ್ಯಕ ವಿಭೂಷಣ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ-ತಾಳಮದ್ದಳೆ ಅರ್ಥಧಾರಿ, ಸಾಹಿತಿ. ಎಸ್. ಶಂಭು ಭಟ್ ಕಡತೋಕ- ಶಿಕ್ಷಣ ತಜ್ಞ, ಸಾಂಸ್ಕೃತಿಕ ರಾಯಭಾರಿ.
ಹವ್ಯಕ ಭೂಷಣ: ನೀರ್ನಳ್ಳಿ ಗಣಪತಿ- ಚಿತ್ರ ಕಲಾವಿದ. ಡಾ. ವೈ.ವಿ. ಕೃಷ್ಣಮೂರ್ತಿ- ಪಶು ತಜ್ಞ, ದೇಶಿ ಗೋವು ಸಂವರ್ಧಕ. ಉಮೇಶ ಬಂದಗದ್ದೆ- ಉದ್ಯಮಿ, ಶಿಕ್ಷಣ ಪೋಷಕ.
ಹವ್ಯಕ ಶ್ರೀ: ಪೂರ್ಣಿಮಾ ಕೆ. ಭಟ್- ಕಸೂತಿ ಉದ್ಯಮ. ವೇ. ಮೂ. ಸುಚೇತನ ಭಟ್- ಯಜುರ್ವೇದ ಘನಪಾಠಿ. ಆನಂದ ಹೆಗಡೆ ಶೀಗೇಹಳ್ಳಿ- ಸಮಾಜ ಸೇವೆ, ಪ್ರತ್ಯೂಷ ಕುಮಾರ್- ಯುವ ಕ್ರಿಕೆಟರ್.
ಹವ್ಯಕ ಸೇವಾಶ್ರೀ: ಡಾ. ಬಿ.ವಿ. ನರಹರಿ ರಾವ್- ಹಿರಿಯ ಸಂಚಾಲಕ. ಬೋನಂತಾಯ ಶಿವಶಂಕರ ಭಟ್- ಹಿರಿಯ ನಿರ್ದೇಶಕ. ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ- ಹವ್ಯಕ ವಧೂ-ವರ ವೇದಿಕೆ ಸಂಚಾಲಕ.
ಪ್ರಶಸ್ತಿ ಆಯ್ಕೆ ಹೇಗೆ?
ಸಮಾಜದ ಅರ್ಹ ಸಾಧಕರನ್ನು ಗುರುತಿಸಿ, ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರು ಪ್ರಶಸ್ತಿಗೆ ಹೆಸರು ಸೂಚಿಸಬಹುದು. ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗೆಯೇ ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ 'ಪಲ್ಲವ' ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಸಿಎಂ ಘೋಷಣೆ; ಹವ್ಯಕ ಮಹಾಸಭಾ, ವಿಶ್ವೇಶ್ವರ ಭಟ್ ಸ್ವಾಗತ
'ಹವ್ಯಕ' ಮಾಸಪತ್ರಿಕೆಯ ವಜ್ರಮಹೋತ್ಸವ-ವಿಶೇಷ ಸಂಚಿಕೆ ಲೋಕಾರ್ಪಣೆ
ಹವ್ಯಕ ಮಹಾಸಭೆಯ ಮುಖವಾಣಿ 'ಹವ್ಯಕ' ಪತ್ರಿಕೆಯು 1966ರ ಜೂನ್‌ನಲ್ಲಿ ಆರಂಭವಾಗಿದ್ದು, ನಿರಂತರವಾಗಿ 60 ವರ್ಷಗಳಿಂದ ಪ್ರಕಟವಾಗುತ್ತಿದೆ. ಪ್ರತಿ ತಿಂಗಳು ಸುಮಾರು 30,000 ಕುಟುಂಬಗಳನ್ನು ತಲುಪುತ್ತಿದ್ದು, ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಯ ವಜ್ರ ಮಹೋತ್ಸವದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಹೊರತರಲಾಗುತ್ತಿದೆ. ಮಾರ್ಚ್ 29ರಂದು ಸಂಚಿಕೆಯ ಲೋಕಾರ್ಪಣೆಯೂ ನಡೆಯಲಿದೆ. ಈ ವೇಳೆ ಪತ್ರಿಕೆಯಲ್ಲಿ ಸಂಪಾದಕರು ಹಾಗೂ ಸಂಚಾಲಕರಾಗಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆ ಪ್ರಕಟಣೆಯಲ್ಲಿ ತಿಳಿಸಿದೆ.