ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Best Trip plan: ಗೋವಾ ಟು ಹಿಮಾಚಲ ಪ್ರದೇಶ  ಟ್ರಿಪ್ ಮಾಡಿದ್ರೆ ಮಿಸ್ ಮಾಡ್ದೆ ಈ ಸ್ಥಳಗಳಿಗೆ ಭೇಟಿ ನೀಡಿ- ನಿಜವಾಗ್ಲೂ ಸ್ವರ್ಗ!

Best Trip plan: ನೀವೇನಾದರೂ  ಗೋವಾದಿಂದ ಹಿಮಾಚಲ ಪ್ರದೇಶವರೆಗೆ ಪ್ರವಾಸ ಕೈಗೊಂಡರೆ ಸಾಕಷ್ಟು  ಕಣ್ತುಂಬಿಕೊಳ್ಳುವ ರಮಣೀಯ  ಸ್ಥಳ ಇರಲಿದ್ದು ಇಲ್ಲಿನ ಈ  ಐದು  ಸ್ಥಳಗಳಿಗೆ ಭೇಟಿ ಕೊಡಲೇಬೇಕು.

Profile Pushpa Kumari Dec 30, 2024 6:00 AM
ನವ ದೆಹಲಿ: ಭಾರತವು ವೈವಿಧ್ಯಮಯ, ಮನಮೋಹಕ ಪ್ರವಾಸಿ ಸ್ಥಳಗಳ ಮುಖ್ಯ ತಾಣವಾಗಿದೆ. ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ ಭಾರತ ಕಡಲತೀರ, ಜಲಪಾತ, ಸರೋವರ, ಕಣಿವೆ ಮತ್ತು ಪ್ರಕೃತಿಯ ಎಲ್ಲಾ ಕೊಡುಗೆಗಳಿಗೆ  ಪ್ರಸಿದ್ದಿಯಾಗಿದೆ. ಇಲ್ಲಿನ ಪ್ರತಿಯೊಂದು ಸ್ಥಳವು ಪ್ರವಾಸ ಪ್ರಿಯರಿಗೆ ಮರೆಯಲಾಗದ ಅನುಭವ ನೀಡಲಿದೆ. ನೀವೇನಾದರೂ ಗೋವಾದಿಂದ ಹಿಮಾಚಲ ಪ್ರದೇಶವರೆಗೆ (Goa to Himachal Pradesh) ಪ್ರವಾಸ ಕೈಗೊಂಡರೆ ಸಾಕಷ್ಟು ಕಣ್ತುಂಬಿಕೊಳ್ಳುವ ರಮಣೀಯ  ಸ್ಥಳ ಇರಲಿದು, ಇಲ್ಲಿನ ಈ ಐದು ಸ್ಥಳಗಳಿಗೆ ಭೇಟಿ ಕೊಡಲೇಬೇಕು(Best Trip plan).
ಗೋವಾ:
ಗೋವಾ  ವರ್ಣರಂಜಿತ ಕಡಲತೀರಗಳ ಸ್ಥಳಕ್ಕೆ  ಹೆಸರುವಾಸಿಯಾಗಿದ್ದು ಆಹ್ಲಾದಕರವಾದ ಕಡಲತೀರಗಳು  ಹಾಲ್ನೊರೆಯಂತಿರುವ ಜಲಪಾತಗಳು, ಚರ್ಚುಗಳು, ಮೋಜು ಮಸ್ತಿಗಳಿಗೆ ಹೇಳಿ ಮಾಡಿಸಿದ ಸ್ಥಳ ಆಗಿದೆ. ಹಾಗಾಗಿ ಟ್ರಿಪ್ ಹೋಗಬೇಕು, ಎಂಜಾಯ್ ಮಾಡಬೇಕು ಎಂದರೆ ಗೋವಾ ಹೇಳಿ ಮಾಡಿಸಿದ ಬೆಸ್ಟ್ ಟ್ರಿಪ್ ಪ್ಲೇಸ್ ಆಗಿದೆ . ಇಲ್ಲಿ ಸ್ಕೂಬಾ ಡೈವಿಂಗ್, ಜೆಟ್ ಸ್ಕೀಯಿಂಗ್, ವಿಂಡ್‌ಸರ್ಫಿಂಗ್ ಮತ್ತು ಪ್ಯಾರಾಸೈಲಿಂಗ್ ಸೇರಿದಂತೆ  ಕಡಲತೀರ, ನದಿ  ಮತ್ತು ಸೊಂಪಾದ ಭೂದೃಶ್ಯಗಳು   ರೋಮಾಂಚಕಾರಿ ಚಟುವಟಿಕೆಗಳಿಗೆ ಸೂಕ್ತವಾದ ತಾಣವಾಗಿದೆ.
ರಿಷಿಕೇಶ, ಉತ್ತರಾಖಂಡ:
ರಿಷಿಕೇಶವು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ನಗರವಾಗಿದ್ದು ಪರಿಸರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ, ವಿಶ್ರಾಂತಿ ಪಡೆಯಲು ಉತ್ತರಾಖಂಡದ ರಿಷಿಕೇಶ  ಉತ್ತಮ  ತಾಣ ಎಂದೇ ಹೇಳಬಹುದು. ಇಲ್ಲಿ ಅನೇಕ ಪ್ರಖ್ಯಾತ ದೇವಾಲಯಗಳು ಹೆಸರುವಾಸಿಯಾಗಿದ್ದು‌ ಚಾರ್ ಧಾಮ್ ಎಂದೇ ಕರೆಯಲಾಗುವ ಕೇದಾರನಾಥ್, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಕ್ಷೇತ್ರಕ್ಕೆ ಪ್ರವಾಸಿಗರು  ಭೇಟಿ  ನೀಡಬಹುದು.ಆಹ್ಲಾದಕರವಾದ ವಾತಾವರಣದ ಜೊತೆಗೆ ಬಂಗೀ ಜಂಪಿಂಗ್ ನಂತಹ ಚಟುವಟಿಕೆಗಳನ್ನು ಮಾಡ ಬಹುದು. ಕ್ಲಿಫ್ ಜಂಪಿಂಗ್ , ಕಯಾಕಿಂಗ್‌ನಿಂದ  ಕ್ಯಾಂಪಿಂಗ್ ಮಾಡುವುದು ಅಥವಾ  ಹಚ್ಚ ಹಸಿರಿನ ಹಾದಿಗಳಲ್ಲಿ ವಾಕಿಂಗ್ ಮಾಡುವುದು ಅಲ್ಲದೆ, ಇಲ್ಲಿ ರಿವರ್ ರಾಫ್ಟಿಂಗ್, ಕ್ಯಾಂಪಿಂಗ್, ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್ ಇತ್ಯಾದಿ  ಚಟುವಟಿಕೆಗಳನ್ನು ನೀವು ಇಲ್ಲಿ ಆನಂದಿಸಬಹುದು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಪ್ರವಾಸಿಗರಿಗೆ ಸ್ವರ್ಗವಾಗಿದೆ,  ನೈಸರ್ಗಿಕ ಸೌಂದರ್ಯದ  ಜೊತೆಗೆ ಇಲ್ಲಿ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಸ್ಕೂಬಾ ಡೈವಿಂಗ್ ಕೈಗೊಳ್ಳಬಬಹುದು. ಅಂಡಮಾನ್ ಸ್ವರಾಜ್ ಮತ್ತು ಶಾಹೀದ್ ದ್ವೀಪಗಳು ಜಲಕ್ರೀಡೆಗಳಿಗೆ ಹೆಚ್ಚು  ಪ್ರಸಿದ್ಧಿಯಾಗಿದ್ದು ಸಖತ್‌ ಎಂಜಾಯ್ ಮಾಡಲು ನೀವು‌ ಬ್ಯಾರೆನ್‌ ದ್ವೀಪಕ್ಕೆ ಹೋಗಬಹುದು.ಅಂಡಮಾನ್‌ನ ಚಿಡಿಯಾ ತಪು ಅಥವಾ ಸನ್‌ಸೆಟ್ ಪಾಯಿಂಟ್  ದಟ್ಟವಾದ ಮ್ಯಾಂಗ್ರೋವ್‌ ದ್ವೀಪದ  ಮೂಲಕ ಕಯಾಕಿಂಗ್,‌ ಪ್ಯಾರಾಸೈಲಿಂಗ್ ಮತ್ತು ಗ್ಲಾಸ್ ಬಾಟಮ್ ಬೋಟ್ ರೈಡ್‌ ಇಂತಹ ಥ್ರಿಲ್ ಚುಟುವಟಿಕೆ ಕೈಗೊಳ್ಳಬಹುದು.
ಮನಾಲಿ:
ಮನಾಲಿ ಭಾರತದಲ್ಲಿ ಭೇಟಿ ನೀಡಬೇಕಾದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಹಿಮಾಲಯ ದಲ್ಲಿರುವ ಮನಾಲಿಯು ರೋಮಾಂಚಕ ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿ ಯಾಗಿದ್ದು ‌ರೋಮಾಂಚಕ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಬಯಸುತ್ತಿದ್ದಲ್ಲಿ ಮನಾಲಿ ಯಲ್ಲಿ ವಿಶೇಷ ರಜಾ ಪ್ಯಾಕೇಜ್‌ಗಳು ಇವೆ. ಮಗಕುಲ್ಲು, ಸೋಲಾಂಗ್ ಮತ್ತು ರೋಹ್ಟಾಂಗ್ ಪಾಸ್ ಕಣಿವೆಗಳು ಕೂಡ ಇಲ್ಲಿ ಆಕರ್ಷಣೆ ಮಾಡುತ್ತಿದ್ದು  ಚಳಿಗಾಲದಲ್ಲಿ ಪ್ಯಾರಾಗ್ಲೈಡಿಂಗ್, ಜೋರ್ಬಿಂಗ್ ಮತ್ತು ಸ್ಕೀಯಿಂಗ್ ಚಟುವಟಿಕೆಗಳನ್ನು ಮಾಡಬಹುದು. ಹಾಗೆಯೇ ಜಿಪ್ ಲೈನಿಂಗ್, ರಾಕ್ ಕ್ಲೈಂಬಿಂಗ್ ಮತ್ತು ಕ್ವಾಡ್ ಬೈಕಿಂಗ್ ಅನ್ನು ಸಹ ಪ್ರಯತ್ನಿಸಬಹುದು.
ಬಿರ್, ಹಿಮಾಚಲ ಪ್ರದೇಶ:
ಭಾರತದ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ತಾಣಗಳಲ್ಲಿ ಒಂದಾಗಿರುವ ‌ ಈ ಸ್ಥಳ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿ ಟ್ರೆಕ್ಕಿಂಗ್ ಟ್ರೇಲ್ಸ್, ಮೌಂಟೇನ್ ಬೈಕಿಂಗ್  ಮತ್ತು   ಕ್ಯಾಂಪಿಂಗ್  ಮಾಡಬಹುದು. ಈ ಸ್ಥಳವು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ್ದು, ನೀವು ಸಾಹಸವನ್ನು ಇಷ್ಟ ಪಡುವವರಾಗಿದ್ದರೆ ಇಲ್ಲಿ ಟ್ರಿಪ್ ಕೈಗೊಳ್ಳಬಹುದು.1960 ರ ದಶಕದ ಆರಂಭದಲ್ಲಿ ಟಿಬೆಟಿಯನ್‌ ನಿರಾಶ್ರಿತರು ಇಲ್ಲಿ ನೆಲೆಯೂರಿದ್ದರು. ಈ ಕಾರಣದಿಂದಲೇ ಇಲ್ಲಿ ಅನೇಕ ಟಿಬೆಟಿಯನ್‌ ಬೌದ್ಧ ಮಠಗಳಿದ್ದು ಇಲ್ಲೂ ಭೇಟಿ ನೀಡಬಹುದು.
ಈ ಸುದ್ದಿಯನ್ನೂ ಓದಿ:Viral Video: ಏಳು ಖಂಡಕ್ಕೆ ಪ್ರವಾಸ; 102ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಮಹಿಳೆ!