ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ಮತ್ತು ಸರ್ಕಾರದ ಇತ್ತೀಚಿನ ಕ್ರಮಗಳ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಸ್ತುತ ಸರ್ಕಾರವನ್ನು "ಪಿಕ್‌ಪಾಕೆಟ್ ಸರ್ಕಾರ" ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಹೇಳಿಕೆಗಳ ಕುರಿತು ಟೀಕಿಸಿದ ಸಚಿವರು, "ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಮಹಾನಗರದ ವ್ಯಾಪ್ತಿಯನ್ನು ಹಿಗ್ಗಿಸುವುದರ ಹಿಂದೆ ಅಭಿವೃದ್ಧಿಯ ಉದ್ದೇಶವಿಲ್ಲ. ಬದಲಿಗೆ, ವ್ಯಾಪಕವಾಗಿ ಭ್ರಷ್ಟಾಚಾರ ಮತ್ತು ಸುಲಿಗೆ ಮಾಡಲು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲಾಗುತ್ತಿದೆ" ಎಂದು ಕಿಡಿ ಕಾರಿದರು. ಕಾಂಗ್ರೆಸ್ ಸರ್ಕಾರವು ಹೊಸದಾಗಿ ತರುತ್ತಿರುವ ಸಾಫ್ಟ್‌ವೇರ್ ವ್ಯವಸ್ಥೆಗಳ ಹೆಸರಿನಲ್ಲಿ ನಾಗರಿಕರ ಜೇಬಿಗೆ ಕೈ ಹಾಕುತ್ತಿದೆ. ವಿವಿಧ ನಾಗರಿಕ ಸೇವೆಗಳಿಗೆ ಬರೋಬ್ಬರಿ ₹10,000 ವರೆಗೂ ಭಾರಿ ಶುಲ್ಕವನ್ನು ವಿಧಿಸಲಾಗುತ್ತಿದೆ. 'ನಿಮ್ಮ ಆಸ್ತಿ, ನಿಮ್ಮ ಹಕ್ಕು' ಹಾಗೂ ಮನೆ ಬಾಗಿಲಿಗೇ ದಾಖಲೆ ತಲುಪಿಸುತ್ತೇವೆ ಎಂಬುದು ಕೇವಲ ಸುಳ್ಳು ಪ್ರಚಾರವಾಗಿದೆ. ಇದು ಜನಸಾಮಾನ್ಯರ ಹಣವನ್ನು ದೋಚುವ ಪಿಕ್‌ಪಾಕೆಟ್ ತಂತ್ರವಲ್ಲದೆ ಮತ್ತೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ದೆಹಲಿ ವರಿಷ್ಠರಿಗೆ ಹಣ ರವಾನಿಸಲು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ರಾಜ್ಯವು ಕೇವಲ ಒಂದು 'ಎಟಿಎಂ' (ATM) ಆಗಿ ಮಾರ್ಪಟ್ಟಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಳು ಹೇಳುವುದಕ್ಕೆ ಈ ಸರ್ಕಾರಕ್ಕೆ ಯಾವುದೇ ಸಂಕೋಚವಿಲ್ಲ ಮತ್ತು ಸಾರ್ವಜನಿಕರನ್ನು ಸುಲಿಗೆ ಮಾಡಲು ಕಿಂಚಿತ್ತೂ ನಾಚಿಕೆಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದ್ರಾ ಟ್ರಂಪ್? ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಊರಿಗೊಂದು ಕ್ಯಾಬಿನೆಟ್ ಸಭೆ ಬೇಕಾ?
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದ ಬಗ್ಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ''ಈ ಸರಕಾರ ಅಧಿಕಾರಕ್ಕೆ ಬಂದ ನಂತರ ಊರಿಗೊಂದು ಸಂಪುಟ ಸಭೆ ಮಾಡುತ್ತಿದೆ. ಸಚಿವ ಸಂಪುಟ ಸಭೆ ನಡೆಸಲು ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಡ ಕಟ್ಟಿದ್ದರು. ಈಗ ಜಿಲ್ಲೆಗಳಿಗೆ ದಂಡುದಂಡಾಗಿ ಹೋಗಿ ದುಂದುವೆಚ್ಚ ಮಾಡಿಕೊಂಡುಸಚಿವ ಸಂಪುಟ ಸಭೆ ಮಾಡುತ್ತಿದ್ದಾರೆ. ಪ್ರಚಾರದ ಸ್ಟಂಟ್ ಬಿಟ್ಟರೆ ಇದರಲ್ಲಿ ಬೇರೇನೂ ಇಲ್ಲ. ಈ ರೀತಿ ಊರಿಗೊಂದು ಕ್ಯಾಬಿನೆಟ್ ಸಭೆ ಮಾಡಲು ವಿಧಾನಸೌಧ ಟೂರಿಂಗ್ ಟಾಕೀಸಾ? ಎಂದು ಕುಮಾರಸ್ವಾಮಿ ಕಿಡಿ ಕಾರಿದರು.