ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವ್ಯಾಪಾರ ವಿಸ್ತರಣೆಯನ್ನು ಅರ್ಥೈಸಿಕೊಂಡ ಕೈಗಾರಿಕಾ ನಾಯಕರು, ಜಾಗತಿಕ ಬೆಳವಣಿಗೆಯೇ ಪ್ರಮುಖ ಅಂಶ

ವ್ಯವಹಾರಗಳು ಗಡಿ ಮೀರಿ ವಿಸ್ತರಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ತಂತ್ರಗಳು, ವ್ಯವಹಾರ ಮಾದರಿಗಳು ಮತ್ತು ಮಾರುಕಟ್ಟೆ ಅವಕಾಶಗಳನ್ನು ಅನ್ವೇಷಿಸಲು ಈ ಚರ್ಚೆಯು ನವೋದ್ಯಮ, ಹೂಡಿಕೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಗಳ ನಾಯಕರನ್ನು ಒಟ್ಟುಗೂಡಿಸಿತು.

"ಬ್ರಿಕ್ಸ್ ಸಿಸಿಐ ನೇತೃತ್ವದ ಬೆಂಗಳೂರು ಟೆಕ್ ಶೃಂಗಸಭೆ 2026ರ ಪ್ಯಾನೆಲ್ನಲ್ಲಿ ಪ್ರತಿಭೆ, ಬಂಡವಾಳ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ಪಾತ್ರದ ಕುರಿತು ಬೆಳಕು ಚೆಲ್ಲಲಾಯಿತು."

ಬೆಂಗಳೂರು: 'ಸೂಕ್ತ ಮಾರುಕಟ್ಟೆ ಅವಕಾಶಗಳನ್ನು ಗುರುತಿಸುವಿಕೆ, ಕಾರ್ಯ ತಂತ್ರದ ಪಾಲು ದಾರಿಕೆಗಳ ನಿರ್ಮಾಣ ಮತ್ತು ವ್ಯವಹಾರ ಮಾದರಿಗಳನ್ನು ಅಭಿವೃದ್ಧಿ ಪಡಿಸುವುದು ಜಾಗತಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ'- ಇದು ಬ್ರಿಕ್ಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಬ್ರಿಕ್ಸ್ ಸಿಸಿಐ) ನೇತೃತ್ವದಲ್ಲಿ 'ದಿ ಬ್ಯುಸಿನೆಸ್ ಆಫ್ ಸ್ಕೇಲಿಂಗ್: ಫ್ರಮ್ ಮಾರ್ಕೆಟ್ ಆಪರ್ಚುನಿಟಿ ಟು ಗ್ಲೋಬಲ್ ಗ್ರೋತ್' ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಬೆಂಗಳೂರು ಟೆಕ್ ಶೃಂಗಸಭೆ 2026 ರ 3ನೇ ದಿನದಂದು ನಡೆದ ಚರ್ಚೆಯಿಂದ ಪ್ರಮುಖ ತೀರ್ಮಾನವಾಗಿ ಹೊರಹೊಮ್ಮಿತು.

ವ್ಯವಹಾರಗಳು ಗಡಿ ಮೀರಿ ವಿಸ್ತರಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ತಂತ್ರಗಳು, ವ್ಯವಹಾರ ಮಾದರಿಗಳು ಮತ್ತು ಮಾರುಕಟ್ಟೆ ಅವಕಾಶಗಳನ್ನು ಅನ್ವೇಷಿಸಲು ಈ ಚರ್ಚೆಯು ನವೋದ್ಯಮ, ಹೂಡಿಕೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಗಳ ನಾಯಕ ರನ್ನು ಒಟ್ಟುಗೂಡಿಸಿತು.

ಸಮಿತಿಯಲ್ಲಿ MeitY-NASSCOM Centre of Excellence for IoT & AI ನ ಸಿಇಒ ಸಂಜೀವ್ ಮಲ್ಹೋತ್ರಾ; ಇನ್ʼಮೊಬಿಯ ಉಪಾಧ್ಯಕ್ಷರು ಮತ್ತು ಭಾರತದ ಜನರಲ್ ಮ್ಯಾನೇಜರ್ ಶ್ರೀಮತಿ ಪವಿತ್ರಾ ಗುಪ್ತಾ; ಮಾರ್ವಾರಿ ಕ್ಯಾಟಲಿಸ್ಟ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಮತ್ತು ಬ್ರಿಕ್ಸ್ CCI ನ MSME & Startup ವಿಭಾಗದ ಅಧ್ಯಕ್ಷ ಸುಶೀಲ್ ಶರ್ಮಾ ಹಾಗೂ ಬ್ರಿಕ್ಸ್ CCI ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು GrowQR ನ ಸಂಸ್ಥಾಪಕ ಹಾಗೂ ಸಿಇಒ ಬಿಬಿನ್ ಬಾಬು ಅವರು ಭಾಗವಹಿಸಿ ದ್ದರು. ಈ ಅಧಿವೇಶನವನ್ನು ಬ್ರಿಕ್ಸ್ CCI WE (ಮಹಿಳಾ ಸಬಲೀಕರಣ) ವಿಭಾಗದ ಅಧ್ಯಕ್ಷರು ಮತ್ತು sheatwork ನ ಸಂಸ್ಥಾಪಕರಾದ ಶ್ರೀಮತಿ ರೂಬಿ ಸಿನ್ಹಾ ನಿರ್ವಹಿಸಿದರು.

ಇದನ್ನೂ ಓದಿ: Bengaluru Tech Summit 2026: ಕರ್ನಾಟಕದಲ್ಲಿ ಸ್ವಂತ ಎಐ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಮೊದಲ ಹೆಜ್ಜೆ

ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಬ್ರಿಕ್ಸ್ CCI ಅಧ್ಯಕ್ಷ ಸಮೀಪ್ ಶಾಸ್ತ್ರಿ, "ಬೆಂಗಳೂರು ಟೆಕ್ ಶೃಂಗಸಭೆ 2026, ಭಾರತದ ತಂತ್ರಜ್ಞಾನ ಪರಿಸರ ವ್ಯವಸ್ಥೆಯು (ecosystem) ಇಲ್ಲಿಯವರೆಗೆ ಎಷ್ಟು ದೂರ ಸಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಎಷ್ಟು ದೂರ ಸಾಗಬಲ್ಲದು ಎಂಬುದನ್ನು ತೋರಿಸಿ ಕೊಡುತ್ತದೆ. ಮುಂದಿನ ಹಂತದ ಬೆಳವಣಿಗೆಯು ಗಡಿಗಳನ್ನು ಮೀರಿ; ಸರ್ಕಾರಗಳು, ಉದ್ಯಮ ವಲಯ, ಹೂಡಿಕೆದಾರರು ಮತ್ತು ಸಂಸ್ಥಾಪಕರ ನಡುವಿನ ಸಹಯೋಗದ ಮೂಲಕ ಮೂಡಿಬರಲಿದೆ.

ಬ್ರಿಕ್ಸ್ ಪ್ಲಸ್ ಮಾರುಕಟ್ಟೆಗಳು ಭಾರತೀಯ ಸ್ಟಾರ್ಟ್ಅಪ್ಗಳಿಗೆ ವಿಸ್ತರಣೆಯ ಅವಕಾಶ, ವೈವಿಧ್ಯತೆ ಮತ್ತು ಬೇಡಿಕೆಯನ್ನು ಒದಗಿಸುತ್ತವೆ. ಇಂತಹ ಮಾತುಕತೆಗಳನ್ನು ನೈಜ ಪಾಲುದಾರಿಕೆಗಳು, ಹೂಡಿಕೆ ಮತ್ತು ವ್ಯಾಪಾರ ಸಂಬಂಧಗಳನ್ನಾಗಿ ಪರಿವರ್ತಿಸಲು ವ್ರಿಕ್ಸ್ CCI ನಿರಂತರವಾಗಿ ಶ್ರಮಿಸಲಿದೆ."

ಚರ್ಚೆಗೆ ಹಿನ್ನೆಲೆ ಒದಗಿಸಿ ಮಾತನಾಡಿದ ಬ್ರಿಕ್ಸ್ CCI WE ನ ಅಧ್ಯಕ್ಷೆ ಹಾಗೂ 'sheatwork' ನ ಸಂಸ್ಥಾಪಕಿ ಶ್ರೀಮತಿ ರೂಬಿ ಸಿನ್ಹಾ, "ಭಾರತದ ಮುಂದಿನ ದಶಕದ ಉದ್ಯಮಶೀಲತೆಯನ್ನು ನಾವು ಎಷ್ಟು ಸ್ಟಾರ್ಟ್ಅಪ್ಗಳನ್ನು ಸೃಷ್ಟಿಸುತ್ತೇವೆ ಎಂಬುದರ ಬದಲಾಗಿ ಅವುಗಳಲ್ಲಿ ಎಷ್ಟು ಜಾಗತಿಕ ಕಂಪನಿಗಳಾಗಿ ಬೆಳೆಯುತ್ತವೆ ಎಂಬ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಈ ಗುರಿ ತಲುಪಲು ಉದ್ಯಮ ವಲಯ, ಹೂಡಿಕೆದಾರರು, ತಂತ್ರಜ್ಞಾನ ನಾಯಕರು ಮತ್ತು ಸರ್ಕಾರಗಳು ಗಡಿಗಳನ್ನು ಮೀರಿ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.

ಬ್ರಿಕ್ಸ್ CCI WE ನಲ್ಲಿ, ನಾವು ಬ್ರಿಕ್ಸ್+ ಮಾರುಕಟ್ಟೆಗಳಾದ್ಯಂತ ನಡೆಯುವ ಈ ಸಹಯೋಗದ ಕೇಂದ್ರ ಬಿಂದುವಿನಲ್ಲಿ ಮಹಿಳಾ ಸಂಸ್ಥಾಪಕಿಯರನ್ನು ಇರಿಸಲು ಬದ್ಧರಾಗಿದ್ದೇವೆ. ಏಕೆಂದರೆ, ಭವಿಷ್ಯದ ಜಾಗತಿಕ ಕಂಪನಿಗಳು ಕೇವಲ ಸಂಸ್ಥಾಪಕರಿಂದ ಮಾತ್ರವಲ್ಲ, ಬದಲಾಗಿ ಒಂದು ಸಮಗ್ರ ಪರಿಸರ ವ್ಯವಸ್ಥೆಯಿಂದ (ecosystem) ನಿರ್ಮಿಸಲ್ಪಡುತ್ತವೆ."

ವ್ಯಾಪಾರ ಅವಕಾಶಗಳ ಸೃಷ್ಟಿಸುವಲ್ಲಿ ಉದಯೋನ್ಮುಖ ತಂತ್ರಜ್ಞಾನಗಳ ಪಾತ್ರವದ್ದೇಶಿಸಿ ಮಾತನಾಡಿದ IoT & AI ಗಾಗಿ MeitY-NASSCOM CoE ನ ಸಿಇಒ ಸಂಜೀವ್ ಮಲ್ಹೋತ್ರಾ, ತಂತ್ರಜ್ಞಾನದ ಪ್ರವೃತ್ತಿಗಳನ್ನು ಅನುಸರಿಸುವ ಬದಲು ನೈಜ-ಪ್ರಪಂಚದ ಸಮಸ್ಯೆಗಳನ್ನು ಗುರುತಿಸುವ ಅಗತ್ಯವನ್ನು ಒತ್ತಿ ಹೇಳಿದರು.

“ಪ್ರಯೋಗವು ನಾವೀನ್ಯತೆಯ ಪ್ರಮುಖ ಚಾಲಕವಾಗಿದೆ. ಕೈಗಾರಿಕೆಗಳು, ಸರ್ಕಾರಗಳು ಮತ್ತು ಉದ್ಯಮ ಗಳೊಂದಿಗಿನ ಸಹಯೋಗವು ಉತ್ಪಾದನೆ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಅನ್ವಯಿಕೆಗಳನ್ನು ಗುರುತಿಸಲು ಸ್ಟಾರ್ಟ್ಅಪ್ಗಳಿಗೆ ಸಹಾಯ ಮಾಡುತ್ತದೆ. ಪೈಲಟ್ ಯೋಜನೆಗಳು ಸ್ಟಾರ್ಟ್ಅಪ್ಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಿಸುವ ಮೊದಲು ತಮ್ಮ ಪರಿಹಾರ ಗಳನ್ನು ಮೌಲ್ಯೀಕರಿಸಲು, ತಮ್ಮ ಉತ್ಪನ್ನಗಳನ್ನು ಬಲಪಡಿಸಲು ಮತ್ತು ಆತ್ಮವಿಶ್ವಾಸ ಬೆಳೆಸಲು ಅವಕಾಶ ನೀಡುತ್ತವೆ.”

ಹೂಡಿಕೆದಾರರ ದೃಷ್ಟಿಕೋನದಿಂದ, 'ಮಾರ್ವಾರಿ ಕ್ಯಾಟಲಿಸ್ಟ್ಸ್' ನ ಸಂಸ್ಥಾಪಕ ಮತ್ತು ಅಧ್ಯಕ್ಷರು ಹಾಗೂ 'ಬ್ರಿಕ್ಸ್ ಸಿಸಿಐ' (ಬ್ರಿಕ್ಸ್ CCI) ನ ಎಂಎಸ್ಎಂಇ (MSME) ಮತ್ತು ಸ್ಟಾರ್ಟ್ಅಪ್ ವಿಭಾಗದ ಅಧ್ಯಕ್ಷರಾದ ಸುಶೀಲ್ ಶರ್ಮಾ ತಮ್ಮ ಅಭಿಪ್ರಾಯ ಮಂಡಿಸುತ್ತ, "ಹೂಡಿಕೆದಾರರು ಕೇವಲ ಸಂಸ್ಥಾಪಕರ ವ್ಯಾಪಾರ ಕಲ್ಪನೆಯ ಬಲವನ್ನು ಮಾತ್ರವಲ್ಲದೆ, ಅದನ್ನು ಕಾರ್ಯಗತಗೊಳಿಸುವ ಸಾಮರ್ಥ್ಯ, ನಾಯಕತ್ವ ಮತ್ತು ಬಲವಾದ ತಂಡಗಳನ್ನು ರೂಪಿಸುವ ಕೌಶಲವನ್ನೂ ಗಮನಿಸು ತ್ತಾರೆ. ವ್ಯವಹಾರದ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳು ವಿಕೆ ಮತ್ತು ದೀರ್ಘಕಾಲೀನ ದೃಷ್ಟಿಕೋನಗಳು ಬಹಳ ಮುಖ್ಯವಾಗುತ್ತವೆ. ಅಲ್ಲದೆ, ಉದ್ಯಮಶೀಲರಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸುವಾಗ ಎದುರಾಗುವ ಸವಾಲುಗಳನ್ನು ಎದುರಿಸಲು ಮಾರ್ಗದರ್ಶನವು (mentoring) ಸಹಕಾರಿ ಯಾಗುತ್ತದೆ."

ಅಂತರರಾಷ್ಟ್ರೀಯ ವಿಸ್ತರಣೆಯ ಕುರಿತು ತಮ್ಮ ದೃಷ್ಟಿಕೋನ ಹಂಚಿಕೊಂಡ ಇನ್ಮೊಬಿಯ ಭಾರತದ ಉಪಾಧ್ಯಕ್ಷೆ ಮತ್ತು ಜನರಲ್ ಮ್ಯಾನೇಜರ್ ಶ್ರೀಮತಿ ಪವಿತ್ರ ಗುಪ್ತಾ, “ಭೌಗೋಳಿಕವಾಗಿ ವಿಸ್ತರಿಸಲು ಬಯಸುವ ವ್ಯವಹಾರಗಳಿಗೆ, ಸಮಯವು ನಿರ್ಣಾಯಕ. ಸಂಸ್ಥಾಪಕರು ಹೊಸ ಮಾರುಕಟ್ಟೆ ಪ್ರವೇಶಿಸಲು ಸರಿಯಾದ ಕ್ಷಣವನ್ನು ಗುರುತಿಸಬೇಕು. ಮಾರುಕಟ್ಟೆ ಸಿದ್ಧತೆಯನ್ನು ನಿರ್ಣಯಿಸಬೇಕು ಮತ್ತು ಅವರ ಉತ್ಪನ್ನವು ಅವಕಾಶದೊಂದಿಗೆ ಹೊಂದಿಕೊಂಡಿದೆ ಎಂದು ಖಚಿತಪಡಿಸಿಕೊಳ್ಳಬೇಕು. ತುಂಬಾ ಬೇಗ ಅಥವಾ ತಡವಾಗಿ ವಿಸ್ತರಿಸುವುದು ವ್ಯವಹಾರವು ಆಕರ್ಷಣೆ ಪಡೆಯುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಅವಕಾಶ ಗುರುತಿಸುವುದು ಮತ್ತು ಸಮಯೋಚಿತ ನಡೆಯನ್ನು ನಿರ್ಧರಿಸುವುದು ಹೊಸ ಮಾರುಕಟ್ಟೆಗಳಲ್ಲಿ ಯಶಸ್ವಿ ಉಪಸ್ಥಿತಿಯನ್ನು ನಿರ್ಮಿಸಲು ಪ್ರಮುಖವಾಗಿದೆ.”

ಪ್ರತಿಭೆ ಮತ್ತು ಸನ್ನದ್ಧತೆಯ ಮಹತ್ವ ಎತ್ತಿ ತೋರಿಸಿದ ಬ್ರಿಕ್ಸ್ CCI ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ GrowQR ನ ಸಂಸ್ಥಾಪಕ ಮತ್ತು CEO ಆಗಿರುವ ಬಿಬಿನ್ ಬಾಬು ಮಾತನಾಡಿ, " ಜಾಗತಿಕ ಮಹತ್ವಾಕಾಂಕ್ಷೆ ಮತ್ತು ಜಾಗತಿಕ ಸನ್ನದ್ಧತೆಗಳ ನಡುವಿನ ವ್ಯತ್ಯಾಸವನ್ನು ಸ್ಟಾರ್ಟ್ಅ ಪ್ಗಳು ಅರಿಯಬೇಕಿದೆ. ಗುಣಮಟ್ಟ, ನಿಯಮಗಳ ಪಾಲನೆ (compliance), ವ್ಯವಹಾರ ಪ್ರಕ್ರಿಯೆಗಳು ಮತ್ತು ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ನಿರೀಕ್ಷೆಗಳನ್ನು ಪೂರೈಸಲು ಉದ್ಯಮಗಳು ತಮ್ಮ ತಂಡಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದು ವ್ಯವಹಾರವು ವಿವಿಧ ಮಾರುಕಟ್ಟೆಗಳಲ್ಲಿ ವಿಸ್ತರಿಸಬಲ್ಲದೇ ಎಂಬುದನ್ನು ನಿರ್ಧರಿಸುವಲ್ಲಿ, ಬಂಡವಾಳದಷ್ಟೇ 'ಪ್ರತಿಭೆಯ ಸನ್ನದ್ಧತೆ'ಯೂ (talent readiness) ಅತ್ಯಂತ ಮುಖ್ಯವಾಗಿದೆ."

ಈ ಚರ್ಚೆಯು ವ್ಯಾಪಾರವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಕೇವಲ ಬಂಡವಾಳ ಅಥವಾ ಉತ್ತಮ ಕಲ್ಪನೆ ಸಾಲದು ಎಂಬುದನ್ನು ಒತ್ತಿ ಹೇಳಿತು. ದೃಢ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ಕಟ್ಟಲು ಸೂಕ್ತ ತಂಡ, ಮಾರುಕಟ್ಟೆ, ಸರಿಯಾದ ಸಮಯ, ಗ್ರಾಹಕರ ಮನ್ನಣೆ, ನಿಯಂತ್ರಕ ಅಗತ್ಯಗಳಿಗೆ ಸಿದ್ಧತೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳು ಅತ್ಯಗತ್ಯ. ಬದಲಾಗುತ್ತಿರುವ ಮಾರುಕಟ್ಟೆ ಸನ್ನಿವೇಶಗಳಿಗೆ ಹೊಂದಿಕೊಳ್ಳಬಲ್ಲ, ಗ್ರಾಹಕರ ನಂಬಿಕೆ ಗಳಿಸಬಲ್ಲ ಮತ್ತು ಗಡಿಗಳನ್ನು ಮೀರಿ ಸುಸ್ಥಿರ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಬಲ್ಲ ಸಂಸ್ಥೆಗಳನ್ನು ರೂಪಿಸುವ ಅಗತ್ಯವನ್ನು ಈ ಚರ್ಚಾ ವೇದಿಕೆಯು ಎತ್ತಿ ತೋರಿಸಿತು.

ಬ್ರಿಕ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ಬ್ರಿಕ್ಸ್ ರಾಷ್ಟ್ರಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಯನ್ನು ಉತ್ತೇಜಿಸುವ ಒಂದು ಪ್ರಮುಖ ಸಂಸ್ಥೆಯಾಗಿದೆ. 2012ರಲ್ಲಿ ಸ್ಥಾಪನೆಯಾದ ಈ ಮಂಡಳಿಯು, ಲಾಭರಹಿತ ಮತ್ತು ಸರ್ಕಾರೇತರ ಸಂಸ್ಥೆಯಾಗಿದ್ದು, ವಿಶೇಷವಾಗಿ ಎಂಎಸ್ʼಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ವಲಯದ ಉದ್ಯಮಗಳು, ಯುವ ಉದ್ಯಮಿಗಳು, ಮಹಿಳಾ ಉದ್ಯಮಿ ಗಳು ಮತ್ತು ವಿವಿಧ ಭೌಗೋಳಿಕ ಪ್ರದೇಶಗಳ ಸ್ಟಾರ್ಟ್-ಅಪ್ಗಳಿಗೆ (ನವೋದ್ಯಮಗಳಿಗೆ) ಪೂರಕವಾದ ಬೆಂಬಲ ವ್ಯವಸ್ಥೆ ರೂಪಿಸಲು ಶ್ರಮಿಸುತ್ತಿದೆ.