ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Assault Case: ಹೋಟೆಲ್‌ನಲ್ಲಿ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಗ್ರಾಹಕನ ಮೇಲೆ ಹಿಂದಿ ಭಾಷಿಕರ ಹಲ್ಲೆ!

Assault Case: ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರ ಬಳಿಯ ಸಪ್ತಗಿರಿ ಆಸ್ಪತ್ರೆ ಬಳಿ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಕನ್ನಡಿಗನ ಮೇಲೆ ಹಲ್ಲೆ ನಡೆದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಗ್ರಾಹಕನ ಮೇಲೆ ಹಿಂದಿ ಭಾಷಿಕರ ಹಲ್ಲೆ!

Profile Prabhakara R Feb 4, 2025 5:11 PM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಮಿತಿ ಮೀರಿದ್ದು, ಸ್ವಂತ ನೆಲದಲ್ಲಿ ಕನ್ನಡಿಗರೇ ಆತಂಕದಿಂದ ಬದುಕಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕನ್ನಡದಲ್ಲಿ ಆರ್ಡರ್ ಹೇಳಿದ ವ್ಯಕ್ತಿಗೆ ಹೋಟೆಲ್‌ನಲ್ಲಿದ್ದ ಹಿಂದಿ ಭಾಷಾ ಸಿಬ್ಬಂದಿ ಥಳಿಸಿರುವ ಘಟನೆ (Assault Case) ನಡೆದಿದೆ. ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರ ಬಳಿಯ ಸಪ್ತಗಿರಿ ಆಸ್ಪತ್ರೆ ಬಳಿ ಇರುವ Gabru Bistro and Cafe ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಹೋಟೆಲ್‌ಗೆ ಕನ್ನಡಿಗ ಗ್ರಾಹಕರೊಬ್ಬರು ತೆರಳಿ ಕನ್ನಡದಲ್ಲಿ ಆರ್ಡರ್ ಹೇಳಿದ್ದಾರೆ. ಇದಕ್ಕೆ ಅಲ್ಲಿದ್ದ ಹೊಟೆಲ್ ಸಿಬ್ಬಂದಿ ನನಗೆ ಅರ್ಥವಾಗಿಲ್ಲ. ಹಿಂದಿಯಲ್ಲಿ ಹೇಳು ಎಂದು ಗದರಿದ್ದಾನೆ. ಇದರಿಂದ ಆಕ್ರೋಶಗೊಂಡ ಗ್ರಾಹಕ, ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದಾನೆ. ಆದರೆ ಹೋಟೆಲ್‌ ಸಿಬ್ಬಂದಿ ಕನ್ನಡ ಮಾತಾಡಲ್ಲ ಎಂದು ಜೋರು ಧ್ವನಿಯಲ್ಲೇ ಆವಾಜ್‌ ಹಾಕಿ, ಹೋಟೆಲ್‌ನಿಂದ ಹೊರಹೋಗುವಂತೆ ಕೂಗಿದ್ದಾನೆ. ಇದರಿಂದ ಕೋಪಗೊಂಡ ಕನ್ನಡಿಗ, ಇದು ಕರ್ನಾಟಕ, ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಾನೆ.



ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಕನ್ನಡಿಗನನ್ನು ಹಿಡಿದು ಹೋಟೆಲ್‌ ಸಿಬ್ಬಂದಿ ಹೋಟೆಲ್‌ ಒಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದರಿಂದ ಹೋಟೆಲ್‌ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಈ ಸುದ್ದಿಯನ್ನೂ ಓದಿ | Gundlupet News: ವೈದ್ಯರ ಎಡವಟ್ಟು; ಕಿವಿ ಚುಚ್ಚಿಸುವ ವೇಳೆ 6 ತಿಂಗಳ ಮಗು ಸಾವು

ಸಾಲಗಾರರಿಗೆ ಕಿರುಕುಳ; ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬಂಧನ

ತುಮಕೂರು: ಸಾಲದ ಕಂತು ಕಟ್ಟುವಂತೆ ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ. ತಾಲೂಕಿನ ಗೌರಗೊಂಡನಹಳ್ಳಿಯ ವರಲಕ್ಷ್ಮಮ್ಮ ಪುತ್ರ ಪ್ರವೀಣ್‌ ನೀಡಿದ್ದ ದೂರಿನ ಆಧಾರದ ಮೇಲೆ ಎವಿಐಒಎಂ ಫೈನಾನ್ಸ್‌ ನೌಕರ ಹನುಮಂತರಾಯಪ್ಪ ಎಂಬಾತನನ್ನು ಕೋರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫೈನಾನ್ಸ್‌ನಿಂದ 2.63 ಲಕ್ಷ ಸಾಲ ಪಡೆದಿದ್ದ ವರಲಕ್ಷ್ಮಮ್ಮ ನಾಲ್ಕು ತಿಂಗಳು ಹಣ ಪಾವತಿಸಿರಲಿಲ್ಲ. ಅವರ ಮನೆ ಗೋಡೆ ಮೇಲೆ ಈ ಸ್ವತ್ತು ಎವಿಐಒಎಂ ಅಧೀನದಲ್ಲಿರುತ್ತದೆ ಎಂದು ಬರೆಸಲಾಗಿತ್ತು.

ಒಂದು ವಾರದಲ್ಲಿ ಬಡ್ಡಿ, ಅಸಲು ಕಟ್ಟದಿದ್ದರೆ ಮನೆಗೆ ಬೀಗ ಹಾಕಲಾಗುವುದು. ಮನೆ ಹರಾಜು ಮಾಡುತ್ತೇವೆ ಎಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಕೋರ ಠಾಣೆಯಲ್ಲಿ ಹನುಮಂತರಾಯಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮತ್ತೆ ಮನೆ ಹತ್ತಿರ ಬಂದು ಬೀಗ ಹಾಕಲು ಯತ್ನಿಸಿದರು. ಗ್ರಾಮಸ್ಥರು ಬೀಗ ಹಾಕದಂತೆ ತಡೆದಿದ್ದರು. ಸಾಲ ಪಾವತಿಸಿದರೂ ಇನ್ನೂ 3 ಲಕ್ಷ ಕಟ್ಟಬೇಕು ಎಂದು ಮನೆಯ ಗೋಡೆ ಮೇಲೆ ಬರೆದು ಅವಮಾನಿಸಿದ್ದರು ಎಂದು ವರಲಕ್ಷ್ಮಮ್ಮ ಪುತ್ರ ಪ್ರವೀಣ್‌ ದೂರು ನೀಡಿದ್ದರು. ಹೀಗಾಗಿ ಫೈನಾನ್ಸ್‌ ಸಿಬ್ಬಂದಿ ಬಂಧನವಾಗಿದೆ.