ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಹೃದಯ ಮತ್ತು ಶ್ವಾಸಕೋಶ ಪಿಂಡಗಳ ಪ್ರತಿರೋಪಣ ಮತ್ತು ಯಾಂತ್ರಿಕ ಸಂಚಾರ ಬೆಂಬಲ (ಎಂ.ಸಿ.ಎಸ್)' ಘಟಕ ಉದ್ಘಾಟನೆ

ಪಿಂಡ ಪ್ರತಿರೋಪಣ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಮುಂಚೂಣಿಯಲ್ಲಿದ್ದರೂ, ಕರ್ನಾಟಕದಲ್ಲಿ ಅಪೋಲೊ ಆಸ್ಪತ್ರೆಗಳ ಸಂಪೂರ್ಣ ಸಮಗ್ರ ಹೃದಯ ಮತ್ತು ಶ್ವಾಸಕೋಶ ಪ್ರತಿರೋಪಣ ಕಾರ್ಯಕ್ರಮ ಇದೇ ಮೊದಲಾಗಿದ್ದು ರಾಜ್ಯ ಮತ್ತು ನೆರೆಯ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಪ್ರಮುಖ ಕೇಂದ್ರವಾಗಿ ಶೇಷಾದ್ರಿಪುರಂ ವಿಕಸಿತಗೊಂಡಿದೆ.

ಬೆಂಗಳೂರು: ಕರ್ನಾಟಕದಲ್ಲಿ ಅತ್ಯಾಧುನಿಕ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗಳ ಚಿಕಿತ್ಸೆ ಯಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುವಂತೆ, ಅಪೋಲೊ ಆಸ್ಪತ್ರೆಗಳು ಶೇಷಾದ್ರಿಪುರಂ ನಲ್ಲಿ ತನ್ನ ನಿರ್ದಿಷ್ಟ 'ಹೃದಯ ಮತ್ತು ಶ್ವಾಸಕೋಶ ಪಿಂಡಗಳ ಪ್ರತಿರೋಪಣ ಮತ್ತು ಯಾಂತ್ರಿಕ ಸಂಚಾರ ಬೆಂಬಲ (ಎಂ.ಸಿ.ಎಸ್)' ಘಟಕವನ್ನು ಉದ್ಘಾಟಿಸಿತು.

ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ (ಬಿ.ಎಂ.ಆರ್.ಸಿ.ಎಲ್.) ನ ಎಂಡಿ ಡಾ. ರವಿಶಂಕರ್ ಜೆ ಐ.ಎ.ಎಸ್. ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದೊಂದಿಗೆ, ರಾಜ್ಯದಲ್ಲಿ ಅಪೋಲೊ ಆಸ್ಪತ್ರೆಗಳ ಅತ್ಯುನ್ನತ ಹೃದಯ ಮತ್ತು ಶ್ವಾಸಕೋಶ ವಿಭಾಗದ ಸೇವೆಗಳು ಗಣನೀಯ ವಾಗಿ ವಿಸ್ತರಿಸಿವೆ.

ಪಿಂಡ ಪ್ರತಿರೋಪಣ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಮುಂಚೂಣಿಯಲ್ಲಿದ್ದರೂ, ಕರ್ನಾಟಕದಲ್ಲಿ ಅಪೋಲೊ ಆಸ್ಪತ್ರೆಗಳ ಸಂಪೂರ್ಣ ಸಮಗ್ರ ಹೃದಯ ಮತ್ತು ಶ್ವಾಸಕೋಶ ಪ್ರತಿರೋಪಣ ಕಾರ್ಯಕ್ರಮ ಇದೇ ಮೊದಲಾಗಿದ್ದು ರಾಜ್ಯ ಮತ್ತು ನೆರೆಯ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಪ್ರಮುಖ ಕೇಂದ್ರವಾಗಿ ಶೇಷಾದ್ರಿಪುರಂ ವಿಕಸಿತಗೊಂಡಿದೆ. ಈ ಪ್ರದೇಶಗಳು ಭಾರತದ ಅಂಗದಾನ ಸರಬರಾಜಿ ನಲ್ಲಿ ಸಕ್ರಿಯವಾಗಿ ಭಾಗವಹಿಸುವ ಪ್ರದೇಶಗಳಾಗಿವೆ. 'ನಮ್ಮ ಮೆಟ್ರೋ' ವೇಗದ ಅಂಗ ಸಾಗಾಣಿಕೆ ಯಲ್ಲಿ ನಿರ್ಣಾಯಕ ಪಾತ್ರ ವಹಿಸಿ, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿ, ರೋಗಿಯ ಚೇತರಿಕೆಗೆ ಸಹಾಯ ಮಾಡಿದ ಇತ್ತೀಚಿನ ಯಶಸ್ವಿ ಹೃದಯ ಪ್ರತಿರೋಪಣದ ನಂತರ ಈ ಘಟಕವನ್ನು ಆರಂಭಿಸಲಾಯಿತು.

ಇದನ್ನೂ ಓದಿ: Bangalore News: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಕಿ.ಮೀ ಉದ್ದ ಕನ್ನಡ ಧ್ವಜದ ಮೆರವಣಿಗೆ

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತನ ಎಂಡಿ ಡಾ. ರವಿಶಂಕರ್ ಜೆ ಐ.ಎ.ಎಸ್. ಅವರು ಮಾತನಾಡಿ "ಈ ಐತಿಹಾಸಿಕ ಕಾರ್ಯದಲ್ಲಿ ದಾನಿ ಹೃದಯ ವನ್ನು ಸಮಯಕ್ಕೆ ಸಾಗಿಸುವಲ್ಲಿ 'ನಮ್ಮ ಮೆಟ್ರೋ' ನಿರ್ಣಾಯಕ ಪಾತ್ರ ವಹಿಸಿದ್ದು ನಮಗೆ ಹೆಮ್ಮೆಯ ವಿಷಯ. ಸಾರ್ವಜನಿಕ ಮೂಲಸೌಕರ್ಯವು ಪ್ರಾಣದಾನ ಮಾಡುವ ಆರೋಗ್ಯ ಸೇವೆಗಳನ್ನು ಹೇಗೆ ನೇರವಾಗಿ ಬೆಂಬಲಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಬೆಂಗಳೂರುಂತೆ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ, ಸಮಯಸೂಕ್ಷ್ಮ ತುರ್ತು ಚಿಕಿತ್ಸೆಗೆ ನಗರ ಚಲನಶೀಲತೆ ಅತ್ಯಗತ್ಯವಾಗುತ್ತಿದೆ. ಅಪೋಲೊ ಹೊಸ ಕಾರ್ಯಕ್ರಮವು ನಗರದ ಜೀವರಕ್ಷಣಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಪ್ರತಿ ಸೆಕೆಂಡ್ ಮಹತ್ವದ್ದಾಗಿರುವ ಅಂತಹ ಪ್ರಗತಿಗಳನ್ನು ಬೆಂಬಲಿಸಲು ಬಿ.ಎಂ.ಆರ್.ಸಿ.ಎಲ್. ಬದ್ಧವಾಗಿದೆ."

ಶೇಷಾದ್ರಿಪುರಂನಲ್ಲಿನ ಹೊಸ ಕಾರ್ಯಕ್ರಮವು ವಿಶೇಷ ಶಸ್ತ್ರಚಿಕಿತ್ಪಾ ಕೊಠಡಿಗಳು, ಪ್ರತಿ ರೋಪಣಕ್ಕೆ ಸಿದ್ಧವಾದ ತೀವ್ರ ಪರಿಚರ್ಯಾ ಘಟಕಗಳು (ICU), ಅತ್ಯಾಧುನಿಕ ಮಾನಿಟರಿಂಗ್ ವ್ಯವಸ್ಥೆಗಳು ಮತ್ತು ನಿರ್ದಿಷ್ಟ ಪುನರ್ವಸತಿ ಸೇವೆಗಳನ್ನು ಒಳಗೊಂಡಿದೆ. ರೋಗಿಗಳಿಗೆ ಮೌಲ್ಯ ಮಾಪನದಿಂದ ದೀರ್ಘಕಾಲದ ಮೇಲ್ವಿಚಾರಣೆಯವರೆಗಿನ ಎಂಡ್ - to - ಎಂಡ್, ನಿಬಂಧನಾಬದ್ಧ ಆರೈಕೆ ಲಭ್ಯವಿರುತ್ತದೆ. ಈ ಕೇಂದ್ರವು ಈ ಕೆಳಗಿನ ಎಲ್ಲಾ ಅತ್ಯಾಧುನಿಕ ಚಿಕಿತ್ಸಾ ಸೇವೆಗಳನ್ನು ನೀಡಲಿದೆ:

* ಹೃದಯ, ಶ್ವಾಸಕೋಶ ಮತ್ತು ಸಂಯುಕ್ತ ಹೃದಯ-ಶ್ವಾಸಕೋಶ ಪ್ರತಿರೋಪಣ

* ಆಯ್ದ ಬಹು-ಅಂಗ ಪ್ರತಿರೋಪಣಗಳು (ಉದಾ: ಹೃದಯ-ಯಕೃತ್ತು ಮತ್ತು ಹೃದಯ-ಮೂತ್ರಪಿಂಡ)

*ತಾತ್ಕಾಲಿಕ ಮತ್ತು MCS (ಸ್ಥಿರ ಯಾಂತ್ರಿಕ ಸಂಚಾರ ಬೆಂಬಲ) ಮತ್ತು ಎಕ್ಮೊ (ECMO -ಎಸ್ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್)

* ಪ್ರದೇಶದಾದ್ಯಂತ ತೀವ್ರ ಅಸುಖಗ್ರಸ್ತ ರೋಗಿಗಳನ್ನು ನಿರ್ವಹಿಸಲು ಸಮರ್ಥವಾದ ವಿಶೇಷ ಪಡೆಯೊಂದಿಗೆ ದಾನಿ ಅಂಗಗಳನ್ನು ಪಡೆದುಕೊಳ್ಳುವ ತಂಡ

ಅಪೋಲೊ ಆಸ್ಪತ್ರೆಗಳ ಹೃದಯ & ಶ್ವಾಸಕೋಶ ಪ್ರತಿರೋಪಣ ಮತ್ತು ಎಂ.ಸಿ.ಎಸ್. ಕಾರ್ಯ ಕ್ರಮದ ಮತ್ತು ಶಸ್ತ್ರಚಿಕಿತ್ಪಾ ನಿರ್ದೇಶಕ ಡಾ. ಕುಮುದ್ ಕುಮಾರ್ ಧಿತಾಲ್ ಹೇಳಿದರು: "ಕಳೆದ ಎರಡು ವರ್ಷಗಳಲ್ಲಿ, ನಮ್ಮ ಚೆನ್ನೈ ಮತ್ತು ಬೆಂಗಳೂರು ತಂಡಗಳು ಈ ಪ್ರದೇಶಕ್ಕೆ ಒಂದು ದೃಢ, ಕ್ಲಿನಿಕಲ್ ರೀತಿಯಲ್ಲಿ ಬಲವಾದ ಪ್ರತಿರೋಪಣ ಸೇವೆಯನ್ನು ನಿರ್ಮಿಸಿವೆ. ಈ ಔಪಚಾರಿಕ ಉದ್ಘಾಟನೆಯೊಂದಿಗೆ, ನಾವು ಈಗ ಅಂತಿಮ ಹಂತದ ಹೃದಯ ಮತ್ತು ಶ್ವಾಸಕೋಶ ಕಾಯಿಲೆ ಯಿಂದ ಬಳಲುವ ರೋಗಿಗಳಿಗೆ ಸಮಗ್ರ ಆರೈಕೆ ನೀಡಲು ಸಿದ್ಧರಿದ್ದೇವೆ. ಇದಕ್ಕೆ ಸುಸ್ಥಿರವಾಗಿ ಸುರಕ್ಷಿತ ಮತ್ತು ಯಶಸ್ವಿ ಫಲಿತಾಂಶಗಳಿಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಬಹು-ವಿಭಾಗೀಯ ತಜ್ಞತೆಯ ಬೆಂಬಲ ಇದೆ."

ಅಪೋಲೊ ಆಸ್ಪತ್ರೆಗಳ ಶ್ವಾಸಕೋಶ ಮತ್ತು ಪ್ರತಿರೋಪಣ ಪಲ್ಮನರಿ ಲೀಡ್ ಡಾ. ಶ್ರೀನಿವಾಸ್ ರಾಜಗೋಪಾಲ್ ಅವರು: "ಯಶಸ್ವಿ ಶ್ವಾಸಕೋಶ ಪ್ರತಿರೋಪಣವು ಕೇವಲ ಶಸ್ತ್ರಚಿಕಿತ್ಪಾ ಉತ್ಕೃಷ್ಟತೆಯ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಆದರೆ ಪ್ರತಿರೋಪಣದ ಪೂರ್ವ ಮತ್ತು ನಂತರದ ಕಾಳಜಿಯ ಮೇಲೆ ಅವಲಂಬಿತವಾಗಿದೆ. ಈ ಕಾರ್ಯಕ್ರಮವು ಪ್ರಮಾಣಿತ ನಿಬಂಧನೆಗಳು ಮತ್ತು ಅತ್ಯಾಧುನಿಕ ಮಾನಿಟರಿಂಗ್ ವ್ಯವಸ್ಥೆಗಳಿಂದ ಬೆಂಬಲಿತವಾದ ಸಮಗ್ರ ಆರೈಕೆ ನೀಡುವ ನಮ್ಮ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ."

ಅಪೋಲೊ ಆಸ್ಪತ್ರೆಗಳ ಪ್ರಗತ ಹೃದಯ ವಿಫಲತೆ ಮತ್ತು ಪ್ರತಿರೋಪಣ ಕಾರ್ಡಿಯಾಲಜಿ ಕ್ಲಿನಿಕಲ್ ಲೀಡ್ ಡಾ. ರವಿ ಕುಮಾರ್ ಮಾತನಾಡಿ ಹೃದಯ ಮತ್ತು ಶ್ವಾಸಕೋಶದ ಸ್ಥಿತಿಗಳಿಗೆ ಬಿಗಿಯಾಗಿ ಸಮನ್ವಯಗೊಂಡ ಬಹು-ವಿಶೇಷತೆಯ ಆರೈಕೆ ಅಗತ್ಯವಿದೆ. ಈ ಕಾರ್ಯಕ್ರಮವು ಮೌಲ್ಯಮಾಪನ, ಸ್ಥಿರೀಕರಣ ಮತ್ತು ದೀರ್ಘಕಾಲದ ಯೋಜನೆಗೆ ಹೆಚ್ಚಿನ ವ್ಯವಸ್ಥಿತತೆ ಮತ್ತು ಸಮರಸತೆಯನ್ನು ತರುತ್ತದೆ - ಊಹಿಸಬಹುದಾದ, ಸ್ಥಿರ ಫಲಿತಾಂಶಗಳನ್ನು ಸಾಧಿಸಲು ಇವು ನಿರ್ಣಾಯಕ ಅಂಶ ಗಳಾಗಿವೆ."

ಅಪೋಲೊ ಆಸ್ಪತ್ರೆಗಳು, ಶೇಷಾದ್ರಿಪುರಂನ ಉಪಾಧ್ಯಕ್ಷ ಶ್ರೀ ಉದಯ್ ದವ್ಡಾ ಅವರು ಮಾತನಾಡಿ, "ಈ ಕಾರ್ಯಕ್ರಮವು ಕರ್ನಾಟಕದ ವಿಶೇಷ ಆರೈಕೆ ಮಾರ್ಗಗಳನ್ನು ಬಲಪಡಿಸುತ್ತದೆ, ಮುಂದು ವರಿದ ಪ್ರತಿರೋಪಣ ಮತ್ತು ಯಾಂತ್ರಿಕ ಬೆಂಬಲ ಸೇವೆಗಳು ಮನೆಯ ಹತ್ತಿರವೇ ಲಭ್ಯವಿರುವಂತೆ ಖಾತರಿ ಮಾಡುತ್ತದೆ. ಅಂಗದಾನ ಸರಬರಾಜಿನಲ್ಲಿ ಭಾರತದ ಪ್ರಮುಖ ಕೊಡುಗೆದಾರರಾಗಿರುವ ಕರ್ನಾಟಕವು, ಪ್ರತಿ ಅಮೂಲ್ಯ ದಾನವನ್ನು ಗೌರವಿಸುವ ವರ್ಧಿತ ಪ್ರತಿರೋಪಣ ಸಾಮಥ್ರ್ಯಗಳಿಂದ ಹೆಚ್ಚಿನ ಪ್ರಯೋಜನ ಪಡೆಯಲಿದೆ."

ಅಪೋಲೊ ಆಸ್ಪತ್ರೆಗಳು, ಕರ್ನಾಟಕ ಪ್ರದೇಶದ ಸಿಇಒ ಶ್ರೀ ಅಕ್ಷಯ್ ಒಲೇಟಿ ಅವರು ಮಾತನಾಡಿ "ಈ ನಿರ್ದಿಷ್ಟ ಹೃದಯ ಮತ್ತು ಶ್ವಾಸಕೋಶ ಪ್ರತಿರೋಪಣ ಘಟಕದೊಂದಿಗೆ, ನಾವು ಕರ್ನಾಟಕ ದಲ್ಲಿ ಹೃದಯ ಮತ್ತು ಶ್ವಾಸಕೋಶದ ಆರೈಕೆಯನ್ನು ಮುನ್ನಡೆಸುವಲ್ಲಿ ಒಂದು ದೊಡ್ಡ ಜಿಗಿತ ವನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ನಿಪುಣ ಕ್ಲಿನಿಕಲ್ ತಂಡ, ಅತ್ಯಾಧುನಿಕ ಮೂಲಸೌಕರ್ಯ ಮತ್ತು 'ನಮ್ಮ ಮೆಟ್ರೋ' ಜೊತೆಗಿನ ನಾವೀನ್ಯಪೂರ್ಣ ಪಾಲುದಾರತ್ವವು ಈ ಪ್ರದೇಶಕ್ಕೆ ಜಾಗತಿಕ ಮಟ್ಟದ, ಜೀವರಕ್ಷಕ ಚಿಕಿತ್ಸೆಗಳನ್ನು ಸಾಧ್ಯಗೊಳಿಸುತ್ತದೆ."

ಅಪೋಲೊ ಆಸ್ಪತ್ರೆಯ ಪ್ರತಿರೋಪಣ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದ ರೋಗಿಗಳು ತಮ್ಮ ಕಥನಗಳನ್ನು ಹಂಚಿಕೊಂಡರು ಮತ್ತು ದಾನಿ ಕುಟುಂಬಗಳು ಮತ್ತು ವೈದ್ಯಕೀಯ ತಂಡಗಳಿಗೆ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ದಾನಿ ಹೃದಯವನ್ನು 'ನಮ್ಮ ಮೆಟ್ರೋ' ಮೂಲಕ ಸಾಗಿಸಲಾದ ಇತ್ತೀಚಿನ ಹೃದಯ ಪ್ರತಿರೋಪಣದ ರೋಗಿಯು ತಮ್ಮ ಅನುಭವವನ್ನು ಹಂಚಿಕೊಂಡು, ನಿರ್ಣಾಯಕ ಕ್ಷಣದಲ್ಲಿ ಸರಾಗ ಮೂಲಸೌಕರ್ಯ ಮತ್ತು ಕುಶಲತೆಯ ಕ್ಲಿನಿಕಲ್ ಆರೈಕೆಯು ಹೇಗೆ ಒಂದಾಗಿ ಸೇರಬಹುದು ಮತ್ತು ಇಲ್ಲದಿದ್ದರೆ ಸಾಧ್ಯವಾಗು ತ್ತಿರಲಿಲ್ಲದ ಜೀವರಕ್ಷಕ ಪ್ರತಿರೋಪಣವನ್ನು ಸಾಧ್ಯಗೊಳಿಸಬಹುದು ಎಂಬುದನ್ನು ತೋರಿಸಿದರು ಎಂದರು.