ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru News: ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು: ನ್ಯಾ.ವಿ.ಶ್ರೀಶಾನಂದ

ಎ.ಪಿ.ಎಸ್‌ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿದ ಅವರು, ಶಿಕ್ಷಣಕ್ಕೂ, ವ್ಯಕ್ತಿ ಅಕ್ಷರ ಕಲಿಯಲಿಯುವುದಕ್ಕೂ ವ್ಯತ್ಯಾಸವಿದೆ. ಅಕ್ಷರ ಕಲಿತವರೆಲ್ಲ ವಿದ್ಯಾವಂತರಲ್ಲ. ಜಗತ್ತಿನ ಹಲವು ದೇಶಗಳು ನಾಗರಿಕತೆಯನ್ನು ಮೈಗೂಡಿಸಿಕೊಳ್ಳದಿದ್ದಾಗ ನಮ್ಮ ದೇಶ ಶಿಕ್ಷಣ ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ನಳಂದ ವಿಶ್ವವಿದ್ಯಾಲಯ ನಿದರ್ಶನ.

ಬೆಂಗಳೂರು: ಒಂದೊಂದು ಕಲ್ಲಿನಲ್ಲು ನಮ್ಮ ನಾಡಿನ ಭವ್ಯ ಇತಿಹಾಸ ಅಡಗಿದ್ದು, ಭಾರತದ ಜ್ಞಾನ ಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದ್ದಾರೆ.

ಎ.ಪಿ.ಎಸ್‌ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿದ ಅವರು, ಶಿಕ್ಷಣಕ್ಕೂ, ವ್ಯಕ್ತಿ ಅಕ್ಷರ ಕಲಿಯಲಿಯುವುದಕ್ಕೂ ವ್ಯತ್ಯಾಸವಿದೆ. ಅಕ್ಷರ ಕಲಿತವರೆಲ್ಲ ವಿದ್ಯಾವಂತರಲ್ಲ. ಜಗತ್ತಿನ ಹಲವು ದೇಶಗಳು ನಾಗರಿಕತೆಯನ್ನು ಮೈಗೂಡಿಸಿಕೊಳ್ಳದಿದ್ದಾಗ ನಮ್ಮ ದೇಶ ಶಿಕ್ಷಣ ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ನಳಂದ ವಿಶ್ವವಿದ್ಯಾಲಯ ನಿದರ್ಶನ ಎಂದರು.

ಇದನ್ನೂ ಓದಿ: Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

200 ವರ್ಷಗಳ ಬ್ರಿಟೀಷ್ ಆಳ್ವಿಕೆಯಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡೆವು. ಆದರೆ ಭಾರತದ ಮೆದಳುಗಳಿಗೆ ಸಾವಿಲ್ಲ, ಅದು ಎಂದಿಗೂ ಸಾಯುವುದಿಲ್ಲ. ನಮ್ಮ ಜ್ಞಾನ ಪರಂಪರೆ ಮತ್ತೆ ವೈಭವ ದತ್ತ ಸಾಗಬೇಕು ಎಂದರು.

ಎ.ಪಿ.ಎಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿಎ ಡಾ.ವಿಷ್ಣು ಭರತ್‌ ಅಲಂಪಲ್ಲಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಎ.ಪ್ರಕಾಶ್‌, ಪಿ.ಯು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಟಿ.ವಿ.ಗುರುದೇವಯ್ಯ, ಕಾಲೇಜಿನ ಪ್ರಾಂಶುಪಾಲರಾದ ಎಸ್.ನಾಗರಾಜ್, ಉಪ ಪ್ರಾಂಶುಪಾಲರಾದ ಹೆಚ್.ಎಸ್.ರಂಜನಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ನಿವೇದಿತ.ಬಿ.ಎಂ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.