ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಜಿಸಿಎ ಅನುಮೋದನೆಗಳಿಂದ ಮತ್ತು ಸ್ಯಾಫ್ರನ್ ಕ್ಯಾಬಿನ್ ಜರ್ಮನಿ ಸಹಯೋಗದಲ್ಲಿ ಭಾರತದ ಎಂ.ಆರ್.ಒ. ವ್ಯಾಪ್ತಿ ವಿಸ್ತರಣೆ

ಪ್ರಾದೇಶಿಕ ವೈಮಾನಿಕತೆಯಲ್ಲಿ ಹೊಸ ಗಮನಾರ್ಹ ಹೆಜ್ಜೆ ಇರಿಸಿದ ಹೇವಿಯಸ್ ಏರೊಟೆಕ್ ತನ್ನ ಬೆಂಗಳೂರು ಸೌಲಭ್ಯಕ್ಕೆ ಡಿಜಿಸಿಎಯಿಂದ ವಿಶೇಷ ಗ್ಯಾಲಿ ನಿಭಾಯಿಸಲು, ಏವಿಯೋನಿಕ್ಸ್ ಮತ್ತು ಜೀವ ಉಳಿಸುವ ಸಾಧನಕ್ಕೆ ಅನುಮೋದನೆ ಪಡೆದಿದೆ. ಈ ಸೌಲಭ್ಯವು ಈಗ ದಕ್ಷಿಣ ಭಾರತದ ಮೊದಲ ಮತ್ತು ಏಕೈಕ ಸ್ಯಾಫ್ರನ್ ಕ್ಯಾಬಿನ್ ಜರ್ಮನಿ ಆಥರೈಸ್ಡ್ ಸರ್ವೀಸ್ ಸ್ಟೇಷನ್ ಆಗಿದೆ

ಬೆಂಗಳೂರು: ಹೇವಿಯಸ್ ಏರೊಟೆಕ್ ಇಂಡಿಯಾ ಲಿಮಿಟೆಡ್ ಭಾರತದಲ್ಲಿ ವೈಮಾನಿಕ ನಿರ್ವ ಹಣೆ, ರಿಪೇರಿ ಮತ್ತು ಓವರ್ ಹಾಲ್(ಎಂ.ಆರ್.ಒ.) ಕ್ಷೇತ್ರವನ್ನು ಪ್ರಭಾವಿಸುತ್ತಿದ್ದು ದೇಶದ ವೈಮಾ ನಿಕ ಮೂಲಸೌಕರ್ಯವನ್ನು ಉತ್ತೇಜಿಸುವ ಗುರಿ ಹೊಂದಿದ ವಿನೂತನ ಬಗೆಯ ಕಾರ್ಯತಂತ್ರೀ ಯ ವಿಸ್ತರಣೆಗಳು ಮತ್ತು ನಿಯಂತ್ರಣದ ಅನುಮೋದನೆಗಳನ್ನು ಪ್ರಕಟಿಸಿದೆ.

ದಕ್ಷಿಣದಲ್ಲಿ ಸದೃಢತೆಯ ಕೇಂದ್ರ: ಪ್ರಾದೇಶಿಕ ವೈಮಾನಿಕತೆಯಲ್ಲಿ ಹೊಸ ಗಮನಾರ್ಹ ಹೆಜ್ಜೆ ಇರಿಸಿದ ಹೇವಿಯಸ್ ಏರೊಟೆಕ್ ತನ್ನ ಬೆಂಗಳೂರು ಸೌಲಭ್ಯಕ್ಕೆ ಡಿಜಿಸಿಎಯಿಂದ ವಿಶೇಷ ಗ್ಯಾಲಿ ನಿಭಾಯಿಸಲು, ಏವಿಯೋನಿಕ್ಸ್ ಮತ್ತು ಜೀವ ಉಳಿಸುವ ಸಾಧನಕ್ಕೆ ಅನುಮೋದನೆ ಪಡೆದಿದೆ. ಈ ಸೌಲಭ್ಯವು ಈಗ ದಕ್ಷಿಣ ಭಾರತದ ಮೊದಲ ಮತ್ತು ಏಕೈಕ ಸ್ಯಾಫ್ರನ್ ಕ್ಯಾಬಿನ್ ಜರ್ಮನಿ ಆಥರೈಸ್ಡ್ ಸರ್ವೀಸ್ ಸ್ಟೇಷನ್ ಆಗಿದೆ. ಪ್ರಸ್ತುತ ಅನುಮೋದನೆಗಳು ಈಗಾಗೇ ಉತ್ತರ ಭಾರತದಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದು ಹೇವಿಯಸ್ ಏರೊಟೆಕ್ ಈಗ ತಡೆರಹಿತ, ಡ್ಯುಯಲ್ ರೀಜನ್ ಬೆಂಬಲದ ಜಾಲವನ್ನು ನೀಡುತ್ತದೆ.

ಇದನ್ನೂ ಓದಿ: Bangalore Tunnel Road: ಸಂಚಾರ ದಟ್ಟಣೆ ಮುಕ್ತಿಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಸುರಂಗ ಮಾರ್ಗ

ಇದು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಿಶ್ವ ಮಟ್ಟದ ಒಇಎಂ- ಮಾನ್ಯತೆ ಪಡೆದ ಸೇವೆಗಳನ್ನು ದೇಶದ ಎರಡೂ ಕೊನೆಗಳಲ್ಲಿ ದೊರೆಯುವಂತೆ ಮಾಡಿದ್ದು ಇದು ಲಾಜಿಸ್ಟಿಕಲ್ ಲೀಡ್ ಸಮಯವನ್ನು ಗಮನಾರ್ಹವಾಗಿ ಉಳಿಸುತ್ತದೆ ಮತ್ತು ಕಾರ್ಯಾಚರಣೆಯ ಸೌಖ್ಯ ಹೆಚ್ಚಿಸುತ್ತದೆ.

ತಾಂತ್ರಿಕ ಸಾಮರ್ಥ್ಯದಲ್ಲಿ ಹೊಸ ಮಾನದಂಡ ನಿಗದಿಪಡಿಸಿರುವ ಡಿಜಿಸಿಎ ಹೇವಿಯಸ್ ಏರೊ ಟೆಕ್ ಗೆ ಅದರ ದೆಹಲಿ ಯೂನಿಟ್ ನಲ್ಲಿ ಪಾರಿಸರಿಕ ಮತ್ತು ಉಷ್ಣತೆಯ ನಿಯಂತ್ರಣದ ಕಾರ್ಗೊ ಕಂಟೈನರ್ ಗಳಿಗೆ ಅನುಮೋದನೆ ನೀಡಿದ್ದು ಇದು ಭಾರತದಲ್ಲಿ ಮೊದಲನೆಯ ಎಂ.ಆರ್.ಒ. ಆಗಿದೆ. ಇದಲ್ಲದೆ ಯೂನಿಟ್ ಲೋಡ್ ಡಿವೈಸ್ (ಯು.ಎಲ್.ಡಿ.) ಕಂಟೈನರ್ ರಿಪೇರಿಗೆ ವಿಶೇಷ ಮಳಿಗೆ ತೆರೆದ ಮೊದಲ ಭಾರತೀಯ ಎಂ.ಆರ್.ಒ. ಕೂಡಾ ಆಗಿದೆ.

ಉತ್ತರ ಭಾರತದ ಸೌಲಭ್ಯದಲ್ಲಿ:

ಕ್ಯಾಬಿನ್ ಇಂಟೀರಿಯರ್ ರಿಪೇರಿಗಳು: ವಿಶೇಷ ಸೀಟ್ ಕವರ್ ಮತ್ತು ಅಪ್ ಹೋಲ್ಸ್ಟ್ರಿ ಸೇವೆಗಳು

ಸುಧಾರಿತ ಫ್ಯಾಬ್ರಿಕೇಷನ್: ಆಂತರಿಕ ರಿಪೇರಿ ಮತ್ತು ಪ್ರಮುಖ ಪ್ಲಾಸ್ಟಿಕ್ ಬಿಡಿಭಾಗಗಳ ಫ್ಯಾಬ್ರಿ ಕೇಷನ್

ವಿಶ್ವಮಟ್ಟದ ಮೂಲಸೌಕರ್ಯ ಮತ್ತು ಲಭ್ಯತೆ

ಈ ಸುಧಾರಿತ ಸಾಮರ್ಥ್ಯಗಳಿಗೆ ಬೆಂಬಲಿಸಲು ಹೇವಿಯಸ್ ಏರೊಟೆಕ್ ಅಪಾರ ಹೂಡಿಕೆ ಮಾಡಿದ್ದು ಬೆಂಗಳೂರು ಸೌಲಭ್ಯವು 1.5 ಲಕ್ಷ ಚದರ ಅಡಿ ಮತ್ತು ದೆಹಲಿ ಸೌಲಭ್ಯವು 50,000 ಚದರ ಅಡಿ ವಿಸ್ತೀರ್ಣ ಹೊಂದಿದೆ.

ಈ ಎರಡೂ ಕೇಂದ್ರಗಳು ಆಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ 10 ನಿಮಿಷಗಳಲ್ಲಿ ತಲುಪುವಂತಿವೆ. ಇದರಿಂದ ವೇಗವಾದ ಟರ್ನ್ ಅರೌಂಡ್ ಟೈಮ್ ದೊರೆಯುತ್ತದೆ. ಇದಲ್ಲದೆ ಇದು “ಮೇಕ್ ಇನ್ ಇಂಡಿಯಾ”ಗೆ ಬೆಂಬಲಿಸುತ್ತಿದೆ.