ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿಪಕ್ಷ ಅಹೋರಾತ್ರಿ ಧರಣಿ ಘೋಷಣೆ ಬೆನ್ನಲ್ಲೇ ಸದನ ಬರ್ಖಾಸ್ತು: 8 ದಿನಕ್ಕೆ ಅಧಿವೇಶನ ಅಂತ್ಯ

ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೋಮವಾರದಿಂದ ಅಹೋರಾತ್ರಿಯ ಎಚ್ಚರಿಕೆ ನೀಡಿದ್ದರಿಂದ, ಮುಜುಗರ ತಪ್ಪಿಸಿಕೊಳ್ಳಲು ಸದನವನ್ನು ಸೋಮವಾರವೇ ಬರ್ಖಾಸ್ತುಗೊಳಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸದನ ಆರಂಭಕ್ಕೂ ಮೊದಲು ಬಿಜೆಪಿ ನಾಯಕರು ವಿಧಾನಸೌಧದ ನಾಲ್ಕು ಗೇಟ್‌ಗಳಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು

ಕೊನೆಯ ದಿನ ಗದ್ದಲದ ನಡುವೆಯೇ 8 ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದನದ ಒಳಗೆ, ಹೊರಗೆ ಹೋರಾಟ ತೀವ್ರಗೊಳಿಸಿದ ಹಾಗೂ ಅಹೋರಾತ್ರಿ ಧರಣಿ ಘೋಷಣೆ ಮಾಡಿದ್ದರಿಂದ ನಾಲ್ಕು ದಿನ ಮೊದಲೇ ಮಳೆಗಾಲದ ಅಧಿವೇಶನವನ್ನು ಬರ್ಖಾಸ್ತು ಮಾಡಲಾಗಿದೆ. ಮಳೆಗಾಲದ ಅಧಿವೇಶನ ಆರಂಭವಾದಾಗಿ ನಿಂದ ಬಿಜೆಪಿ ಶಾಸಕರು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದೊಳಗೆ ಪ್ರತಿಭಟನೆ ನಡೆಸುತ್ತಿದ್ದರು. ಸೋಮವಾರ ಬಾವಿಗಿಳಿದು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೋಮವಾರದಿಂದ ಅಹೋರಾತ್ರಿಯ ಎಚ್ಚರಿಕೆಯನ್ನು ನೀಡಿದ್ದರಿಂದ, ಮುಜುಗರ ತಪ್ಪಿಸಿಕೊಳ್ಳಲು ಸದನವನ್ನು ಸೋಮವಾರವೇ ಬರ್ಖಾಸ್ತುಗೊಳಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸದನ ಆರಂಭಕ್ಕೂ ಮೊದಲು ಬಿಜೆಪಿ ನಾಯಕರು ವಿಧಾನಸೌಧದ ನಾಲ್ಕು ಗೇಟ್‌ಗಳಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು. ಇದಾದ ಬಳಿಕ ಉಭಯ ಸದನದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದರು. ನಾಗೇಂದ್ರ ರಾಜೀನಾಮೆಯ ಪಟ್ಟನ್ನು ಸಡಿಲಿಸದೇ ಹೋರಾಟ ಮುಂದುವರಿಸಿದ್ದರಿಂದ, ಸಾರ್ವಜನಿಕವಾಗಿಯೂ ಸರಕಾರದ ವಿರುದ್ಧದ ಸಂದೇಶ ರವಾನೆಯಾಗುವ ಆತಂಕ ಶುರುವಾಗಿತ್ತು. ಇದರೊಂದಿಗೆ ಅಹೋರಾತ್ರಿ ಧರಣಿ ಆರಂಭಿಸಿ ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ವರ್ಚಸ್ಸಿಗೂ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕೆ ಸದನ ಮೊಟಕುಗೊಳಿಸಲು ತೀರ್ಮಾನಿಸಿ, ಸಭಾಧ್ಯಕ್ಷರಿಗೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: Vidhana Soudha Tour: ಜೂನ್‌ 1ರಿಂದ ಸಾರ್ವಜನಿಕರಿಗೆ ತೆರೆಯಲಿರುವ ವಿಧಾನಸೌಧ; ಯಾವಾಗ, ಶುಲ್ಕ ಎಷ್ಟು?

ಬಳಿಕ ಸೋಮವಾರ ಸಂಜೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದಕ್ಕೂ ಮೊದಲು ಪ್ರತಿಪಕ್ಷಗಳ ಪ್ರತಿಭಟನೆ, ಘೋಷಣೆ, ಗದ್ದಲದ ನಡುವೆಯೇ ಚರ್ಚೆ ಇಲ್ಲದೇ ಸೋಮ ವಾರ ಎಂಟು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾ ಯಿತು. ಚರ್ಚೆ ಮಾಡದೆ ವಿಧೇಯಕ ಮಂಡಿಸು ತ್ತಿರುವುದು ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

2026ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2026ನೇ ಸಾಲಿನ ಕರ್ನಾಟಕ ಕೈಗಾರಿಕೆ (ಸೌಲಭ್ಯ) (ತಿದ್ದುಪಡಿ) ವಿಧೇಯಕ, 2026ನೇ ಸಾಲಿನ ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2026ನೇ ಸಾಲಿನ ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕ, 2026ನೇ ಸಾಲಿನ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2026ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ (2ನೇ ತಿದ್ದುಪಡಿ) ವಿಧೇಯಕ, 2026ನೇ ಸಾಲಿನ ಕರ್ನಾಟಕ ಸರ್ಕಾರಿ ಉದ್ಯಾನವನ ಸಂರಕ್ಷಣೆ (ತಿದ್ದುಪಡಿ) ವಿಧೇಯಕ ಮತ್ತು ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಗಳ ಅಂಗೀಕಾರವಾಯಿತು.

ರಾಜ್ಯಪಾಲರಿಗೆ ಬಿಜೆಪಿ ದೂರು ನಿಗದಿತ ಅವಧಿಗಿಂತ ಮೊದಲೇ ಅಧಿವೇಶನ ರದ್ದು ಮಾಡಿದ ಕ್ರಮ ಖಂಡಿಸಿ ಹಾಗೂ ಸಚಿವ ನಾಗೇಂದ್ರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ, ವಿರೋಧ ಪಕ್ಷಕ್ಕೆ ಹೆದರಿ ರಾಜ್ಯ ಸರಕಾರ ಅಧಿವೇಶನ ರದ್ದು ಮಾಡಿದೆ. ಆದ್ದರಿಂದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದೇವೆ. ಕರ್ನಾಟಕದ ರಾಜಕೀಯ ಇತಿಹಾಸದ ಮೊದಲ ಬಾರಿಗೆ ರಾಜ್ಯ ಸರಕಾರ ಪ್ರತಿಪಕ್ಷಕ್ಕೆ ಹೆದರಿ ಅಧಿವೇಶನ ರದ್ದು ಮಾಡಿದೆ. ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಮಾಡುತ್ತೇವೆಂದು ಘೋಷಿಸಿದ ಬಳಿಕ ಹಾಗೂ ರಾಜ್ಯಪಾಲರಿಗೆ ದೂರು ನೀಡುತ್ತೇವೆಂದು ಹೇಳಿದ ನಂತರ ಸರಕಾರ ಈ ತೀರ್ಮಾನ ಮಾಡಿದೆ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ಅಧಿವೇಶನ ಪೂರ್ತಿಯಾಗಿ ನಡೆಸಬೇಕಿತ್ತು. ಹೊಸ ಸಭಾಧ್ಯಕ್ಷರ ಮೇಲೆ ನಮಗೆ ವಿಶ್ವಾಸವಿತ್ತು. ಆದರೆ ಸಭಾಧ್ಯಕ್ಷರು ಸದನ ನಡೆಸದೆ ರದ್ದು ಮಾಡಿzರೆ. ಹೀಗಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಗಿದೆ ಎಂದರು.

7042 ಕೋಟಿ ರು. ಪೂರಕ ಅಂದಾಜು ಗದ್ದಲ ಗಲಾಟೆಯ ನಡುವೆಯೇ 2026-27 ಸಾಲಿನ ಮೊದಲ ಕಂತಿನ 7,042.69 ಕೋಟಿ ಮೊತ್ತದ ಪೂರಕ ಅಂದಾಜಿಗೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯ ಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಕ್ಷಗಳ ಪ್ರತಿಭಟನೆ ಮಧ್ಯೆ ಪೂರಕ ಅಂದಾ ಜಿನ ಧನವಿಧೇಯಕ ಮಸೂದೆ ಮಂಡಿಸಿ ದರು. ಯಾವುದೇ ಚರ್ಚೆ ಇಲ್ಲದೇ ಪೂರಕ ಅಂದಾಜಿನ ಧನ ವಿಧೇಯಕ ಮಸೂದೆಯನ್ನು ಅಂಗೀಕರಿಸಲಾಯಿತು. ಮೊದಲ ಕಂತಿನ ಪೂರಕ ಅಂದಾಜಿ ನಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಲಕ್ಷ ರು. ಮಾತ್ರ ನೀಡಲಾಗಿದೆ.

ಇನ್ನು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 28.26 ಕೋಟಿ ರು., ಒಳಾಡಳಿತ ಹಾಗೂ ಸಾರಿಗೆ ಇಲಾಖೆಗೆ 404.47 ಕೋಟಿ ರು., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 3292 ಕೋಟಿ ರು., ಅರಣ್ಯ, ಪರಿಸರ ಇಲಾಖೆಗೆ 4 ಕೋಟಿ ರು., ಸಮಾಜ ಕಲ್ಯಾಣ ಇಲಾಖೆ 60.67 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 9.18 ಕೋಟಿ ರು., ವಾರ್ತಾ, ಪ್ರವಾ ಸೋದ್ಯಮ ಮತ್ತು ಯುವಜನ ಸೇವೆ ಇಲಾಖೆಗೆ 793.30 ಕೋಟಿ ರು., ಆಹಾರ ಮತ್ತು ನಾಗರಿಕ ಪೂರೈಕೆ 39.76 ಕೋಟಿ ರು. ಮೊದಲ ಕಂತಿನ ಪೂರಕ ಅಂದಾಜನ್ನು ನೀಡಲಾಗಿದೆ.

*

4 ದಿನಗಳ ಮೊದಲೇ ಕಲಾಪಕ್ಕೆ ತೆರೆ

ಪ್ರತಿಪಕ್ಷಗಳ ತಂತ್ರಕ್ಕೆ ಸರಕಾರ ಪ್ರತಿತಂತ್ರ

ಚರ್ಚೆ ಇಲ್ಲದೆ ಮಸೂದೆಗಳಿಗೆ ಅಂಗೀಕಾರ