ಬೆಂಗಳೂರು: ಸ್ಟಿಂಗ್ ಆಪರೇಶನ್ ವಿವಾದ ಮಂಗಳವಾರ ತೀವ್ರ ವಿವಾದದ ಸ್ವರೂಪ ಪಡೆದಿದೆ. ಎಲ್ಲರ ಮೇಲೂ ಸ್ಟಿಂಗ್ ಆಪರೇಶನ್ ನಡೆಯುತ್ತಿದೆ ಹುಷಾರಾಗಿರಿ ಎಂದು ತನ್ನ ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಶುರುವಾದ ವಿವಾದ, ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಮಧ್ಯಪ್ರವೇಶದಿಂದ ಭಾರೀ ವಾಗ್ವಾದಕ್ಕೆ ಕಾರಣವಾಗಿದೆ.
ಇಡೀ ಸ್ಟಿಂಗ್ ಆಪರೇಶನ್ಗಳ ಹಿಂದಿರುವುದೇ ಡಿಕೆಶಿ ಎಂದು ಆರೋಪಿಸಿದ್ದ ಕುಮಾರಸ್ವಾಮಿ ಮಂಗಳವಾರ ಮತ್ತೆ ಪತ್ರಿಕಾಗೋಷ್ಠಿ ನಡೆಸಿ, ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ, ಸದಾಶಿವನಗರದಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನಿಟ್ಟು ಕೊಂಡು ಫೋನ್ ಕದ್ದಾಲಿಕೆ ನಡೆಯುತ್ತಿದೆ.
ಮುಖ್ಯಮಂತ್ರಿ ಆಗಿರುವ ವ್ಯಕ್ತಿ ತನ್ನ ಸಚಿವರ ಮೇಲೆಯೇ ನಿಗಾಯಿಟ್ಟರೆ ಕಥೆಯೇನು ಪ್ರಶ್ನೆಯೆತ್ತಿ ದ್ದಾರೆ. ಇದು ಹೇಳಿಕೆ ಪ್ರತಿ ಹೇಳಿಕೆಗಳಿಗೆ ಕಾರಣವಾಗುವುದರ ಮೂಲಕ ಪ್ರಕರಣ ಜೇನುಗೂಡಾಗಿದೆ. ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು, ನಾನು ಅಮಿತ್ ಶಾ ಜೊತೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಎಚ್ʼಡಿಕೆ ಒಳ್ಳೆಯ ವಿಚಾರ ಪ್ರಸ್ತಾಪಿಸಿದ್ದಾರೆ, ಅದು ಯಾರಿಗೆ ತನಿಖೆಗೆ ಕೊಡುತ್ತಾರೋ ಕೊಡಲಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Karnataka Sting Operation: ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ವಿಡಿಯೊ ಪ್ರಸಾರ ಮಾಡದಂತೆ ಕೋರ್ಟ್ನಿಂದ ಪ್ರತಿಬಂಧಕಾದೇಶ
ಎಚ್ಡಿಕೆ ಹೇಳಿದ್ದು: ಹಿಂದೆ ಮಾಜಿ ಮುಖ್ಯಮಂತ್ರಿ ಒಬ್ಬರ ವಿರುದ್ಧ ಸ್ಟಿಂಗ್ ಮಾಡಿದರು, ಆಮೇಲೆ ರಮೇಶ್ ಜಾರಕಿಹೊಳಿ ಅವರನ್ನು ಮುಗಿಸಿದರು, ಅದಾದ ಮೇಲೆ ಅದೇ ಸಮುದಾಯದ ಕೆ.ಎನ್.ರಾಜಣ್ಣ ಅವರನ್ನು ತೆಗೆದರು. ನಮ್ಮ ಪಕ್ಷದ ನಾಯಕನೇ ಸಿಡಿ ಫ್ಯಾಕ್ಟರಿ ನಡೆಸುತ್ತಿದ್ದಾನೆ ಎಂದು ರಾಜಣ್ಣ ಹೇಳಿದರೂ ಆಮೇಲೆ ಅವರ ಬಾಯಿ ಮುಚ್ಚಿಸಿದರು. ಈಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಈ ಕುತಂತ್ರಕ್ಕೆ ನೀವು ಹೆದರಬಾರದು. ಸ್ಟಿಂಗ್ಗಳ ಮೂಲಕ ಜನರನ್ನು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಕೆಟ್ಟ ಸಂಸ್ಕೃತಿ ನಿಲ್ಲಬೇಕು ಎಂದರು.
ಡಿಕೆ ತಿರುಗೇಟು: ದೆಹಲಿಯಲ್ಲಿ ಮಾತನಾ ಡಿರುವ ಶಿವಕುಮಾರ್, ಕುಮಾರಸ್ವಾ ಮಿಯವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ. ಆರೋಪಗಳಿಗೆ ಕಾಲವೇ ಉತ್ತರಿಸಲಿದೆ. ಅವರು ಹೇಳಿದಂತೆ ಅದೇನು ದಾಖಲೆಗಳಿವೆಯೋ ಅದನ್ನು ತರಿಸಿ ಅವರಿಗೆ ತಿಳಿಸುತ್ತೇನೆ. ತನಿಖೆ ಮಾಡಲು ಯಾರಿಗೋ ನೀಡಬೇಕು ಎಂದು ಹೇಳಿದ್ದಾರಲ್ಲ, ಅವರಿಗೆ ದಾಖಲೆಗಳನ್ನು ಕೊಡಲಿ ಎಂದಿದ್ದಾರೆ. ಕೆಟ್ಟ ಸಂಸ್ಕೃತಿ ನಿಲ್ಲಲಿ: ಇದಕ್ಕೂ ಮುನ್ನ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪ ಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ವಿಚಾರ ಸಂಬಂಧ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಹಾಗೂ ಅವರಿಗೆ ದೂರನ್ನು ನೀಡುತ್ತೇನೆ ಎಂದರು.
ಸ್ಟಿಂಗ್ ಪ್ರಕರಣಗಳ ಹಿಂದೆ ಯಾರು ಇದ್ದಾರೆ? ಕಾರ್ಯಾಚರಣೆಗಳನ್ನು ಯಾರು ನಡೆಸಿದ್ದಾರೆ? ಯಾರ ಯಾರ ಪಾತ್ರವಿದೆ? ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆ ಅಗತ್ಯ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಸಿರುವ ಷಡ್ಯಂತ್ರಕ್ಕೆ ಹೆದರುವ ಅಗತ್ಯವಿಲ್ಲ. ಅವರು ಈಗಿನ ಸಿದ್ದರಾಮಯ್ಯ ಆಗಿರಬಾರದು. ಅವರು ಹಿಂದಿನ ಹೋರಾಟ ಮನೋಭಾವದ ಸಿದ್ಧರಾಮಯ್ಯ ಮಾತನಾಡಬೇಕು. ಇದರ ಬಗ್ಗೆ ಮೌನ ವಹಿಸುವುದು ಸರಿಯಲ್ಲ. ನಾನೊಬ್ಬನೇ ಮಾತನಾಡಿದರೆ ಸಾಕಾಗುವುದಿಲ್ಲ ಎಂದರು. ಹಿಂದೆ ಮಾಜಿ ಮುಖ್ಯಮಂತ್ರಿ ಒಬ್ಬರ ವಿರುದ್ಧ ಸ್ಟಿಂಗ್ ಮಾಡಿದರು, ಆಮೇಲೆ ರಮೇಶ್ ಜಾರಕಿಹೊಳಿ ಅವರನ್ನು ಮುಗಿಸಿದರು, ಅದಾದ ಮೇಲೆ ಅದೇ ಸಮುದಾಯದ ಕೆ.ಎನ್. ರಾಜಣ್ಣ ಅವರನ್ನು ತೆಗೆದರು. ನಮ್ಮ ಪಕ್ಷದ ನಾಯಕನೇ ಸಿಡಿ ಪ್ಯಾಕ್ಟರಿ ನಡೆಸುತ್ತಿzನೆ ಎಂದು ರಾಜಣ್ಣ ಹೇಳಿದರೂ ಆಮೇಲೆ ಅವರ ಬಾಯಿ ಮುಚ್ಚಿಸಿದರು. ಈಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಆರೋಪಿಸಿದರು.
ಸಿಎಂ ತನ್ನ ಪಕ್ಷದವರ ಮೇಲೆಯೇ ಕಣ್ಣಿಟ್ಟರೆ ಗತಿಯೇನು?: ಎಚ್ಡಿಕೆ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಸದಾಶಿವನಗರದ ಮನೆಯಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರು ಏನು ಚರ್ಚಿಸುತ್ತಾರೆ ಎಂಬ ಮಾಹಿತಿ ಸಂಗ್ರ ಹಿಸಲಾಗುತ್ತಿದೆ ಎಂದು ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಾಶಿವನಗರದಲ್ಲಿ ನಡೆಸಲಾಗುತ್ತಿರುವ ಫೋನ್ ಟ್ಯಾಪಿಂಗ್, ನಿಗಾ ವ್ಯವಸ್ಥೆಯ ಬಗ್ಗೆ ಪೊಲೀಸ್ ಇಲಾಖೆ ಯಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ನನಗೆ ಬಂದಿದೆ. ಸಿಎಂ ಆಗಿರುವ ವ್ಯಕ್ತಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಸ್ವಪಕ್ಷದ ಶಾಸಕರು, ಸಚಿವರ ಮೇಲೆ ಯೇ ನಿಗಾ ಇಟ್ಟರೆ ಕಥೆ ಏನು? ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐ ತನಿಖೆ ಅಗತ್ಯ ವಿದೆ ಎಂಬ ಸ್ಪೋಟಕ ವಿಚಾರ ಬಹಿ ರಂಗ ಪಡಿಸಿದರು. ಸಚಿವರು ಮತ್ತು ರಾಜಕೀಯ ನಾಯಕರ ಫೋನ್ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂಬುದು ಗಂಭೀರ ವಿಷಯ. ಅವರ ಚಟುವಟಿಕೆ ಗಮನಿಸಲು ಪ್ರತ್ಯೇಕ ವ್ಯವಸ್ಥೆ ಅಥವಾ ಘಟಕವಿದೆ ಎಂಬುದು ಅಘಾತಕಾರಿ ಸಂಗತಿ.
ಆದರೆ ಮುಖ್ಯಮಂತ್ರಿ ಸ್ವತಃ ಇದಕ್ಕೆ ಆದೇಶಿಸಿದ್ದಾರೆ ಎಂದು ತಾನು ಹೇಳುತ್ತಿಲ್ಲ. ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತನಿಖೆಯಿಂದ ಪರಿಶೀಲಿಸಬೇಕು. ತಮ್ಮ ಫೋನ್ ಟ್ಯಾಪ್ ಆಗಿದೆಯೇ ಎಂಬ ಪ್ರಶ್ನೆಗೆ, ತಾವು ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದರಿಂದ ಮರೆಮಾಚುವುದೇನೂ ಇಲ್ಲ ಎಂದರು.
ಸಿದ್ದರಾಮಯ್ಯಗೆ ಧೈರ್ಯ ತುಂಬಿದ ಎಚ್ಡಿಕೆ
ಯಾವುದೇ ಕಾರಣಕ್ಕೂ ಈ ಕುತಂತ್ರಕ್ಕೆ ನೀವು ಹೆದರಬಾರದು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಸಚಿವ ಕುಮಾರಸ್ವಾಮಿ, ನೀವು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ದಿವಂಗತ ದೇವ ರಾಜ ಅರಸು ಅವರ ದಾಖಲೆ ಮೀರಿದ ನಾಯಕ ನೀವು. ಇಂತಹ ಹಿನ್ನೆಲೆ ಹೊಂದಿರುವ ನೀವು, ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲಿ ನಡೆದಿರುವ ಸಂಚಿಗೆ ಹೆದ ರುವ ಅಗತ್ಯವಿಲ್ಲ. ನಿಮಗೆ ಕಳಂಕ ಬರಲು ಬಿಡುವುದಿಲ್ಲ. ನೀವು ನ್ಯಾಯಾಲಯದ ಮೊರೆ ಹೋಗುವ ಸ್ಥಿತಿಗೆ ಏಕೆ ತಳ್ಳಲ್ಪಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಸಿದ್ದ ರಾಮಯ್ಯ ವಿರುದ್ಧ ಹಿಂದೆ ರಾಜಕೀಯ ವಾಗಿ ಹೋರಾಡಿದ್ದೇನೆ, ಈಗ ನಾನು ಅವರ ಮೇಲೆ ಅನುಕಂಪದಿಂದ ಮಾತನಾಡು ತ್ತಿಲ್ಲ. ಆದರೆ, ಅವರ ವಿರುದ್ಧ ನಡೆದಿರುವ ಷಡ್ಯಂತ್ರ್ಯದ ಬಗ್ಗೆ ಮಾತ್ರ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ತಮ್ಮ ಹಿಂದಿನ ಗಟ್ಟಿಯಾದ ದನಿಯಲ್ಲಿ ಮಾತನಾಡಿ ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕು. ಕಾಂಗ್ರೆಸ್ ಸರಕಾರವನ್ನು ಕೆಡವಬೇಕು ಎಂದು ಹೇಳುತ್ತಿಲ್ಲ. ಸ್ಟಿಂಗ್ ಗಳ ಮೂಲಕ ಜನರನ್ನು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಕೆಟ್ಟ ಸಂಸ್ಕೃತಿ ನಿಲ್ಲಬೇಕು ಎಂದರು.
![]()
ಸಿಡಿ ಹಾಗೂ ಸ್ಟಿಂಗ್ ಆಪರೇಷನ್ಗಳಿಗೆ ರಾಜ್ಯದಲ್ಲಿ ಒಂದೇ ಫ್ಯಾಕ್ಟರಿ ಇದೆ. ಆದರೆ ಅದರಲ್ಲಿ ಪಾರ್ಟನರ್ಗಳು ಮಾತ್ರ ಬೇರೆ ಬೇರೆ. ಮುಖ್ಯಮಂತ್ರಿಗಳ ಬಳಿ ಎಲ್ಲಾ ತನಿಖಾ ಸಂಸ್ಥೆಗಳಿವೆ. ಜನರಲ್ಲಿರುವ ಗೊಂದಲವನ್ನು ಅವರೇ ತನಿಖೆ ಮಾಡಿ ಸಿ ದೂರ ಮಾಡಬೇಕು. ಹಿಂದೆ ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿ ದವರೇ, ಈಗ ಸಿದ್ದರಾಮಯ್ಯನವರ ಸಿಡಿಯನ್ನೂ ಮಾಡಿಸಿದ್ದಾರೆ.
-ಕೆ.ಎನ್.ರಾಜಣ್ಣ, ಮಾಜಿ ಸಚಿವ
![]()
ಜಾಲತಾಣಗಳಲ್ಲಿ ನಮ್ಮ ತಂದೆಯವರ ವಿರುದ್ಧ ಆರೋಪ ಮಾಡಿದ್ದಾರೆ, ಅದು ಅಪ್ಪಟ ಸುಳ್ಳು. ಅದರ ಬಗ್ಗೆ ಸ್ಟೇ ತರೋದಲ್ಲ, ದೂರು ಕೂಡ ನೀಡಲಾ ಗಿದೆ. ಸುಳ್ಳು ಸುದ್ದಿ ಹಬ್ಬಿಸು ತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಮೊದಲ ನೆಯದಾಗಿ ಅದು ಸುಳ್ಳು ವಿಡಿಯೋ. ಇದು ತೇಜೋವಧೆ ಮಾಡಲು ನಡೆಸುತ್ತಿರುವ ಷಡ್ಯಂತ್ರ. ಇವತ್ತಿನ ರಾಜಕೀಯ ಕೆಳಮಟ್ಟಕ್ಕೆ ಹೋಗಿದೆ.
-ಯತೀಂದ್ರ ಸಿದ್ದರಾಮಯ್ಯ, ಸಚಿವ
![]()
ಮಾಜಿ ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ದ್ದರು. ಅಂತಹವರಿಗೆ ಕೋರ್ಟ್ ಮೆಟ್ಟಿಲು ಹತ್ತುವ ನೋವನ್ನು ಕಾಂಗ್ರೆಸ್ ನವರು ನೀಡಿದ್ದಾರೆ. ಸಿದ್ದರಾಮಯ್ಯನ ವರಿಗೆ ಈಗ ಕಾಂಗ್ರೆಸ್ನ ಸಂಸ್ಕೃತಿ ಗೊತ್ತಾಗಿದೆ. ಅವರ ಬೆನ್ನಿಗೆ ಕಾಂಗ್ರೆಸ್ ನಾಯಕರು ಚೂರಿ ಹಾಕಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ದಯನೀಯ ಸ್ಥಿತಿ ಅವರಿಗೆ ಬಂದಿದೆ.
-ಆರ್.ಅಶೋಕ, ಪ್ರತಿಪಕ್ಷ ನಾಯಕ