ಬೆಂಗಳೂರು: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ರಾಜಾಜಿನಗರದಲ್ಲಿ ತನ್ನ ಮೊದಲ ಶೋರೂಮ್ ತೆರೆಯಲು ಸಜ್ಜಾಗಿದ್ದು, ಬೆಂಗಳೂರಿನ ಈ ಭಾಗದ ಬೆಂಗಳೂರು ನಿವಾಸಿಗಳಿಗೆ ವಿಶ್ವಾಸ, ಸೊಬಗು ಮತ್ತು ವಿಶ್ವದರ್ಜೆಯ ಆಭರಣಗಳ ಸಮ್ಮಿಲನವನ್ನು ಹತ್ತಿರ ತರುತ್ತಿದೆ. ಏಪ್ರಿಲ್ 17ರಂದು ಸಂಜೆ ಈ ನೂತನ ಆಭರಣ ಮಳಿಗೆಯ ಉದ್ಘಾಟನೆಯಾಯಿತು.
ಜೋಯಾಲುಕ್ಕಾಸ್ ಅಂತಾರಾಷ್ಟ್ರೀಯ ಮಾನದಂಡಗಳಲ್ಲಿ `ಸಿಗ್ನೇಚರ್' ಹೊಂದಿರುವ ಹೊಸ ಶೋರೂಮ್ ವಿಶಾಲ ಒಳಾಂಗಣ, ಸಮಕಾಲೀನ ವಿನ್ಯಾಸ ಮತ್ತು ವಿವಿಧ ಆಭರಣ ವಿಭಾಗಗಳಿಗೆ ಮೀಸಲಾದ ವಲಯಗಳನ್ನು ಒಳಗೊಂಡಿದೆ. ಕಾಲಾತೀತ ಚಿನ್ನಾಭರಣ ಮತ್ತು ಸೊಗಸಾದ ವಧುವಿನ ಸಂಗ್ರಹಗಳಿಂದ ಸೊಗಸಾದ ವಜ್ರ, ಅಮೂಲ್ಯ ಹರಳು ಮತ್ತು ಬೆಳ್ಳಿಯವರೆಗೆ ಆಭರಣ ಗಳ ವೈವಿಧ್ಯತೆಗಳಿವೆ. ಪ್ರತಿ ಗ್ರಾಹಕರೂ ವ್ಯಕ್ತಿಗತ ಸೇವೆ ಮತ್ತು ನೈಜ ಐಷಾರಾಮಿ ಖರೀದಿ ವಾತಾವರಣವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: Jewel Fashion 2026: ಜೆಮೆಟ್ರಿಕ್ ಡಿಸೈನ್ ಜ್ಯುವೆಲರಿಗಳ ಜಾದೂ
ಜೋಯಾಲುಕ್ಕಾಸ್ ವಿಶೇಷ ಕ್ಯಾಷ್‌ಬ್ಯಾಕ್ ವೋಚರ್ ಗಳನ್ನು ಘೋಷಿಸಿದ್ದು, ಏ.೨೬ರವರೆಗೆ ಮಾನ್ಯವಾಗಿರುತ್ತದೆ. ರೂ. 75000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರ, ಕತ್ತರಿಸದ ವಜ್ರ ಮತ್ತು ಪ್ಲಾಟಿನಂ ಆಭರಣಗಳ ಖರೀದಿಯ ಮೇಲೆ ರೂ. 2000/- ಕ್ಯಾಷ್‌ಬ್ಯಾಕ್ ವೋಚರ್; ರೂ. 75000/- ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಮತ್ತು ಅಮೂಲ್ಯ ಆಭರಣಗಳ ಖರೀದಿಯ ಮೇಲೆ ರೂ. 21000/- ಕ್ಯಾಷ್‌ಬ್ಯಾಕ್ ವೋಚರ್; ಮತ್ತು ರೂ. 15000/- ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಬೆಳ್ಳಿ ಆಭರಣಗಳ ಮೇಲೆ ರೂ. 2500/- ಕ್ಯಾಷ್‌ಬ್ಯಾಕ್ ವೋಚರ್ ಅನ್ನು ಗ್ರಾಹಕರು ಪಡೆಯುತ್ತಾರೆ.
ನೂತನ ಶಾಖೆಯ ಅನಾವರಣ ಘೋಷಿಸಿದ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಡಾ. ಜೋಯ್ ಆಲುಕ್ಕಾಸ್ ಮಾತನಾಡಿ, "ರಾಜಾಜಿನಗರದಲ್ಲಿ ನಮ್ಮ ಮೊದಲ ಶೋರೂಮ್ ತೆರೆಯಲು ನಾವು ಸಂತಸಪಡುತ್ತೇವೆ. ಇದು ಸಂಸ್ಕೃತಿ ಮತ್ತು ಅತ್ಯುತ್ತಮ ಆಭರಣಗಳ ಬಗ್ಗೆ ಆಳವಾದ ಮೆಚ್ಚುಗೆಗೆ ಹೆಸರುವಾಸಿಯಾಗಿದೆ.
ಜೋಯಾಲುಕ್ಕಾಸ್‌ನಲ್ಲಿ, ನಾವು ಪ್ರತಿಯೊಬ್ಬ ಗ್ರಾಹಕರಿಗೆ ಅತ್ಯುತ್ತಮ ವಿನ್ಯಾಸ ಮತ್ತು ಅತ್ಯುತ್ತಮ ಸೇವೆಯನ್ನು ನೀಡಲು ಕಟಿಬದ್ಧರಾಗಿದ್ದೇವೆ. ಈ ಆಚರಣೆಯ ಭಾಗವಾಗಲು ಮತ್ತು ಜಗತ್ತಿನ ಅಚ್ಚು ಮೆಚ್ಚಿನ ಜ್ಯುವೆಲ್ಲರ್‌ನೊಂದಿಗೆ ಶಾಪಿಂಗ್ ಆನಂದವನ್ನು ಅನುಭವಿಸಲು ನಾವು ಎಲ್ಲರನ್ನೂ ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ" ಎಂದು ಹೇಳಿದರು.
ತನ್ನ ವಿಶಿಷ್ಟ ವಿನ್ಯಾಸ, ರಾಜಿಯಾಗದ ಗುಣಮಟ್ಟ ಮತ್ತು ಆತ್ಮೀಯ ಗ್ರಾಹಕಸೇವೆಯೊಂದಿಗೆ, ಜೋಯಾಲುಕ್ಕಾಸ್ ರಾಜಾಜಿನಗರದ ನಿವಾಸಿಗಳಿಗೆ ಆಭರಣ ಶಾಪಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸಲು ಸನ್ನದ್ಧವಾಗಿದೆ.