ಯಾತ್ರಾ ಸ್ಥಳಗಳಿಗೆ ಮೇಕ್ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್ ಪ್ರಮಾಣ ಹೆಚ್ಚಳ
ಯಾತ್ರಾ ಬೇಡಿಕೆಯಲ್ಲಿನ ಪ್ರಬಲ ಬೆಳವಣಿಗೆಗೆ, ಪ್ರಮುಖ ಗಮ್ಯಗಳಾದ್ಯಂತ ವಸತಿಯ ಚುರುಕಾದ ವಿಸ್ತರಣೆಯೂ ಕಾರಣವಾಗಿದೆ. ಪ್ರಯಾಣಿಕರು ಬಹುತೇಕವಾಗಿ, ಚಿಕ್ಕದಾದ, ಉದ್ದಿಶ್ಯಿತ ವಸತಿ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವರುಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಮಂದಿ ಒಂದು-ರಾತ್ರಿ ಪ್ರವಾಸ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

-

ಬೆಂಗಳೂರು: ದೇಶಾದ್ಯಂತ ತೀರ್ಥಯಾತ್ರೆಗೆ ತೆರಳುವವರ ಸಂಖ್ಯೆ ಹೆಚ್ಚುತ್ತಿದ್ದು, 2024-25 ವರ್ಷ ದಲ್ಲಿ ತೀರ್ಥಯಾತ್ರೆಗಳ ವಸತಿ ಬುಕ್ಕಿಂಗ್‌ನಲ್ಲಿ ಶೇ. 19ರಷ್ಟು ವೃದ್ಧಿಯಾಗಿದೆ ಎಂದು ಮೇಕ್ ಮೈ ಟ್ರಿಪ್ ತಿಳಿಸಿದೆ.
ಈ ಕುರಿತು ಮಾತನಾಡಿದ ಮೇಕ್‌ಮೈಟ್ರಿಪ್‌ನ ಸಹಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಗೊವ್, ತನ್ನ ಬುಕ್ಕಿಂಗ್ ಆಪ್‌ನಲ್ಲಿ ತೀರ್ಥಯಾತ್ರಿಕ ಸಂಖ್ಯೆ ಹೆಚ್ಚುತ್ತಿದ್ದು, ದೇಶಾದ್ಯಂತ 34 ತಾಣಗಳಲ್ಲಿ ಎರಡಂಕಿ ಬೆಳವಣಿಗೆ ದಾಖಲಿಸಿದೆ, ಇನ್ನು, 15 ತಾಣಗಳಲ್ಲಿ ಶೇ.25ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸುವ ಮೂಲಕ ಆಧ್ಯಾತ್ಮಿಕ ಪ್ರಯಾಣಕ್ಕೆ ಜನ ಆದ್ಯತೆ ನೀಡುತ್ತಿರುವುದು ತಿಳಿದು ಬಂದಿದೆ.
ಪ್ರಮುಖ ಧಾರ್ಮಿಕ ಸ್ಥಳಗಳಾದ ಪ್ರಯಾಗ್‌ರಾಜ್, ವಾರಣಾಸಿ, ಅಯೋಧ್ಯ, ಪುರಿ, ಅಮೃತ್ಸರ, ಮತ್ತು ತಿರುಪತಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಹೆಚ್ಚು ಬುಕ್ಕಿಂಗ್ ಆಗಿವೆ. ಜೊತೆಗೆ, ಖಾತುಷ್ಯಾಮ್ ಜಿ, ಓಂಕಾರೇಶ್ವರ ಮತ್ತು ತಿರುಚೆಂದೂರ್ ಮುಂತಾದ ಸ್ಥಳಗಳೂ ಕೂಡ ಹೆಚ್ಚು ಬುಕ್ಕಿಂಗ್ ನೋಡಬಹುದು.
ಇದನ್ನೂ ಓದಿ: Best Trip plan: ಗೋವಾ ಟು ಹಿಮಾಚಲ ಪ್ರದೇಶ ಟ್ರಿಪ್ ಮಾಡಿದ್ರೆ ಮಿಸ್ ಮಾಡ್ದೆ ಈ ಸ್ಥಳಗಳಿಗೆ ಭೇಟಿ ನೀಡಿ- ನಿಜವಾಗ್ಲೂ ಸ್ವರ್ಗ!
ಯಾತ್ರಾ ಬೇಡಿಕೆಯಲ್ಲಿನ ಪ್ರಬಲ ಬೆಳವಣಿಗೆಗೆ, ಪ್ರಮುಖ ಗಮ್ಯಗಳಾದ್ಯಂತ ವಸತಿಯ ಚುರುಕಾದ ವಿಸ್ತರಣೆಯೂ ಕಾರಣವಾಗಿದೆ. ಪ್ರಯಾಣಿಕರು ಬಹುತೇಕವಾಗಿ, ಚಿಕ್ಕದಾದ, ಉದ್ದಿಶ್ಯಿತ ವಸತಿ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವರುಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಮಂದಿ ಒಂದು-ರಾತ್ರಿ ಪ್ರವಾಸಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಅದೇ ವೇಳೆ, ಪ್ರೀಮಿಯಮೀಕರಣವು ಕೂಡ ಎಚ್ಚಿದ್ದು, 7 ಸಾವಿರ ರೂ. ಮೇಲ್ಪಟ್ಟ ಬೆಲೆಯ ರೂಮ್‌ಗಳಿಗೆ ಬುಕಿಂಗ್‌ಗಳು ಶೇ.20ಕ್ಕಿಂತ ಹೆಚ್ಚು ಬೆಳೆದಿವೆ ಎಂದರು.
ಆಧ್ಯಾತ್ಮಿಕ ಪ್ರವಾಸದಲ್ಲಿ ಶೇ. 53ರಷ್ಟು ಜನರು ಕೇವಲ ಒಂದು ರಾತ್ರಿಯ ಪ್ರವಾಸವನ್ನು ಆಯ್ಕೆ ಮಾಡುತ್ತಾರೆ, ಇದು ಮನೋರಂಜನಾ ಪ್ರವಾಸದಕ್ಕೆ ಹೋಲಿಕೆ ಮಾಡಿದರೆ ಹೆಚ್ಚು. ಎರಡು ರಾತ್ರಿ ಬುಕ್ಕಿಂಗ್ ಮಾಡುವವರ ಪ್ರಮಾಣ ಶೇ.31ರಷ್ಟಿದೆ ಎಂದು ವಿವರಿಸಿದರು.