ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fact Check: ಸಮೋಸಾ, ಜಿಲೇಬಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿರೋ ಎಚ್ಚರಿಕೆ ನಿಜವೇ? ಸರ್ಕಾರ ಹೇಳೋದೇನು?

ಶುಭ ಸಮಾರಂಭಗಳು, ಸಣ್ಣಪುಟ್ಟ ಕಾರ್ಯಕ್ರಮಗಳು ಎಂದಾಗ ಎಲ್ಲರಿಗೂ ನೆನಪಾಗುವುದು ಸಮೋಸಾ (samosa), ಲಡ್ಡು (laddu) ಮತ್ತು ಜಿಲೇಬಿ (jalebi). ಆದರೆ ಇದು ಆರೋಗ್ಯಕರ ಆಹಾರವಲ್ಲ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಆಹಾರಗಳ ಬಗ್ಗೆ ಆರೋಗ್ಯ ಇಲಾಖೆ (Health Department ) ಎಚ್ಚರಿಕೆ ನೀಡಿದೆ ಎನ್ನಲಾಗುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮ ಮಾಹಿತಿ ಬ್ಯೂರೋ ( Press Information Bureau) ನೀಡಿರುವ ಸ್ಪಷ್ಟನೆ ಇಲ್ಲಿದೆ.

ಸಮೋಸಾ, ಜಿಲೇಬಿ ಬಗ್ಗೆ ಎಚ್ಚರಿಕೆ.. ಈ ಸುದ್ದಿಯ ಅಸಲಿಯತ್ತೇನು?

ನವದೆಹಲಿ: ಶುಭ ಸಮಾರಂಭಗಳು, ಸಣ್ಣಪುಟ್ಟ ಕಾರ್ಯಕ್ರಮಗಳು ಎಂದಾಗ ಎಲ್ಲರಿಗೂ ನೆನಪಾಗುವುದು ಸಮೋಸಾ (samosa), ಲಡ್ಡು (laddu) ಮತ್ತು ಜಿಲೇಬಿ (jalebi). ಆದರೆ ಇದು ಆರೋಗ್ಯಕರ ಆಹಾರವಲ್ಲ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಆಹಾರಗಳ ಬಗ್ಗೆ ಆರೋಗ್ಯ ಇಲಾಖೆ (Health Department ) ಎಚ್ಚರಿಕೆ ನೀಡಿದೆ ಎನ್ನಲಾಗುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ (Fake news). ಇಂತಹ ಯಾವುದೇ ಎಚ್ಚರಿಕೆಯನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿಲ್ಲ ಎಂದು ಮಾಧ್ಯಮ ಮಾಹಿತಿ ಬ್ಯೂರೋ ( Press Information Bureau) ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಸೂಚಿಸಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಇತ್ತೀಚೆಗೆ ಸಮೋಸಾ, ಜಿಲೇಬಿ ಮತ್ತು ಲಡ್ಡುಗಳ ಸೇವನೆ ಆರೋಗ್ಯಕರವಲ್ಲ ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ ಎಂಬ ವದಂತಿಗಳನ್ನು ಹರಡಲಾಗಿತ್ತು. ಆದರೆ ಇದು ಒಂದು ಸುಳ್ಳು ಸುದ್ದಿ ಎಂದು ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ಹೇಳಿದೆ.

ನಿರ್ದಿಷ್ಟ ಆಹಾರ ಪದಾರ್ಥಗಳ ಬಗ್ಗೆ ಆರೋಗ್ಯ ಇಲಾಖೆಯು ಯಾವುದೇ ಎಚ್ಚರಿಕೆ ನೀಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಈ ಸುದ್ದಿ ಸುಳ್ಳು ಎಂದು ಅದು ತನ್ನ ಹೇಳಿಕೆಯ ಮೂಲಕ ಸ್ಪಷ್ಟ ಪಡಿಸಿದೆ. ಭಾರತದ ಜನಪ್ರಿಯ ತಿಂಡಿಗಳಾದ ಸಮೋಸಾ, ಜಿಲೇಬಿ ಮತ್ತು ಲಡ್ಡು ಸೇವನೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯು ಎಚ್ಚರಿಕೆ ನೀಡಿದೆ ಎನ್ನುವ ಸುಳ್ಳು ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ ಎಂದು ಮಾಧ್ಯಮ ಮಾಹಿತಿ ಬ್ಯೂರೋದ ಸತ್ಯ ಶೋಧನಾ ಘಟಕ ಮಂಗಳವಾರ ತಿಳಿಸಿದೆ.



ಸಾಂಪ್ರದಾಯಿಕ ಭಾರತೀಯ ತಿಂಡಿಗಳ ಬಗ್ಗೆ ಯಾವುದೇ ನಿರ್ದಿಷ್ಟ ಸೂಚನೆ ನೀಡಲಾಗಿಲ್ಲ. ಸಮೋಸಾ, ಲಡ್ಡು, ಜಿಲೇಬಿ ದೇಶಾದ್ಯಂತ ಸ್ಥಳೀಯವಾಗಿ ತಯಾರಿಸಿ ಮಾರಾಟ ಮಾಡುವ ಆಹಾರ ಪದಾರ್ಥಗಳು. ಇವುಗಳ ಬಗ್ಗೆ ನಿರ್ದಿಷ್ಟವಾಗಿ ಆರೋಗ್ಯ ಇಲಾಖೆ ಯಾವ ಎಚ್ಚರಿಕೆಯನ್ನು ಕೂಡ ನೀಡಿಲ್ಲ ಎಂದು ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಿಐಬಿ, ಸಮೋಸಾ, ಜಿಲೇಬಿ ಮತ್ತು ಲಡ್ದುಗಳಂತಹ ಆಹಾರ ಉತ್ಪನ್ನಗಳ ಮೇಲೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ ಎಂದು ಕೆಲವು ಮಾಧ್ಯಮಗಳು ಹೇಳಿವೆ. ಇದು ಸುಳ್ಳು. ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಯಲ್ಲಿ ಮಾರಾಟಗಾರರು ಮಾರಾಟ ಮಾಡುವ ಆಹಾರ ಉತ್ಪನ್ನಗಳ ಮೇಲೆ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ. ಭಾರತೀಯ ಸಾಂಪ್ರದಾಯಿಕ ತಿಂಡಿಗಳ ಕಡೆಗೆ ವಿಶೇಷ ಸೂಚನೆ ನೀಡಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: Kiara Advani-Sidharth: ʻಟಾಕ್ಸಿಕ್‌ʼ ನಟಿ ಕಿಯಾರಾ ಅಡ್ವಾಣಿಗೆ ಹೆಣ್ಣು ಮಗು

ಸುಳ್ಳು ಸುದ್ದಿ ಏನು ?

ಸಮೋಸಾ, ಜಿಲೇಬಿ, ಲಡ್ಡು ತಿನ್ನುವ ಮೊದಲು ಯೋಚಿಸಿ. ಈ ಸಿಹಿ, ಕರಿದ ತಿನಿಸುಗಳಲ್ಲಿ ಸಕ್ಕರೆ ಮತ್ತು ಎಣ್ಣೆ ಅಂಶ ಎಷ್ಟೆಂಬ ಮಾಹಿತಿಯನ್ನು ಬಹಿರಂಗವಾಗಿ ಗ್ರಾಹಕರಿಗೆ ಪ್ರದರ್ಶಿಸುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ದೇಶಾದ್ಯಂತ ಮಕ್ಕಳು ಮತ್ತು ಯುವಜನತೆಯಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆಗೆ ಕಡಿವಾಣ ಹಾಕಲು ಆರೋಗ್ಯ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ ಎನ್ನುವ ಸುಳ್ಳು ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿತ್ತು.