ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Guru Purnima 2025: ಹಿಂದೂ ಜನಜಾಗೃತಿ ಸಮಿತಿಯಿಂದ ಜು.10ರಂದು ‘ಗುರು ಪೂರ್ಣಿಮಾ ಮಹೋತ್ಸವʼ

Hindu Janajagruti Samiti: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಸೆಂಟರ್‌ನಲ್ಲಿ ಜು.10 ರಂದು ಗುರುವಾರ ಸಂಜೆ 5 ಗಂಟೆಗೆ ‘ಗುರು ಪೂರ್ಣಿಮಾ ಮಹೋತ್ಸವʼ ಹಮ್ಮಿಕೊಳ್ಳಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ಹಿಂದೂ ಜನಜಾಗೃತಿ ಸಮಿತಿಯಿಂದ ಜು.10ರಂದು ‘ಗುರು ಪೂರ್ಣಿಮಾ ಮಹೋತ್ಸವʼ

ಸಾಂದರ್ಭಿಕ ಚಿತ್ರ.

Profile Siddalinga Swamy Jul 7, 2025 7:00 PM

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ (Hindu Janajagruti Samiti)‌ ಬೆಂಗಳೂರಿನ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಸೆಂಟರ್‌ನಲ್ಲಿ ಜು.10 ರಂದು ಗುರುವಾರ ಸಂಜೆ 5 ಗಂಟೆಗೆ ‘ಗುರು ಪೂರ್ಣಿಮಾ ಮಹೋತ್ಸವʼ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಯೋಜಕ ಗುರುಪ್ರಸಾದ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಗುರು ಪೂರ್ಣಿಮೆ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ, ಹಿಂದೂ ಧರ್ಮದ ರಕ್ಷಣೆ ಕಾರ್ಯ ಮಾಡುವವರಿಗೆ ಸತ್ಕಾರ, ಸ್ವಸಂರಕ್ಷಣೆ ಪ್ರಾತ್ಯಕ್ಷತೆ, ಹಿಂದೂ ಸಮಾಜದ ಸದ್ಯದ ಸ್ಥಿತಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ ವಿಷಯದ ಮೇಲೆ ವಕ್ತಾರರ ಮಾರ್ಗದರ್ಶನ ಇರಲಿದೆ. ಗುರು ಪೂರ್ಣಿಮೆ ಮಹೋತ್ಸವದಲ್ಲಿ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಅಧ್ಯಾತ್ಮ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮ ಚಿಕಿತ್ಸೆ ಮುಂತಾದ ವಿಷಯಗಳ ವಿಶೇಷ ಪ್ರದರ್ಶನ, ಗ್ರಂಥ ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಖಾಲಿ ಇದೆ 2,500 ಲೋಕಲ್‌ ಬ್ಯಾಂಕ್‌ ಆಫೀಸರ್‌ ಹುದ್ದೆ