ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಇಟಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA; ಫಲಿತಾಂಶ ಹೀಗೆ ಚೆಕ್‌ ಮಾಡಿ

KEA: ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಸಿಇಟಿ ಕೋರ್ಸ್‌ಗಳ ಎರಡನೇ ಸುತ್ತು ಹಾಗೂ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದೆ. ಆಕ್ಷೇಪಣೆ ಸಲ್ಲಿಸಲು ಆ.24 ಸಂಜೆ 4 ಗಂಟೆ ಗಡುವು ನೀಡಲಾಗಿದ್ದು, ಆಕ್ಷೇಪಣೆ ಇದ್ದರೆ ಆಧಾರ ಸಮೇತ ಇ-ಮೇಲ್ ಮೂಲಕ ಸಲ್ಲಿಸಬೇಕು ಎಂದು ಕೆಇಎ ಸೂಚನೆ ನೀಡಿದೆ.

ಸಂಗ್ರಹ ಚಿತ್ರ

ಬೆಂಗಳೂರು: ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಸಿಇಟಿ ಕೋರ್ಸ್‌ಗಳ ಎರಡನೇ ಸುತ್ತು ಹಾಗೂ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ( Seat Allotment) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಭಾನುವಾರ ರಾತ್ರಿ ಪ್ರಕಟಿಸಿದೆ.

ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ, ಪಶುವೈದ್ಯಕೀಯ ಬಿ.ಎಸ್ಸಿ ನರ್ಸಿಂಗ್, ಬಿ-ಫಾರ್ಮ್, ಫಾರ್ಮ್-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್‌ ಸೇರಿದಂತೆ ಸಿಇಟಿ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟಗೊಳಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಆ.24 ಸಂಜೆ 4 ಗಂಟೆ ಗಡುವು ನೀಡಲಾಗಿದ್ದು, ಆಕ್ಷೇಪಣೆ ಇದ್ದರೆ ಆಧಾರ ಸಮೇತ ಇ-ಮೇಲ್ ಮೂಲಕ ಸಲ್ಲಿಸಬೇಕು ಎಂದು ಕೆಇಎ ಸೂಚನೆ ನೀಡಿದೆ.

ರಿಸಲ್ಟ್​ ನೋಡುವುದು ಹೇಗೆ?

ಪರೀಕ್ಷೆ ಬರೆದ ಅಭ್ಯರ್ಥಿ ತಮಗೆ ಲಭ್ಯವಾಗಿರುವ ಸೀಟಿನ ವಿವರಗಳನ್ನು ಪರಿಶೀಲಿಸಲು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. KEA ಅಧಿಕೃತ ವೆಬ್‌ಸೈಟ್ cetonline.karnataka.gov.in ಅಥವಾ KEA ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

ಬಳಿಕ ವೆಬ್​ಸೈಟ್​ ಹೋಮ್​ ಪೇಜ್​ನಲ್ಲಿ ಲಭ್ಯವಿರುವ "UGCET 2026 Seat Allotment"ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ CET ಅರ್ಜಿ ಸಂಖ್ಯೆ ಹಾಗೂ ಜನ್ಮ ದಿನಾಂಕ ನಮೂದಿಸಿ. ಈ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಸಬ್‌ಮಿಟ್‌ ಅಥವಾ 'ಲಾಗಿನ್‌' ಕ್ಲಿಕ್​ ಮಾಡಿ. ಸ್ಕ್ರೀನ್​ನ ಮೇಲೆ ನಿಮ್ಮ ಸೀಟು ಹಂಚಿಕೆ ವಿವರಗಳು ತೋರಿಸುತ್ತದೆ. ಈ ತಾತ್ಕಾಲಿಕ ಸೀಟು ಹಂಚಿಕೆ ಪತ್ರವನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.

CET Exam: ಸಿಇಟಿ ಪರೀಕ್ಷೆ; ಚಿಕ್ಕಬಳ್ಳಾಪುರದಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ, 12 ದಿನದ ಹಿಂದೆ ಉಪನಯನವಾಗಿದ್ದ ವಿದ್ಯಾರ್ಥಿ

ಇದು ಕೇವಲ ತಾತ್ಕಾಲಿಕ ಫಲಿತಾಂಶವಾಗಿರುವುದರಿಂದ ವಿದ್ಯಾರ್ಥಿಗಳು ಸದ್ಯ ಸೀಟು ಹಂಚಿಕೆಯಾಗಿರುವ ಕಾಲೇಜುಗಳಿಗೆ ತೆರಳಿ ನೇರ ಪ್ರವೇಶ ಪಡೆಯುವಂತಿಲ್ಲ. ನಿಗದಿತ ಅವಧಿಯೊಳಗೆ ಸ್ವೀಕೃತವಾಗುವ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಕೆಇಎ ಪ್ರಕಟಿಸಲಿದೆ.

Vishakha Bhat Heggar

View all posts by this author