ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಷಕಾರಿ ದತ್ತೂರಿ ಹಣ್ಣು ಮಾರಾಟ; ಕರ್ನಾಟಕದಲ್ಲಿ ಅಮೆಜಾನ್, ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್‌ನ ಪರವಾನಗಿ ರದ್ದು

Datura: ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಮಾನವ ಬಳಕೆಗಾಗಿ ಖಾದ್ಯ ಉತ್ಪನ್ನಗಳಾಗಿ ಪಟ್ಟಿ ಮಾಡಿರುವುದು ಕಂಡುಬಂದ ನಂತರ ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಅಮೆಜಾನ್, ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ನ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ವಿಷಕಾರಿ ದತ್ತೂರಿ (Datura) ಹಣ್ಣು ಮತ್ತು ಬೀಜಗಳನ್ನು ಮಾನವ ಬಳಕೆಗಾಗಿ ಖಾದ್ಯ ಉತ್ಪನ್ನಗಳಾಗಿ ಪಟ್ಟಿ ಮಾಡಿರುವುದು ಕಂಡುಬಂದ ನಂತರ ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಅಮೆಜಾನ್, ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ನ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿದೆ. ಈ ಹಿಂದೆ ಪ್ರಾಧಿಕಾರವು ದಾತುರಾ ಉತ್ಪನ್ನಗಳ ಮಾರಾಟ ಮತ್ತು ಈ ವೇದಿಕೆಗಳಲ್ಲಿ ಅವುಗಳ ಆನ್‌ಲೈನ್ ಪಟ್ಟಿಯ ಬಗ್ಗೆ ತನಿಖೆಗೆ ಆದೇಶಿಸಿತ್ತು.

ಇಲಾಖೆಯು ತನ್ನ ತನಿಖೆಯಲ್ಲಿ, ದತ್ತೂರಿ ಹಣ್ಣುಗಳು ಮತ್ತು ಬೀಜಗಳನ್ನು ವಿವಿಧ ಇ-ಕಾಮರ್ಸ್ ವೇದಿಕೆಗಳಲ್ಲಿ ಮಾರಾಟಕ್ಕೆ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದೆ. ದತ್ತೂರಿ ಹಣ್ಣುಗಳು ಮತ್ತು ಬೀಜಗಳನ್ನು ಹೊಂದಿರುವ ಪ್ಯಾಕೆಟ್‌ಗಳು ಆಹಾರ ಪರವಾನಗಿ/ನೋಂದಣಿ ಸಂಖ್ಯೆಗಳನ್ನು ಹೊಂದಿದ್ದು, ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗಿದ್ದು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಅಥವಾ ವಿತರಣೆಗೆ ನೀಡಲಾಗಿರುವುದು ಕಂಡುಬಂದಿದೆ.

ದತ್ತೂರಿ ಗಿಡಗಳು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲೂ ಬೆಳೆಯುತ್ತವೆ. ಇದು ಪಾಳುಬಿದ್ದ ಜಾಗಗಳು, ರಸ್ತೆ ಬದಿಗಳು ಮತ್ತು ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗಿಡದ ಮೇಲೆ ಬಿಳಿ ಹೂವು ಬಿಡುತ್ತೆ. ಈ ಗಿಡ ಕೆಟ್ಟ ವಾಸನೆ ಇರುತ್ತೆ. ಕೊಂಚ ಕೈಕಾಲಿಗೆ ಸೋಕಿದ್ರೂ ವಾಸನೆ. ಇಂಥ ವಿಷಯುಕ್ತ ಸಸ್ಯದ ಹಣ್ಣು ಬೀಜಗಳು ಇತ್ತೀಚೆಗೆ ಇ-ಕಾಮರ್ಸ್‌ನಲ್ಲಿ ಮಾರಾಟ ಮಾಡ್ತಿರೋದು ಕಂಡು ಬಂದಿದೆ.

ದತ್ತೂರಿ ಹಣ್ಣು ಮತ್ತು ಬೀಜಗಳನ್ನ ಕೆಲವರು ಆಯುರ್ವೇದ ಅಥವಾ ಸಾಂಪ್ರದಾಯಿಕ ಔಷಧೀಯ ಉದ್ದೇಶಗಳಿಗಾಗಿ ಹಾಗೂ ಧಾರ್ಮಿಕ ಪೂಜೆಗಳಿಗೆ ಬಳಸಲು ಆನ್‌ ಲೈನ್‌ ನಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ, ದತ್ತೂರಿ ಅತ್ಯಂತ ವಿಷಕಾರಿ ಸಸ್ಯವಾಗಿದ್ದು, ಮನುಷ್ಯರು ಇದನ್ನು ಸೇವಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಿ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಆಹಾರ ಇದನ್ನು ಬ್ಯಾನ್‌ ಮಾಡಿದೆ. ಈ ಉತ್ಪನ್ನಕ್ಕೆ ಸಂಬಂಧಿಸಿದ ಜಾಹೀರಾತನ್ನು ತೆಗೆಯುವಂತೆ ಕಂಪನಿಗಳಿಗೆ ಸೂಚಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಇ ಕಾಮರ್ಸ್ ಕಂಪನಿಗಳಿಗೆ ತಿಳಿಸಲಾಗಿದೆ.

ಆಹಾರ ಅಥವಾ ಮಾನವ ಬಳಕೆಗಾಗಿ ದತ್ತೂರಿ ಹಣ್ಣುಗಳು ಅಥವಾ ಬೀಜಗಳನ್ನು ನೀಡುವ ಎಲ್ಲಾ ಆನ್‌ಲೈನ್ ಪಟ್ಟಿಗಳು ಮತ್ತು ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕಲು ಅಥವಾ ಸ್ಥಗಿತಗೊಳಿಸಲು ನಿಯಂತ್ರಕವು ವೇದಿಕೆಗಳಿಗೆ ಆದೇಶಿಸಿದೆ.

Vishakha Bhat Heggar

View all posts by this author