ಬೆಂಗಳೂರು: ಮುಖ್ಯಮಂತ್ರಿ ಗದ್ದುಗೆ ಗುದ್ದಾಟವನ್ನು ವಿಷಯಾಂತರ ಮಾಡುವ ದುರುದ್ದೇಶದಿಂದ ಪರಿಶಿಷ್ಟ ಜಾತಿ, ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಮತ್ತು ಹಿಂದು ಳಿದ ಜಾತಿಗಳ ನಡುವೆ ಒಳ ಮೀಸಲಾತಿಯ ವರ್ಗೀಕರಣ ವಿಚಾರದ ಮೂಲಕ ಪರಿಶಿಷ್ಟ ರಲ್ಲಿ ಮೂಡಿದ್ದ ದಲಿತ ಮುಖ್ಯಮಂತ್ರಿಯ ಹೆಬ್ಬಯಕೆಯನ್ನು ಕಾಂಗ್ರೆಸ್ ನಯವಾಗಿ ಹೊಸಕಿ ಹಾಕಿದೆ ಎಂದು ಧಮ್ಮ ಧೀವಿಗೆ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.
ದಲಿತ ಮುಖ್ಯಮಂತ್ರಿ ಎಂಬ ರಾಜಕೀಯ ಮಹತ್ವಕಾಂಕ್ಷೆಯನ್ನು ಒಳಮೀಸಲಾತಿ ವರ್ಗೀಕರಣ ಸೋಗಿನಲ್ಲಿ ಚಿವುಟುತ್ತಿರುವುದು ಖಂಡನೀಯ.
ಸಚಿವರಾದ ಡಾ. ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಹೆಚ್.ಸಿ, ಮಹದೇವಪ್ಪ, ಕೆ.ಹೆಚ್ ಮುನಿಯಪ್ಪ, ಆರ್.ಬಿ ತಿಮ್ಮಾಪುರ(Ministers Dr. G Parameshwar, Priyank Kharge, H.C, Mahadevappa, K.H Muniyappa, R.B. Thimmapura) ಅವರಂತಹ ಹಿರಿಯ ಮಂತ್ರಿ ಗಳಿದ್ದರೂ ರೋಸ್ಟರ್ ಬಿಂದುವಿನಲ್ಲಾಗಿರುವ ಮೋಸ, ಅಸಮಾನತೆ ಮತ್ತು ಅನ್ಯಾಯಗಳು ಈ ಮಂತ್ರಿಗಳ ಕಣ್ತಪ್ಪಿ ಮುಖ್ಯಮಂತ್ರಿ ಕೈ ಸೇರಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಬಲಗೈ, ಎಡಗೈ ಸಮುದಾಯಗಳಿಂದ ಮತ್ತು ಬೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳಿಂದಲೂ ನಡೆಯುತ್ತಿರುವ ಪ್ರತಿಭಟನೆಗಳು ರ್ಯಾಲಿ ಮೆರವಣಿಗೆಗಳು ಎಲ್ಲಾವನ್ನು ಗಮನಿಸಿ ರಾಜ್ಯ ಸರ್ಕಾರ ರೋಸ್ಟರ್ ಬಿಂದುವಿನಲ್ಲಾಗಿರುವ ಅನ್ಯಾಯವನ್ನು ಸರಿಪಡಿಸಲು ಕ್ರಮವಹಿಸದೆ ಜಾಣ ಮೌನ ವಹಿಸಿರುವುದು ಖಂಡನೀಯ ಎಂದಿದ್ದಾರೆ.
ಇದನ್ನೂ ಓದಿ: Bangalore News: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್
ದಲಿತ ಮಂತ್ರಿಗಳು ಮತ್ತು ಮುಖಂಡರು ಸಮುದಾಯದ ಬಲಗೈ ಸಮಾಜಕ್ಕೆ ಆಗಾಧ ಅನ್ಯಾಯ ಮಾಡಿ, ಬೆಂಕಿ ಹಚ್ಚಿ ರಕ್ತಪಾತಕ್ಕೆ ಮುನ್ನುಡಿದ್ದಾರೆ. ಕಾಂಗ್ರೆಸ್ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಮಾತು ನಂಬಿ ಒಳ ಮೀಸಲಾತಿ ಯ ಹೋರಾಟಕ್ಕೆ ಧುಮುಕಿ ಎರಡು ಸಮುದಾಯಗಳ ಭಟ್ಟಂಗಿ ನಾಯಕರುಗಳ ನಡೆ ಖಂಡನೀಯ.
ಈ ಹಿನ್ನಲೆಯಲ್ಲಿ ವಿವೇಚನ ರಹಿತವಾಗಿ ನಾಗಮೋಹನ್ ದಾಸ್ ವರದಿ(Nagamohan Das Report)ಯನ್ನು ಒಪ್ಪಿಕೊಳ್ಳುವ ಮೂಲಕ ರೋಸ್ಟರ್ ಬಿಂದು ಜಾರಿಗೊಳ್ಳುವ ಮೊದಲೇ ಪೂರ್ವಾಗ್ರಹ ಪೀಡನೆಯಿಂದ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಯಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪರಿಶೀಲನೆಯನ್ನು ವರ್ಗಿಕರಣಗೊಳಿಸಿ ಪ್ರವರ್ಗಗಳನ್ನು ವಿಭಜಿಸಿರುವ ಮಾರಕ ಪದ್ದತಿಯನ್ನು ರದ್ದುಗೊಳಿಸಬೇಕು.
ನ್ಯಾ. ನಾಗಮೋಹನ್ ದಾಸ್ ವರದಿಯ ಅನುಸಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗದ ಮೀಸಲಾತಿಯಡಿ ನೇರ ನೇಮಕಾತಿ ಮಾಡುವ ವೇಳೆ ಹೊಸದಾಗಿ ಸೃಜಿಸಿರುವ ಎ.ಬಿ.ಸಿ.ಡಿ.ಇ.ಎಪ್ ವರಗಿನ ರೋಸ್ಟರ್ ಬಿಂದು ಪದ್ದತಿಯನ್ನು ಕೂಡಲೇ ರದ್ದುಗೊಳಿಸಬೇಕು. ಇದರಡಿ ಹೊಲಯ ಮತ್ತು ಮಾದಿಗ ಸಮುದಾಯದ ಜನರಿಗೆ ಸರ್ಕಾರ ಘೋಷಿಸಿರುವ ಅನುಪಾತ 15ರ ಮೀಸಲಾತಿಯನ್ನು ಎರಡು ಸಮುದಾಯಗಳಿಗೆ ಪ್ರವರ್ಗಗಳಲ್ಲಿನ ಎ ಮತ್ತು ಬಿ ತಾರತಮ್ಯವನ್ನು ಹೊರತು ಪಡಿಸಿ ಸಾಮಾನ್ಯವಾಗಿ ಒಂದೇ ಬಿಂದುವನಲ್ಲಿಯಡಿಯಲ್ಲಿ ತರಲು ಅಗತ್ಯ ಕ್ರಮವಹಿಸ ಬೇಕು ಎಂದು ಹೇಳಿದ್ದಾರೆ.
ಸರ್ಕಾರದಿಂದ ಕೇವಲ ರೋಸ್ಟರ್ ಬಿಂದು ಅನ್ಯಾಯವನ್ನು ಸರಪಡಿಸದಿರುವುದು ವಿಷಾದ ನೀಯ. ಇದೊಂದು ಹಾಸ್ಯಸ್ಪದ ಮತ್ತು ಜನವಿರೋಧಿ ನಡೆ. ಅವೈಜ್ಞಾನಿಕವಾದ ಮಾರಕ ರೋಸ್ಟರ್ ಬಿಂದು ತೊಂದರೆ ಸರಿಪಡಿಸಲಾಗದ ಅಸಮರ್ಥ ಸರ್ಕಾರ ಇದಾಗಿದೆ ಎಂದು ಟೀಕಿಸಿದ್ದಾರೆ.
ಶಕ್ತಿ ಪ್ರದರ್ಶನ ಮಾಡಿಸಲು ಎರಡು ಸಮುದಾಯಗಳ ಕಾರ್ಯಕರ್ತರನ್ನು ಫ್ರೀಡಂ ಪಾರ್ಕಿ ಗೆ ಐಷರಾಮಿ ಬಸ್ಸುಗಳ ಮುಖಾಂತರ ಕರೆ ತಂದು ಸರ್ಕಾರದ ಪರವಾಗಿ ಶಕ್ತಿ ಪ್ರದರ್ಶನ ಮಾಡುವ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಲಗೈ ಸಮುದಾಯದ ಅಸಂಖ್ಯ ಸರ್ಕಾರಿ ನೌಕರರು ಮತ್ತು ಅಧಿಕಾರಿ ವಲಯ ಅವರ ಉದ್ಯೋಗವನ್ನು ನೆಚ್ಚಿಕೊಂಡಿರುವ ಅವರ ಕುಟುಂಬವರ್ಗ ಈ ಅನ್ಯಾಯದ ವಿರುದ್ಧ ತುಟಿಬಿಚ್ಚದಂತೆ ಮಾಡಿರುವುದು ಸರ್ಕಾರಿ ಭಯೋತ್ಪದನೆಯಾಗಿದೆ ಹಾಗೂ ಬಲಗೈ ಸಮುದಾಯದ ಸರ್ಕಾರಿ ನೌಕರರ ತೀವ್ರ ಅಸಯಾಕತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಷ್ಟೀಯ ಭೀಮ ಪಡೆ ಜಿಲ್ಲಾಧ್ಯಕ್ಷ ಡಿ.ಕೆ.ಭರತ್ ಕುಮಾರ್, ತಾಲ್ಲೂಕು ಅಧ್ಯಕ್ಷರಾದ ಸುಮಲತ, ಧಮ್ಮ ದೀವಿಗೆ ಸಂಘಟನೆ ತಾಲ್ಲೂಕು ಅಧ್ಯಕ್ಷ ಕೆ ಪಿ ಉಮೇಶ್ ಉಪಸ್ಥಿತರಿದ್ದರು.