ವಿಶ್ವವಾಣಿ ಪುಸ್ತಕ ಪ್ರಕಾಶನದಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಹಿರಿಯ ನಟ ಅನಂತನಾಗ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭಾಗಿ
ವಿಶ್ವವಾಣಿ ಪುಸ್ತಕ ಪ್ರಕಾಶನದ ವತಿಯಿಂದ ಭಾನುವಾರದಂದು ಒಂಬತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ವವಾಣಿ ಪುಸ್ತಕ, ವಾಗ್ದೇವಿ ವಿದ್ಯಾ ವರ್ಧಕ ಟ್ರಸ್ಟ್ ಹಾಗೂ ವಾಗ್ದೇವಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಒಂಬತ್ತು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಭಾನುವಾರ ಬೆಳಗ್ಗೆ 10.30ಕ್ಕೆ ಆಯೋಜಿ ಸಲಾಗಿದೆ.
ಕಾರ್ಯಕ್ರಮದಲ್ಲಿ ಪದ್ಮಭೂಷಣ, ಹಿರಿಯ ನಟ ಅನಂತನಾಗ್ ಅವರು ಮುಖ್ಯ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರವಾದಿ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿzರೆ. ವಿಶ್ವವಾಣಿ ಮತ್ತು ಪ್ರವಾಸಿ ಪ್ರಪಂಚ ಪತ್ರಿಕೆ ಪ್ರಧಾನ ಸಂಪಾದಕ ರಾದ ವಿಶ್ವೇಶ್ವರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಖ್ಯಾತ ವಿದ್ವಾಂಸ ಹಾಗೂ ವಿಮರ್ಶಕ ಗ.ನಾ.ಭಟ್ಟ ಅವರು ಕೃತಿಗಳ ಪರಿಚಯ ಮಾಡಿಕೊಡಲಿದ್ದಾ ರೆ. ಸಮಾರಂಭದಲ್ಲಿ ಅಂಕಣಕಾರರಾದ ಕಿರಣ್ ಉಪಾಧ್ಯಾಯ, ರಾಜು ಅಡಕಳ್ಳಿ, ರೂಪಾ ಗುರುರಾಜ, ಮೋಹನ್ ವಿಶ್ವ ಹಾಗೂ ಶಿಶಿರ ಹೆಗಡೆ ಉಪಸ್ಥಿತರಿರಲಿದ್ದಾರೆ ಎಂದು ವಿಶ್ವವಾಣಿ ಸಮೂಹ ಸಂಸ್ಥೆಯ ಸಿಇಒ ಚಿದಾನಂದ ಕಡಲಾಸ್ಕರ ಹಾಗೂ ವಿಶ್ವವಾಣಿ ಪುಸ್ತಕ ಸಂಸ್ಥೆಯ ಮುಖ್ಯಸ್ಥರಾದ ಸುಷ್ಮಾ ಭಟ್ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಿತಾರ್ ತಬಲಾ ಜುಗಲ್‌ಬಂದಿ
ಇನ್ನು ಸಾಹಿತ್ಯ ಸಮಾರಂಭದೊಂದಿಗೆ ಸಂಗೀತ ಸೌರಭ ಕಾರ್ಯಕ್ರಮವನ್ನೂ ಏರ್ಪಡಿಸಿರುವುದು ಈ ಬಾರಿಯ ವಿಶೇಷ ಆಕರ್ಷಣೆ. ಪುಸ್ತಕ ಬಿಡುಗಡೆ ಸಮಾರಂಭಕ್ಕಿಂತ ಒಂದು ಗಂಟೆ ಮೊದಲು ಸಿತಾರ್ ಮತ್ತು ತಬಲಾ ವಾದನದ ಜುಗಲ್‌ಬಂಧಿ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ.
ಹಿರಿಯ ಸಿತಾರ್ ಕಲಾವಿದೆ ಚಂದ್ರಕಲಾ ಹೆಗಡೆ ಮತ್ತು ಹಿರಿಯ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ, ಕಲಭಾಗ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಚಂದ್ರಕಲಾ ಹೆಗಡೆ ಯವರು ಕಳೆದ ಮೂರು ದಶಕಗಳಿಂದ ಸಿತಾರ್ ಸಾಧನೆಯಲ್ಲಿ ತೊಡಗಿ, ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಸಂಗೀತ ಕಛೇರಿ ನೀಡಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಗೋಪಾಲಕೃಷ್ಣ ಹೆಗಡೆಯವರು ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲೂ ಕೂಡ ತಮ್ಮ ತಬಲಾ ವಾದನದಿಂದ ಅಪಾರ ಮೆಚ್ಚುಗೆ ಗಳಿಸಿzರೆ. ವಿವಿಧ ವಾದ್ಯ ಪರಿಕರಗಳ ಸಮ್ಮಿಶ್ರಣದ ನಾದ ಮಾಧುರ್ಯ ಎಂಬ ವಿನೂತನ ಕಾರ್ಯಕ್ರಮ ನಿರ್ದೇಶಿಸಿದ ಪ್ರಯೋಗಶೀಲರಾಗಿದ್ದಾರೆ
ಸ್ಥಳ: ಎಫ್ʼಕೆಸಿಸಿಐ ಸಭಾಂಗಣ ಬೆಂಗಳೂರು
ಸಮಯ: ಭಾನುವಾರ ಬೆಳಗ್ಗೆ 10.30ಕ್ಕೆ
ಯಾವೆಲ್ಲ ಪುಸ್ತಕ ಬಿಡುಗಡೆ? ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ, ಅಂತರಂಗದ ಬ್ಲೂಟಿಕ್, ಸಂಪಾದಕರ ಸದ್ಯಶೋಧನೆ ಭಾಗ 8, 9, ಆಸ್ಕ್ ದಿ ಎಡಿಟರ್ 4, ಅಂಕಣಕಾರ ಕಿರಣ್ ಉಪಾಧ್ಯಾಯ ಅವರ ಬಹುದೇಶವಾಸಿ, ರೂಪ ಗುರುರಾಜ್ ಅವರ ಒಂದೊಳ್ಳೆ ಮಾತು ಭಾಗ 5, ರಾಜು ಅಡಕಳ್ಳಿ ಅವರ ಸಕ್ಸಸ್ ಸೂತ್ರಧಾರರು, ಶಿಶಿರ ಹೆಗಡೆ ಅವರ ಹ್ಯಾಷ್ಟ್ಯಾಗ್ ಶಿಶಿರ ಕಾಲ ಹಾಗೂ ಮೋಹನ್ ವಿಶ್ವ ಅವರ ಕಾಲದ ಕನ್ನಡಿ ಪುಸ್ತಕ ಬಿಡುಗಡೆಯಾಗಲಿದೆ.