ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇ ಲೂನಾ ಪ್ರೈಮ್‌ ಅನ್ನು ಬಿಡುಗಡೆ ಮಾಡಿದ ಕೈನೆಟಿಕ್ ಗ್ರೀನ್: ಭಾರತದ ಸಂಚಾರಿ ಮೋಟಾರ್‌ ಸೈಕಲ್ ವಿಭಾಗಕ್ಕೆ ಕ್ರಾಂತಿಕಾರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪರಿಚಯ

ಇ ಲೂನಾ ಪ್ರೈಮ್ 16 ಇಂಚಿನ ಅಲಾಯ್ ಚಕ್ರಗಳು, ಡಿಜಿಟಲ್ ಕ್ಲಸ್ಟರ್ ಮತ್ತು ಪ್ರೀಮಿಯಂ ಸೌಂದರ್ಯವನ್ನು ಹೊಂದಿದ್ದು, ಭಾರತದ ಸಂಚಾರಿ ಮೋಟಾರ್ ಸೈಕಲ್ ವಿಭಾಗವನ್ನು ಗುರಿ ಯಾಗಿಟ್ಟುಕೊಂಡು ಬಿಡುಗಡೆಯಾಗಿದೆ. ಇದರ ಮಾಲೀಕತ್ವ ವೆಚ್ಚ ತಿಂಗಳಿಗೆ ಕೇವಲ Rs. 2,500.

ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ಭಾರತದ ಬೃಹತ್ ಪ್ರಮಾಣದ ಸಂಚಾರಿ ಮೋಟಾರ್ ಸೈಕಲ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಇ ಲೂನಾ ಪ್ರೈಮ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಇಂದು ಬಿಡುಗಡೆ ಮಾಡಿದೆ.

ಇ ಲೂನಾ ಪ್ರೈಮ್ ಅನ್ನು ಆಧುನಿಕ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾಗಿದ್ದು, ಇದು ಕೈಗೆಟುಕುವ ಬೆಲೆಯ, ಪ್ರಾಯೋಗಿಕ, ಶಕ್ತಿಯುತ, ಉಪಯುಕ್ತ ಮತ್ತು ವಿಶ್ವಾಸಾರ್ಹ ವೈಯಕ್ತಿಕ ಸಾರಿಗೆ ವಾಹನವನ್ನು ಬಯಸುವ ನಗರ ಮತ್ತು ಗ್ರಾಮೀಣ ಪ್ರದೇಶದ ಕೋಟ್ಯಂತರ ಜನರ ಅಗತ್ಯಗಳನ್ನು ಪೂರೈಸುವ ಕ್ರಾಂತಿಕಾರಿ ಉತ್ಪನ್ನವಾಗಿದೆ.

ಕೇವಲ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ, 25,000ಕ್ಕೂ ಹೆಚ್ಚು ಯೂನಿಟ್ ಗಳು ಮಾರಾಟ ಆಗಿರುವ ಇ- ಲೂನಾ ಬ್ರಾಂಡ್‌ ನ ಅತ್ಯದ್ಭುತ ಯಶಸ್ಸಿನ ಆಧಾರದ ಮೇಲೆ ಕೈನೆಟಿಕ್ ಗ್ರೀನ್ ಸಂಸ್ಥೆಯು ಈ ವಾಹನ ಸಿದ್ಧಪಡಿಸಿದ್ದು, ಈ ಮೂಲಕ ಭಾರತದ ದೊಡ್ಡ ಪ್ರಮಾಣದ ಪ್ರವೇಶ ಮಟ್ಟದ ಸಂಚಾರಿ ಮೋಟರ್‌ ಸೈಕಲ್ ವಿಭಾಗಕ್ಕೆ ಪ್ರವೇಶಿಸಿದೆ.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕೈನೆಟಿಕ್ ಗ್ರೀನ್ ಸಂಸ್ಥೆಯು ಇ- ಲೂನಾ ಪ್ರೈಮ್ ಅನ್ನು ಸುಮಾರು 75 ಕೋಟಿ ಭಾರತೀಯರಿಗೆ ಅಂದರೆ ದ್ವಿಚಕ್ರ ವಾಹನವನ್ನು ಇನ್ನೂ ಹೊಂದಿರದ ಜನಸಂಖ್ಯೆಯ ಸುಮಾರು ಶೇ.50ರಷ್ಟು ಮಂದಿಗೆ ತಲುಪಿಸುವ ಗುರಿಯನ್ನು ಹೊಂದಿದೆ.

ಇ ಲೂನಾ ಪ್ರೈಮ್ ಎರಡು ವೇರಿಯೆಂಟ್ ಗಳಲ್ಲಿ ಲಭ್ಯವಿದ್ದು, 110 ಕಿಮೀ ಮತ್ತು 140 ಕಿಮೀ ರೇಂಜ್‌ನೊಂದಿಗೆ ದೊರೆಯಲಿದೆ. Rs. 82,490 (ಎಕ್ಸ್-ಶೋರೂಮ್) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದು 6 ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದ್ದು, ನಿಮ್ಮ ಹತ್ತಿರದ ಕೈನೆಟಿಕ್ ಗ್ರೀನ್ ಡೀಲರ್‌ ಶಿಪ್‌ ನಲ್ಲಿ ಮಾರಾಟಕ್ಕೆ ಲಭ್ಯವಿದೆ.

ಇ ಲೂನಾ ಪ್ರೈಮ್ ಅನ್ನು ನಗರ ಮತ್ತು ಗ್ರಾಮೀಣ ಭಾರತದ ಬೆಳೆಯುತ್ತಿರುವ ಸಾರಿಗೆ ಅಗತ್ಯ ಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದ್ದು, ಸುಸ್ಥಿರ, ಬಾಳಿಕೆ ಬರುವ ಮತ್ತು ವೆಚ್ಚ ಪರಿಣಾಮ ಕಾರಿ ದೈನಂದಿನ ಸಂಚಾರ ಉತ್ಪನ್ನವಾಗಿದೆ.

75 ಕೋಟಿಗೂ ಹೆಚ್ಚು ಮಂದಿ ವೈಯಕ್ತಿಕ ಸಾರಿಗೆ ವಾಹನದ ಆಕಾಂಕ್ಷಿಗಳು ಮತ್ತು ಸುಮಾರು ಶೇ.50ರಷ್ಟು ಜನಸಂಖ್ಯೆಯ ದ್ವಿಚಕ್ರ ವಾಹನ ಬೇಡಿಕೆಗೆ ಪೂರಕವಾಗಿ ಇ ಲೂನಾ ಪ್ರೈಮ್ ಕೈಗೆಟುಕುವ ದರದ ಮತ್ತು ಸುಸ್ಥಿರ ವೈಯಕ್ತಿಕ ಸಾರಿಗೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗುರಿಯಾಗಿಟ್ಟುಕೊಂಡು ಮಾರುಕಟ್ಟೆಗೆ ಬಂದಿದೆ. ಈ ಮೋಟಾರ್‌ ಸೈಕಲ್ 100 ಸಿಸಿ ಮತ್ತು 110 ಸಿಸಿ ಐಸಿಇ (ಇಂಟರ್ನಲ್ ಕಂಬಷನ್ ಎಂಜಿನ್) ಮೋಟಾರ್‌ ಸೈಕಲ್‌ ಗಳ ವಿರುದ್ಧ ತಂತ್ರಗತವಾಗಿ ಬಿಡುಗಡೆಯಾಗಿರುವ ವೆಚ್ಚ- ಪರಿಣಾಮಕಾರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದ್ದು, ಇದು ಗಮನಾರ್ಹ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. ಸಾಂಪ್ರದಾಯಿಕ ICE ಪೆಟ್ರೋಲ್ ಆಧಾರಿತ ದ್ವಿಚಕ್ರ ವಾಹನದ ಮಾಲೀಕತ್ವದ ವೆಚ್ಚವು ತಿಂಗಳಿಗೆ Rs. 7,500 ಎಂದು ಅಂದಾಜಿಸಲಾಗಿದೆ, ಇದರಲ್ಲಿ Rs. 2200 (EMI) ಮತ್ತು Rs. 5300 (ಇಂಧನ ವೆಚ್ಚಗಳು ಮತ್ತು ನಿರ್ವಹಣೆ) ಸೇರಿವೆ.

ಈ ಕುರಿತು ಮಾತನಾಡಿರುವ ಕೈನೆಟಿಕ್ ಗ್ರೀನ್ ನ ಸಂಸ್ಥಾಪಕಿ ಮತ್ತು ಸಿಇಓ ಡಾ. ಸುಲಜ್ಜಾ ಫಿರೋಡಿಯಾ ಮೋಟ್ವಾನಿ ಅವರು, “ಇ- ಲೂನಾ ಪ್ರೈಮ್ ಅನ್ನು ಬಿಡುಗಡೆ ಮಾಡಲು ನಾವು ಸಂತೋಷ ಪಡುತ್ತೇವೆ. ಇದು ಭಾರತದಲ್ಲಿ ವೈಯಕ್ತಿಕ ಸಾರಿಗೆ ಕ್ಷೇತ್ರದ ಭವಿಷ್ಯ ರೂಪಿಸುವ ನಮ್ಮ ಬದ್ಧತೆಯನ್ನು ಸಾರುತ್ತದೆ. ಸಾವಿರಾರು ತೃಪ್ತ ಗ್ರಾಹಕರಿಂದ ವ್ಯಾಪಕ ಪ್ರಶಂಸೆ ಪಡೆದಿರುವ ನಮ್ಮ ಇ-ಲೂನಾ ಸರಣಿಯ ಭರ್ಜರಿ ಯಶಸ್ಸಿನ ಮೇಲೆ ರೂಪಿಸಿರುವ ಇ- ಲೂನಾ ಪ್ರೈಮ್, ನಮ್ಮ ಆವಿಷ್ಕಾರ ಮತ್ತು ಗ್ರಾಹಕ-ಕೇಂದ್ರಿತ ಸೇವೆಯಲ್ಲಿ ನಮ್ಮನ್ನು ಬಹಳ ಮುಂದಕ್ಕೆ ಕೊಂಡೊಯ್ದಿದೆ.