ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರೋಗ್ಯ ಕ್ಷೇತ್ರದ ಸಾಧಕರಿಗೆ ಗೌರವ; ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್ ಪ್ರದಾನ

ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮವು ಬುಧವಾರ (ಆ. 6) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ (Pride of Healthcare Award) ಕಾರ್ಯಕ್ರಮವು ಬುಧವಾರ (ಆ. 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯುಟಿ ಖಾದರ್‌, ನಟಿ ಮಾನ್ವಿತಾ ಕಾಮತ್‌, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಸುಕುಮಾರ ಶೆಟ್ಟಿ, ಸೇರಿದಂತೆ ಹಲವು ಅತಿಥಿಗಳು ಉಪಸ್ಥಿತರಿದ್ದರು. ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್ ಪ್ರದಾನ ಮಾಡಿ ಮಾತನಾಡಿದ ಸಚಿವ ಯುಟಿ ಖಾದರ್‌ ಎಲ್ಲ ವೃತ್ತಿಗಿಂತಲೂ ವೈದ್ಯ ವೃತ್ತಿ ಜೀವನ ವಿಭಿನ್ನ ಹಾಗೂ ವಿಶಿಷ್ಠವಾದುದು. ಕೆಲಸದ ಜೊತೆಯಲ್ಲಿ ಜನರ ಸೇವೆ ಮಾಡುವ ಭಾಗ್ಯ ವೈದ್ಯರಿಗೆ ದೊರಕಿದೆ ಎಂದರು.

ಕೋವಿಡ್‌ನಂತಹ ಸಂಕಷ್ಟ ಕಾಲದಿಂದ ಹಿಡಿದೂ ಪ್ರತಿಯೊಂದು ಸಮಯದಲ್ಲಿಯೂ ಸಹ ವೈದ್ಯರ ಕೊಡುಗೆ ಅಪಾರ. ಆರೋಗ್ಯವಂತ ಹಾಗೂ ಬಲಿಷ್ಠ ಸಮಾಜವನ್ನು ನಿರ್ಮಿಸಲು ಹೆಚ್ಚಿನ ಕೊಡುಗೆ ನೀಡಬೇಕೆಂದು ಸಚಿವರು ಆಗ್ರಹಿಸಿದರು. ಇಂದಿನ ಯುವ ಪೀಳಿಗೆ ಕಾಯಿಲೆಗೆ ತುತ್ತಾಗುತ್ತಿರುವ ಕುರಿತು ಮಾತನಾಡಿದ ಖಾದರ್‌ ಅವರು, ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವುದನ್ನು ತಾಯಂದಿರು ಅಭ್ಯಾಸ ಮಾಡಬೇಕು. ಸರ್ಕಾರ ಸಹ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಪಘಾತ ವಿಮೆ ಸೇರಿದಂತೆ ಹಲವು ರೋಗಗಳ ಚಿಕಿತ್ಸೆಗೆ ಉತ್ತಮ ಹಾಗೂ ಉಚಿತ ಚಿಕಿತ್ಸೆ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಯು.ಟಿ ಖಾದರ್‌ ಹೇಳಿದರು.

ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್ ಪಡೆದವರ ವಿವರ

  • ಕಾವೇರಿ ಆಸ್ಪತ್ರೆ ಬೆಂಗಳೂರು
  • ಡಾ. ರಶ್ಮಿ ಟಿ. ಎನ್‌, ಗರ್ಭಗೃಹ ಆಸ್ಪತ್ರೆ, ಬೆಂಗಳೂರು
  • ಡಾ. ಪವನ್‌ ಕುಮಾರ್‌ ಪಾಟೀಲ್‌, ಕೃತು ಫರ್ಟಿಲಿಟಿ ಸೆಂಟರ್‌ ಗದಗ
  • ಡಾ. ಚಂದ್ರಶೇಖರ ಚಿನಿವಾಲ್‌, ಬಿಬಿಸಿ ಟ್ರಸ್ಟ್‌ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ಗಂಗಾವತಿ
  • ಡಾ.ಸಾನಿಯಾ ಜಮಾಲ್‌ಸಾಬ್‌ ಧನ್ನೂರ್‌, ಬಾಗಲಕೋಟೆ
  • ಡಾ. ನಾಗರಾಜ್‌ ಎಸ್‌.ಕೆ, ಸಿದ್ದಗಂಗಾ ಆಸ್ಪತ್ರೆ, ರಾಣೆಬೆನ್ನೂರು
  • ಡಾ. ಸಂತೋಷ್‌ ಶಿವಸ್ವಾಮಿ, ಬೆಂಗಳೂರು
  • ಡಾ. ಕೀರ್ತಿ: ಕೀರ್ತಿ ಆಸ್ಪತ್ರೆ, ಬೆಂಗಳೂರು
  • ಪ್ರೊ. ಸುತ್ತೂರು ಮಾಲಿನಿ : ತಳಿಶಾಸ್ತ್ರ ಮತ್ತು ಜೀನೋಮಿಕ್ಸ್ (Genetics and Genomics) ಅಧ್ಯಯನ ವಿಭಾಗದ ಮುಖ್ಯಸ್ಥರು ಮೈಸೂರು ವಿಶ್ವವಿದ್ಯಾಲಯ
  • ಡಾ. ಜಾನ್‌ ಇಮ್ಯಾನುವಲ್‌ ಕಟಾವಟಿ, ವಿಜಯಪುರ
  • ಡಾ. ರವೀಂದ್ರ ನಿಡೋಣಿ, ಬೆಂಗಳೂರು
  • ಡಾ. ಶಿವನ ಗೌಡ, ದಾವಣಗೆರೆ
  • ಡಾ. ಸುಷ್ಮಾ ಎಚ್‌.ವಿ, ಬೆಂಗಳೂರು
  • ಡಾ. ನಾರಾಯಣ ಮುದಗಲೆ, ಬೆಂಗಳೂರು
  • ಡಾ. ಲೀಲಾಮೋಹನ್‌ ಪಿವಿಆರ್‌, ಬೆಂಗಳೂರು

Vishakha Bhat Heggar

View all posts by this author