ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KPSC: ಕೆಪಿಎಸ್‌ಸಿ: ನ್ಯಾಯಾಂಗ V/s ಶಾಸಕಾಂಗ ಸಂಘರ್ಷ

ಎರಡು ದಿನಗಳ ಹಿಂದೆ ಕೆಪಿಎಸ್‌ಸಿ ವಿಚಾರಣೆ ನಡೆಸಿದ ಹೈಕೋರ್ಟ್ ಪಶುವೈದ್ಯಾಧಿಕಾರಿ ನೇಮ ಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಧಾರವಾಡ ಹೈಕೋರ್ಟ್ ಪೀಠ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಲ್ಲೂ, ತನಿಖಾ ತಂಡದ ನೇತೃತ್ವ ವಹಿಸಬೇಕಾದ ಅಧಿಕಾರಿಯನ್ನು ಹೈಕೋರ್ಟ್ ಸ್ವತಃ ಹೆಸರಿಸಿ ಆದೇಶಿಸಿರುವುದಕ್ಕೆ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಹೋರಾಟ ನಡೆಸಲು ಮುಂದಾಗಿದೆ.

ಬೆಂಗಳೂರು: ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಡಿಐಜಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲು ಆದೇಶಿಸಿರುವ ಹೈಕೋರ್ಟ್ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಯಾಂಗದ ವ್ಯಾಪ್ತಿ ಯಲ್ಲಿ ನ್ಯಾಯಾಂಗ ಪ್ರವೇಶಿಸುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರಕಾರ ಸಿದ್ಧತೆ ನಡೆಸಿಕೊಂಡಿದೆ.

ಎರಡು ದಿನಗಳ ಹಿಂದೆ ಕೆಪಿಎಸ್‌ಸಿ ವಿಚಾರಣೆ ನಡೆಸಿದ ಹೈಕೋರ್ಟ್ ಪಶುವೈದ್ಯಾಧಿಕಾರಿ ನೇಮ ಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಧಾರವಾಡ ಹೈಕೋರ್ಟ್ ಪೀಠ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಲ್ಲೂ, ತನಿಖಾ ತಂಡದ ನೇತೃತ್ವ ವಹಿಸಬೇಕಾದ ಅಧಿಕಾರಿಯನ್ನು ಹೈಕೋರ್ಟ್ ಸ್ವತಃ ಹೆಸರಿಸಿ ಆದೇಶಿಸಿರುವುದಕ್ಕೆ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಹೋರಾಟ ನಡೆಸಲು ಮುಂದಾಗಿದೆ.

ಇದನ್ನೂ ಓದಿ: KPSC ಮುಚ್ಚುತ್ತೇವೆ ಎಂಬ ಸಿಎಂ ಹೇಳಿಕೆ ಬುದ್ಧಿಗೇಡಿತನ, ಹೊಣೆಗೇಡಿತನ, ಅಜ್ಞಾನದ ಪರಮಾವಧಿ: ಎಚ್‌ಡಿಕೆ ಟೀಕೆ

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಾಗೂ ಇತರ ಪರೀಕ್ಷೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪದ ತನಿಖೆಯನ್ನು ಹೈಕೋರ್ಟ್ ನ್ಯಾ.ಎಂ.ನಾಗ ಪ್ರಸನ್ನ ಅವರು ಸಿಐಡಿ ಇಲಾಖೆಯಿಂದ ಹಿಂಪ ಡೆದು, ಎಸ್‌ಐಟಿಗೆ ವಹಿಸಿದ್ದರು. ಆದೇಶದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹೆಸರನ್ನೇ ಉಲ್ಲೇಖಿಸಿ ಅವರ ನೇತೃತ್ವದ ಎಸ್ʼಐಟಿ ರಚಿಸುವಂತೆ ಸೂಚಿಸಿದೆ. ಹಾಗಾಗಿ, ತನಿಖಾಧಿಕಾರಿಯನ್ನು ಕೋರ್ಟ್ ನಿರ್ದೇಶಿಸುವುದಕ್ಕೆ ಮುಂಚಿನ ಉದಾಹರಣೆ ಆಧರಿಸಿ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸರಕಾರ ನಿರ್ಧರಿಸಿದೆ.

image

ಸದ್ಯ ಸಿಐಡಿ ತನಿಖೆ ಉತ್ತಮ ರೀತಿಯಲ್ಲಿಯೇ ನಡೆಯುತ್ತಿದೆ. ಹೀಗಿರುವಾಗ ಸಿಐಡಿ ತನಿಖೆ ನಡೆಯುತ್ತಿರುವಾಗ ಎಸ್‌ಐಟಿ ರಚಿಸುವುದು ತನಿಖೆಯ ಹಿತದೃಷ್ಟಿಯಿಂದ ಸರಿಯಲ್ಲ. ಸರಕಾರ ಹೈಕೋರ್ಟ್ ಆದೇಶದ ವಿರುದ್ಧ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತದೆ.

- ಪ್ರಿಯಾಂಕ್ ಖರ್ಗೆ, ಗೃಹ ಸಚಿವ