ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜು10ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

2026ನೇ ಸಾಲಿನ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, ಎಸ್‌ಪಿವಿ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಜುಲೈ 10ರ ಶುಕ್ರವಾರ ಸಂಜೆ 6ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ಬೆಂಗಳೂರು: 2026ನೇ ಸಾಲಿನ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, ಎಸ್‌ಪಿವಿ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಜುಲೈ 10ರ ಶುಕ್ರವಾರ ಸಂಜೆ 6ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

  1. ಸಭಾಧ್ಯಕ್ಷರ ವಿಶೇಷ ಉಪನ್ಯಾಸ - ನ್ಯಾಯಮೂರ್ತಿ ಡಾ. ವಿ. ಶ್ರೀಶಾನಂದ, ಗೌರವಾನ್ವಿತ ನ್ಯಾಯಾಧೀಶರು, ಕರ್ನಾಟಕ ಹೈಕೋರ್ಟ್, ಖ್ಯಾತ ನ್ಯಾಯಶಾಸ್ತ್ರಜ್ಞರು ಹಾಗೂ ವಾಗ್ಮಿಗಳು ಅವರಿಂದ ವಿಶೇಷ ಭಾಷಣ.
  2. ವಿಶಿಷ್ಟ ಸಾಧಕರ ಸನ್ಮಾನ

Ø ಶ್ರೀ ಅರುಣ್ ಯೋಗಿರಾಜ್ – ನಾಡಿನ ಹೆಸರಾಂತ ಶಿಲ್ಪಿ ಹಾಗೂ ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿಯ ಶಿಲ್ಪ ನಿರ್ಮಾತೃ.

Ø ಡಾ. ಶುಭ ವೆಂಕಟೇಶ ಅಯ್ಯಂಗಾರ್ – ಯಾಂತ್ರಿಕ ವಿಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಪದ್ಮಶ್ರೀ ಪುರಸ್ಕೃತ ವಿಜ್ಞಾನಿ.

ಇದನ್ನೂ ಓದಿ: 12th International Yoga Day: ಯೋಗವು ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವ ಅತ್ಯುತ್ತಮ ಸಾಧನ : ಯೋಗಗುರು ಶ್ರೀಮತಿ ಸುನೀತಾ

  1. ಸಮಾಜ ಸೇವಾನಿರುತ ಅನುಭವಿ ಯೋಗ ಸಾಧಕರಿಗೆ ಗೌರವ ಸನ್ಮಾನ
  2. ಸಾಂಸ್ಕೃತಿಕ ಮತ್ತು ಯೋಗ ಪ್ರದರ್ಶನಗಳು

Ø ಗುಂಪು ಯೋಗ ರಚನೆಗಳು

Ø ವೈಯಕ್ತಿಕ ಯೋಗ ಪ್ರದರ್ಶನಗಳು

ಈ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಯೋಗಾಸಕ್ತ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮವು ರಾತ್ರಿ 8.00 ಗಂಟೆಗೆ ಸಮಾರೋಪಗೊಂಡ ನಂತರ ಭೋಜನ ವ್ಯವಸ್ಥೆ ಇರುತ್ತದೆ.

ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, ಎಸ್‌ಪಿವಿ ಸೇವಾ ಟ್ರಸ್ಟ್‌ನ ಪ್ರತಿಷ್ಠಿತ ಘಟಕ ವಾಗಿದ್ದು, ಬೆಂಗಳೂರಿನ ಮಹಾಲಕ್ಷ್ಮಿಪುರಂನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಮೂರು ದಶಕಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸು ತ್ತಿದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಹೆಸರಾಂತ ಯೋಗ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಯಾಮಗಳಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದೆ.