ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bangalore News: ಅಂತಾರಾಷ್ಟ್ರೀಯ ಲೆಕ್ಕಪತ್ರ ನಿರ್ವಹಣಾ ದಿನ ಪ್ರಯುಕ್ತ ಕಾರ್ಯತಂತ್ರ ಮತ್ತು ಸುಸ್ಥಿರ ಬೆಳವಣಿಗೆ ಕುರಿತು ಐಸಿಎಂಎಐ ನಿಂದ ಉನ್ನತ ಮಟ್ಟದ ವಿಚಾರ ಸಂಕಿರಣ

ವೃತ್ತಿಪರ ಉದ್ಯಮಿಗಳು ಮತ್ತು ತಜ್ಞ ವೃತ್ತಿಪರರು ಫಲಕ ಚರ್ಚೆಗಳ ಮೂಲಕ ಹಲವಾರು ಪ್ರಮುಖ ವಿಷಯಗಳನ್ನು ಇಲ್ಲಿ ಚರ್ಚಿಸಿದರು. ಈ ವಿಚಾರಸಂಕಿರಣವನ್ನು, ಸೇವಾ ವಲಯ, ಉತ್ಪಾದನಾ ವಲಯ ಮತ್ತು ಕನ್ಸಲ್ಟಿಂಗ್ ನಿರ್ವಹಣೆ ಹಾಗೂ ಸೇವಾ ಪೂರ್ವವೀಕ್ಷಣೆ ಎಂಬ ವಿಷಯಗಳೆಂದು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿತ್ತು.

ಬೆಂಗಳೂರು: ಮ್ಯಾನೇಜ್ ಮೆಂಟ್ ಅಕೌಂಟಿಂಗ್: ಡ್ರೈವಿಂಗ್ ಸ್ಟ್ರಾಟಜಿ, ಪರ್ ಫಾರ್ಮೆನ್ಸ್ ಅಂಡ್ ಸಸ್ಟೈನೆಬಲ್ ವ್ಯಾಲ್ಯೂ - ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಭಾರತೀಯ ವೆಚ್ಚ ಲೆಕ್ಕಪರಿಶೋಧಕರ ಸಂಸ್ಥೆ ಬೆಂಗಳೂರಿನಲ್ಲಿ ಆಯೋಜಿಸಿದೆ. ಇಂದಿನ ಚಲನಶೀಲ ವ್ಯಾಪಾರ ಕ್ಷೇತ್ರದಲ್ಲಿ ಲೆಕ್ಕಪತ್ರ ನಿರ್ವಹಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಗುರಿಯನ್ನು ಈ ವಿಚಾರಸಂಕಿರಣ ಹೊಂದಿದೆ.

ವೃತ್ತಿಪರ ಉದ್ಯಮಿಗಳು ಮತ್ತು ತಜ್ಞ ವೃತ್ತಿಪರರು ಫಲಕ ಚರ್ಚೆಗಳ ಮೂಲಕ ಹಲವಾರು ಪ್ರಮುಖ ವಿಷಯಗಳನ್ನು ಇಲ್ಲಿ ಚರ್ಚಿಸಿದರು. ಈ ವಿಚಾರಸಂಕಿರಣವನ್ನು, ಸೇವಾ ವಲಯ, ಉತ್ಪಾದನಾ ವಲಯ ಮತ್ತು ಕನ್ಸಲ್ಟಿಂಗ್ ನಿರ್ವಹಣೆ ಹಾಗೂ ಸೇವಾ ಪೂರ್ವವೀಕ್ಷಣೆ ಎಂಬ ವಿಷಯಗಳೆಂದು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿತ್ತು. ವೃತ್ತಿಪರ ತಜ್ಞರು ಹಾಗೂ ಸಲಹೆ ಗಾರರು ತಮ್ಮ ಹಲವಾರು ವರ್ಷಗಳ ಅನುಭವಗಳನ್ನು ಎಲ್ಲ ಶಿಬಿರಾರ್ಥಿಗಳೊಂದಿಗೆ ಹಂಚಿ ಕೊಂಡರು.

ಕಾರ್ಯಕ್ರಮವನ್ನು ಐಸಿಎಂಎಐ, ಸಿಎಂಎ ಟಿಸಿಎ ಅಧ್ಯಕ್ಷರಾದ ಶ್ರೀನಿವಾಸ ಪ್ರಸಾದ್, ಸಿಎಂಎ ಉಪಾಧ್ಯಕ್ಷರಾದ ನೀರಜ್ ಡಿ. ಜೋಷಿ. ಕೌನ್ಸಿಲ್ ಸದಸ್ಯ, ಸಿಎಂಎ ಲೆಕ್ಕಪತ್ರ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಆರ್ ಗುಂಜಲ್ಲಿ ಮತ್ತು ಬೆಂಗಳೂರು ಚಾಪ್ಟರ್ ಸಿಎಂಎ ಅಧ್ಯಕ್ಷರಾದ ರಾಘವೇಂದ್ರ ಬಿ.ಕೆ. ಅವರು ಜೊತೆಯಾಗಿ ಉದ್ಘಾಟಿಸಿದರು. ಇದೇ ವೇಳೆ, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರತಿಷ್ಠಿತ ಐಸಿಎಂಎಐ ಪ್ರಶಸ್ತಿಯನ್ನು ಘೋಷಿಸಲಾಯಿತು.

ಇದನ್ನೂ ಓದಿ: Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್

ಲೆಕ್ಕಪತ್ರ ನಿರ್ವಹಣೆಯ ತತ್ವ ಹಾಗೂ ಅಭ್ಯಾಸಗಳನ್ನು ಅಳವಡಿಸುವಲ್ಲಿ ಸಂಸ್ಥೆ ತೋರಿದ ಪ್ರಬುದ್ಧತೆಯ ಮಟ್ಟವನ್ನು ಮೌಲ್ಯಮಾಪನ ಮಾಡಿ, ಜಾಗತಿಕ ನಾಯಕತ್ವದಲ್ಲಿ ಮುಂದುವರಿ ಯುವ ಬಗ್ಗೆ ಸಂಸ್ಥೆಗೆ ಇರುವ ಅರಿವು, ಅನುಷ್ಠಾನ ಮತ್ತು ಹೊಂದಾಣಿಕೆಯ ನೀತಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಸೇವಾ ವಲಯದ ಕುರಿತ ಮೊದಲ ಫಲಕ ಚರ್ಚೆಯಲ್ಲಿ ಉಪಾಧ್ಯಕ್ಷ ಮತ್ತು ಜಪಕ್ ನಿಯಂತ್ರಣ ಕಾರ ಸಿಎಂಎ ಗೋಪಾಲ್ ರಮಣನ್, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ರಾದ ಸಿಎಂಎ ನಾರಾಯಣ ರಾವ್ ಮುಂತಾದ ಖ್ಯಾತನಾಮರು ಭಾಗವಹಿಸಿದರು. ನಿರ್ವಹಣಾ ಸಲಹೆಗಾರರಾದ ಸಿಎಂಎ ಮಿಲಿಂದ್ ಡಾಟೆ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದರು.

ಉತ್ಪಾದನಾ ವಲಯ ಕುರಿತ ಎರಡನೇ ಚರ್ಚೆಯಲ್ಲಿ ಬಿಇಎಂಎಲ್ ಲಿಮಿಟೆಡ್ (ಆರ್ಥಿಕ ) ನಿರ್ದೇಶಕರಾದ ಸಿಎಂಎ ಅನಿಲ್ ಜೆರಾತ್, ಟೆಕ್ ಮಹೀಂದ್ರಾ ತಾಂತ್ರಿಕ ಉಪಪಕ್ರಮ ವಿಭಾಗದ ಉಪಾಧ್ಯಕ್ಷರಾದ ಸಿಎಂಎ ಚೆನ್ನ ಬಸವರಾಜ ಮುಂತಾದ ಗಣ್ಯರು ಭಾಗವಹಿಸಿದರು. ನಿರ್ವಹಣಾ ಸಲಹೆಗಾರ ಸಿಎಂಎ ರವೀಂದ್ರನಾಥ್ ಕೌಶಿಕ್ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದರು.

ಆಡಳಿತ ನಿರ್ವಹಣೆ ಕನ್ಸಲ್ಟಿಂಗ್ ಮತ್ತು ಸೇವೆಗಳ ಕುರಿತು ನಡೆದ ಮೂರನೇ ಚರ್ಚೆಯಲ್ಲಿ ಖ್ಯಾತ ಆಡಳಿತ ಸಲಹೆಗಾರ, ಸಿಎಂಎ (ಡಾ.) ಗಿರೀಶ್ ಜಕೋಟಿಯ, ನವೋತ್ತಮ್ ಕನ್ಸಲ್ಟಿಂಗ್ ಪ್ರೈವೇಟ್ ಲಿ. ಸಿಎಂಎ ಆಸಿಮ್ ಕುಮಾರ್ ಭಾಗವಹಿಸಿದರು. ಟೋಟಲ್ ಕಾಸ್ಟ್ ಅಂಡ್ ಮ್ಯಾನೇಜ್ ಮೆಂಟ್ ಎಜುಕೇಟರ್ ಹಾಗೂ ಕೋಚ್ ಆಗಿರುವ ಸಿಎಂಎ ಎಸ್ ದೊರೈ ರಾಜನ್ ಮಾರ್ಗದರ್ಶಕರಾಗಿ ಚರ್ಚೆಯನ್ನು ನಡೆಸಿಕೊಟ್ಟರು.