ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KPSC Recruitment Scam: ಮುಗಿಯದ ಕೆಪಿಎಸ್‌ಸಿ ಬಾನಗಡಿ 10 ಮಂದಿ ವಿರುದ್ಧ ಕ್ರಮಕ್ಕೆ ಶಿಫಾರಸ್ಸು:‌ ಆರ್‌ಡಿಪಿಆರ್ ಎಇಇ ನೇಮಕದಲ್ಲೂ ಅಕ್ರಮ

ತನಿಖೆಯ ಸಂದರ್ಭದಲ್ಲಿ ಮೂವರು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗದಿರುವುದು ಕೂಡ ಗಮನಕ್ಕೆ ಬಂದಿತ್ತು. ಪ್ರಕರಣದ ಮುಂದಿನ ತನಿಖೆಗಾಗಿ ಕೆಪಿಎಸ್‌ಸಿ ಆಂತರಿಕ ಸಮಿತಿ ರಚಿಸಿತ್ತು. ಕೆಪಿಎಸ್‌ಸಿ ಸದಸ್ಯ ಶಾಂತ ಹೊಸಮನಿ ನೇತೃತ್ವದಲ್ಲಿ ಸಮಿತಿ ರಚನೆ ಯಾಗಿತ್ತು. ಬಳಿಕ ವಿಜಯ್‌ಕುಮಾರ್ ನೇತೃತ್ವದಲ್ಲಿ ಮತ್ತೊಂದು ಉಪಸಮಿತಿ ರಚಿಸಿ, 24 ಅಭ್ಯರ್ಥಿ ಗಳ ಒಎಂಆರ್ ಶೀಟ್‌ಗಳು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಯಿತು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಗಳಲ್ಲಿ ಅಕ್ರಮದ ಆರೋಪದ ನಡುವೆ 2023ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ (ಆರ್‌ಡಿಪಿಆರ್) ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರೇಡ್ -1 ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯಲ್ಲೂ ಒಎಂಆರ್ ಶೀಟ್ ತಿದ್ದುಪಡಿ ಮಾಡಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ನಡೆಸಿ ಆಂತರಿಕ ತನಿಖಾ ವರದಿ, ತಿದ್ದುಪಡಿ ಮಾಡ ಲಾಗಿದೆ ಎನ್ನಲಾದ ಒಎಂಆರ್ ಶೀಟ್‌ಗಳ ಪ್ರತಿ ಹಾಗೂ ಎಫ್‌ʼಎಸ್‌ಎಲ್ ವರದಿ ಲಭ್ಯವಾಗಿದೆ. ತನಿಖೆಯಲ್ಲಿ ಒಟ್ಟು 24 ಅಭ್ಯರ್ಥಿಗಳ ದಾಖಲೆ ಪರಿಶೀಲಿಸಲಾಗಿದ್ದು, ಈ ಪೈಕಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ ಎಂದು ಕೆಪಿಎಸ್‌ಸಿ ಉಪಸಮಿತಿ ವರದಿ ಮಾಡಿದೆ.

ಒಎಂಆರ್ ಶೀಟ್‌ಗಳಲ್ಲಿ ವ್ಯತ್ಯಾಸ: 2023ರಲ್ಲಿ ಎಇಇ ಹುದ್ದೆಗಳಿಗೆ ಕೆಪಿಎಸ್‌ಸಿ ಲಿಖಿತ ಪರೀಕ್ಷೆ ನಡೆಸಿತ್ತು. ಬಳಿಕ 24 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ ಓರ್ವ ಅಭ್ಯರ್ಥಿಯ ಒಎಂಆರ್ ಶೀಟ್‌ಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಆಗಿನ ಕೆಪಿಎಸ್‌ಸಿ ಕಾರ್ಯದರ್ಶಿ ಲತಾ ಕುಮಾರಿ ಈ ಕುರಿತು ಆಂತರಿಕ ತನಿಖೆ ನಡೆಸಿದ್ದರು.

ಇದನ್ನೂ ಓದಿ: KPSC ಹಗರಣ; ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡ್ರಾ IAS ಅಧಿಕಾರಿ ಜ್ಞಾನೇಂದ್ರ ಕುಮಾರ್?

ತನಿಖೆಯ ಸಂದರ್ಭದಲ್ಲಿ ಮೂವರು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗದಿರುವುದು ಕೂಡ ಗಮನಕ್ಕೆ ಬಂದಿತ್ತು. ಪ್ರಕರಣದ ಮುಂದಿನ ತನಿಖೆಗಾಗಿ ಕೆಪಿಎಸ್‌ಸಿ ಆಂತರಿಕ ಸಮಿತಿ ರಚಿಸಿತ್ತು. ಕೆಪಿಎಸ್‌ಸಿ ಸದಸ್ಯ ಶಾಂತ ಹೊಸಮನಿ ನೇತೃತ್ವದಲ್ಲಿ ಸಮಿತಿ ರಚನೆ ಯಾಗಿತ್ತು. ಬಳಿಕ ವಿಜಯ್‌ಕುಮಾರ್ ನೇತೃತ್ವದಲ್ಲಿ ಮತ್ತೊಂದು ಉಪಸಮಿತಿ ರಚಿಸಿ, 24 ಅಭ್ಯರ್ಥಿ ಗಳ ಒಎಂಆರ್ ಶೀಟ್‌ಗಳು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಯಿತು.

ಕಾರ್ಬನ್ ಕಾಪಿ ಮತ್ತು ಒಎಂಆರ್ ನಲ್ಲಿ ಭಿನ್ನ ಉತ್ತರ: ಈ ಪ್ರಕರಣದಲ್ಲಿ ಒಎಂಆರ್ ತಿದ್ದುಪಡಿಯ ಸ್ವರೂಪವೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಲ ಅಭ್ಯರ್ಥಿಗಳ ಕಾರ್ಬನ್ ಕಾಪಿಯಲ್ಲಿ 11 ಪ್ರಶ್ನೆಗ ಳಿಗೆ ಮಾತ್ರ ಉತ್ತರಗಳು ದಾಖಲಾಗಿದ್ದರೆ, ಸ್ಟ್ರಾಂಗ್ ರೂಮ್‌ನಲ್ಲಿ ಸಂರಕ್ಷಿಸ ಲಾಗಿದ್ದ ಅವರ ಒಎಂಆರ್ ಶೀಟ್‌ನಲ್ಲಿ 89 ಪ್ರಶ್ನೆಗಳಿಗೆ ಉತ್ತರ ಗಳನ್ನು ತಿದ್ದಿರುವುದು ಪತ್ತೆಯಾಗಿದೆ. ಇದಲ್ಲದೆ ಕೆಲ ಒಎಂಆರ್ ಶೀಟ್ ಗಳಲ್ಲಿ ಎರಡೆರೆಡು ಪೆನ್‌ಗಳನ್ನು ಬಳಸಿರುವುದೂ ಎಫ್ಎಸ್‌ಎಲ್ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ಸಿಕ್ಕಿ ಬಿದ್ದವರು ಎಸ್.ವಿಶ್ವಾಸ್, ಎಂ.ಎಸ್. ಸಿಂಚನಾ, ಜಿ.ಎಲ್. ಭುವನಾ, ನವೀನ್ ಗೋವಿಂದಪ್ಪ ಹುಚ್ಚರೆಡ್ಡಿ, ಬಿ.ವಿಶ್ವನಾಥ, ಶ್ರೀಧರ ಹೊಸಮನಿ, ಸಂಜೀವ್ ಕುಮಾರ್ ಬಿರಾದಾರ್. ಅಶೋಕ್ ಬಸಪ್ಪ ವಡ್ಡರ್, ಆನಂದಕುಮಾರ್, ಅಮರ ನಾಯಕ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ತನಿಖೆ ವೇಳೆ ತಾತ್ಕಾಲಿಕ ಪಟ್ಟಿಯಲ್ಲಿದ್ದ 24 ಜನರಿಗೆ ಕಾರ್ಬನ್ ಕಾಪಿ ಸಲ್ಲಿಕೆ ಮಾಡಿ ಎಂದಾಗ 20 ಮಂದಿ ಮಾತ್ರ ತಂದುಕೊಟ್ಟಿದ್ದರು.

ವಂಚನೆಯಲ್ಲಿ 10 ಅಭ್ಯರ್ಥಿಗಳ ಹೆಸರು

ಗ್ರಾಮೀಣ ಕುಡಿಯುವ ನೀರು ಇಲಾಖೆಯ 24 ಎಇಇ ಹುದ್ದೆಗಳಿಗೆ 2023ರ ಜುಲೈ 1 ಮತ್ತು 2 ರಂದು ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ ಅಭ್ಯರ್ಥಿ ಆನಂದ್ ಸಿದ್ದರೆಡ್ಡಿ ಅನುಮಾನ ವ್ಯಕ್ತಪಡಿಸಿ ದೂರು ಕೊಟ್ಟಿದ್ದರು. ಅದರ ತನಿಖೆಗೆ ಕೆಪಿಎಸ್‌ಸಿ ಅಧ್ಯಕ್ಷ ವಿಜಯಕುಮಾರ್ ಕುಚನೂರ ನೇತೃತ್ವದಲ್ಲಿ 5 ಜನರ ಉಪಸಮಿತಿ ರಚನೆಯಾಗಿತ್ತು.

ಪರಿಶೀಲನೆ ವೇಳೆ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳ ತಾಳೆಯಲ್ಲಿ ಹಲವು ವ್ಯತ್ಯಾಸಗಳು ಕಂಡು ಬಂದ ಹಿನ್ನಲೆಯಲ್ಲಿ ದಾಖಲೆಗಳನ್ನು ಎಫ್ಎಸ್‌ಎಲ್ ಪರಿಶೀಲನೆಗೆ ಕಳುಹಿಸಲಾಗಿತ್ತು. ಎಫ್ಎಸ್‌ಎಲ್ ಪರಿಶೀಲನಾ ವರದಿಯಲ್ಲಿ ಕೆಲವು ಒಎಂಆರ್ ಶೀಟ್‌ಗಳಲ್ಲಿ ತಿದ್ದುಪಡಿ ಮಾಡಿರುವ ಅಂಶಗಳು ಪತ್ತೆಯಾಗಿವೆ. ಇದರ ಆಧಾರದ ಮೇಲೆ ಈ 10 ಜನರ ಆಯ್ಕೆಯನ್ನು ತಕ್ಷಣ ರದ್ದು ಮಾಡಬೇಕು ಎಂದು ಕೆಪಿಎಸ್‌ಸಿ ಉಪಸಮಿತಿ ಸರಕಾರಕ್ಕೆ 500 ಪುಟಗಳ ವರದಿ ಕೊಟ್ಟಿದೆ.