ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Department: ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ; ಯಾವಾಗ ಕೌನ್ಸ್‌ಲಿಂಗ್‌ ಶುರು?

ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೌನ್ಸಲಿಂಗ್‌ ಮೂಲಕ ವರ್ಗಾವಣೆ ಮಾಡಲಾಗುತ್ತದೆ. 2026 ರ ಮೊದಲ ದಿನ ದಿನದಿಂದಲೇ ಕೌನ್ಸಲಿಂಗ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ವೇಳಾಪಟ್ಟಿಯನ್ನು ಹೊರಡಿಸಿದೆ.

ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

Vishakha Bhat Vishakha Bhat Aug 6, 2025 11:35 AM

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೌನ್ಸಲಿಂಗ್‌ ಮೂಲಕ (Health Department) ವರ್ಗಾವಣೆ ಮಾಡಲಾಗುತ್ತದೆ. 2026 ರ ಮೊದಲ ದಿನ ದಿನದಿಂದಲೇ ಕೌನ್ಸಲಿಂಗ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ವೇಳಾಪಟ್ಟಿಯನ್ನು ಹೊರಡಿಸಿದೆ. ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಎ,ಬಿ,ಸಿ,ಡಿ ಗ್ರುಪ್‌ ನೌಕರರ ವರ್ಗಾವಣೆಗೆ 2026 ನೇ ಸಾಲಿನಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು. ಇದಕ್ಕಾಗಿ ಆಯಾ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಚಾಲಕರ ಆರೋಗ್ಯದ ಮೇಲೆ ನಿಗಾ ವಹಿಸಲು ಮುಂದಾಗಿದೆ. ಇದಕ್ಕಾಗಿ ಹೊಸ ನಿಯಮ ರೂಪಿಸಲು ರೂಪುರೇಷೆ ಸಿದ್ಧಪಡಿಸಿದೆ. ಅದರಂತೆ ಆಟೋ, ಕ್ಯಾಬ್, ಬಸ್​​ ಚಾಲಕರಿಗೆ ಡಿಎಲ್ (ಚಾಲನಾ ಪರವಾನಗಿ)​ ಹೇಗೆ ಕಡ್ಡಾಯವೋ ಅದೇ ರೀತಿ ಇನ್ಮುಂದೆ , ಹೆಲ್ತ್​ ಚೆಕಪ್​ ಸರ್ಟಿಫಿಕೇಟ್​ (ಹೆಲ್ತ್ ಕಾರ್ಡ್) ಕಡ್ಡಾಯ ಮಾಡಲು ಚಿಂತನೆ ನಡೆಸಿದೆ. ಚಾಲಕರಿಗೆ ಇಸಿಜಿ, ಬಿಪಿ, ಶುಗರ್​ ಪರೀಕ್ಷೆ ಮಾಡಿಸಿ ಅವರು ಫಿಟ್​ ಇದ್ದಾರೋ ಇಲ್ಲವೋ ಎಂಬ ಪ್ರಮಾಣಪತ್ರ ನೀಡಲಾಗುತ್ತದೆ.

ಡಿಎಲ್​ ಪಡೆಯುವಾಗ, ರಿನೀವಲ್ ಮಾಡಿಸುವಾಗ, ಜೊತೆಗೆ ಎಫ್​ಸಿ ಮಾಡಿಸುವಾಗ ಚಾಲಕರಿಗೆ ಹೆಲ್ತ್ ಕಾರ್ಡ್​ ನೀಡುವಂತೆ ಇಲಾಖೆ ನಿಯಮ ರೂಪಿಸಲಿದೆ. ಈಗಾಗಲೇ ಸಂಬಂಧ ಪಟ್ಟ ಸಾರಿಗೆ ಇಲಾಖೆ, ಟ್ರಾಫಿಕ್ ಪೊಲೀಸ್ ಇಲಾಖೆ ಜೊತೆಗೆ ಕೂಡಾ ಚರ್ಚಿಸಿದ್ದು, ಆರೋಗ್ಯ ಇಲಾಖೆಯಿಂದಲೇ ಹೆಲ್ತ್​ ಚೆಕಪ್ ಮಾಡಿಸಬೇಕಾ ಅಥವಾ, ಬೇರೆಡೆಯಿಂದ ಪ್ರಮಾಣಪತ್ರ ಸಲ್ಲಿಕೆ ಮಾಡಲು ಸೂಚಿಸಬೇಕೇ ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Fact Check: ಸಮೋಸಾ, ಜಿಲೇಬಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿರೋ ಎಚ್ಚರಿಕೆ ನಿಜವೇ? ಸರ್ಕಾರ ಹೇಳೋದೇನು?

ಇನ್ನು ರಾಜ್ಯಾದ್ಯಂತ ಸರ್ಕಾರಿ ಆಂಬುಲೆನ್ಸ್‌ ಸಮಸ್ಯೆಯ ಕುರಿತು ದೂರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ನಿರ್ವಹಣೆ ಮಾಡಲು ಪ್ರಕ್ರಿಯೆ ಶುರು ಮಾಡಿದೆ. ಅದರಂತೆ 108 ಅನ್ನು ಸರ್ಕಾರವೇ ನಿರ್ವಹಣೆ ಮಾಡಲಿದೆ. ಖಾಸಗಿ ಅವರಿಗೆ ಕೊಡುವ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆ ಆಗುತ್ತಿತ್ತು. ಹೀಗಾಗಿ ನಾವೇ ಇದನ್ನು ನಿರ್ವಹಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ದಿನೇಶ್‌ ಗುಂಡುರಾವ್‌ ತಿಳಿಸಿದ್ದಾರೆ.