ಬೆಂಗಳೂರು: ಐಸಿಎಫ್ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ ತನ್ನ ಬೆಂಗ ಳೂರು ಕ್ಯಾಂಪಸ್ನಲ್ಲಿ ಐಸಿಎಫ್ಎಐ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ನೇಪಾಳ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಪ್ರತಿನಿಧಿ ಮಂಡಳಿ ಭಾಗವಹಿಸಿತ್ತು.
ನೇಪಾಳ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ವಿಶೇಷ ಏಕದಿನ ತರಬೇತಿ ಕಾರ್ಯಕ್ರಮದಲ್ಲಿ ನೇಪಾಳದ ಗಣ್ಯ ನಿರ್ವಹಣಾ ವೃತ್ತಿಪರರ ಪ್ರತಿನಿಧಿ ಮಂಡಳಿಯು ಸಕ್ರಿಯವಾಗಿ ಪಾಲ್ಗೊಂಡಿತು.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
ನೆಟ್ವರ್ಕಿಂಗ್ ಮತ್ತು ಸಾಮಾಜಿಕ ಸಂಪರ್ಕ, ಬುದ್ಧಿಮತ್ತೆ ಮತ್ತು ಬದಲಾವಣೆ ನಿರ್ವಹಣೆ, ಸಂವಹನ ಹಾಗೂ ತಂತ್ರಜ್ಞಾನ ಮತ್ತು ಡಿಜಿಟಲ್ ಸಾಕ್ಷರತೆ: ಸಂಪರ್ಕ ಮತ್ತು ಅನ್ವೇಷಣೆಗೆ ಸಾಧನಗಳ ಕುರಿತು ವ್ಯಾಪಕವಾಗಿ ಚರ್ಚಿಸಲಾಯಿತು.
ಡೀನ್ ಡಾ. ವಿನಯ್ ಜೋಶಿ ಮಾತನಾಡಿ, ನೇಪಾಳದ ಎಲ್ಲ ಪ್ರತಿನಿಧಿಗಳನ್ನು ಕೊಡುಗೆ ಯನ್ನು ಸ್ಮರಿಸಿದರು. ಹಿಮಾಲಯ ರಾಜ್ಯದೊಂದಿಗೆ ಇರುವ ದೀರ್ಘಕಾಲದ ಸಂಬಂಧ ವನ್ನು ಪ್ರಸ್ತಾಪಿಸಿದರು. ಐಸಿಎಫ್ಎಐ ಗುಂಪು ಉನ್ನತ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿ ಕ್ಷೇತ್ರಗಳಲ್ಲಿ ನೀಡುತ್ತಿರುವ ವ್ಯಾಪಕ ಸೇವೆಗಳು ಮತ್ತು ಪರಿಣಾಮಕಾರಿ ಕೊಡುಗೆಗಳ ಕುರಿತು ವಿವರಿಸಿದರು.
ಪ್ರೊ.ವೈಸ್ ಚಾನ್ಸಲರ್ ಡಾ.ಮುದ್ದು ವಿನಯ್ ಅವರು "ಲೈಫ್ ಚಕ್ರ" ಕುರಿತು ಸಂಕ್ಷಿಪ್ತ ಪರಿಚಯ ನೀಡಿ, ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸದಾ ಸಂತೋಷ ವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.