#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Lawyer Jagadish: ದರ್ಶನ್ ಫ್ಯಾನ್ಸ್ ಗಲೀಜು, ಗನ್ ಲೈಸೆನ್ಸ್ ಇದ್ದಿದ್ರೆ ಗುಂಡ್ ಹಾರಿಸ್ತಿದ್ದೆ ಎಂದ ವಕೀಲ್ ಸಾಬ್!

Lawyer Jagadish: ಹಲ್ಲೆ ಬಗ್ಗೆ ಆಕ್ರೋಶ ಹೊರಹಾಕಿರುವ ಲಾಯರ್‌ ಜಗದೀಶ್‌ ಅವರು, ದರ್ಶನ್ ಹೆಸರು ಬಳಸಿ ನನ್ನ ಮೇಲೆ ಅಟ್ಯಾಕ್ ಮಾಡಿರುವವರು ಗಲೀಜು ಫ್ಯಾನ್ಸ್. ನನ್ನ ಮೈ ಮುಟ್ಟುವ ಮೊದಲು ಇನ್ಶೂರೆನ್ಸ್ ಮಾಡಿಸಿಕೊಳ್ರೋ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ದರ್ಶನ್ ಫ್ಯಾನ್ಸ್ ಗಲೀಜು, ಗನ್ ಲೈಸೆನ್ಸ್ ಇದ್ದಿದ್ರೆ ಗುಂಡ್ ಹಾರಿಸ್ತಿದ್ದೆ ಎಂದ ವಕೀಲ್ ಸಾಬ್!

Profile Prabhakara R Jan 24, 2025 3:24 PM

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ (Lawyer Jagadish) ಅವರ ಮೇಲೆ ನಗರದ ಕೊಡಿಗೇಹಳ್ಳಿಯಲ್ಲಿ ಗುರುವಾರ ಹಲ್ಲೆ ನಡೆದಿತ್ತು. ನಟ ದರ್ಶನ್‌ ವಿರುದ್ಧ ಮಾತನಾಡಿದ್ದಕ್ಕೆ ಅಭಿಮಾನಿಗಳೇ ಅವರ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಹಲ್ಲೆ ಬಗ್ಗೆ ಆಕ್ರೋಶ ಹೊರಹಾಕಿರುವ ಲಾಯರ್‌ ಜಗದೀಶ್‌ ಅವರು, ದರ್ಶನ್ ಫ್ಯಾನ್ಸ್ ಗಲೀಜು. ದರ್ಶನ್ ಹೆಸರು ಬಳಸಿ ನನ್ನ ಮೇಲೆ ಅಟ್ಯಾಕ್ ಮಾಡಿರುವವರು ಗಲೀಜು ಫ್ಯಾನ್ಸ್ ಎಂದು ಕಿಡಿಕಾರಿದ್ದಾರೆ.

ಘಟನೆ ಬಗ್ಗೆ ಮತ್ತೆ ವಿಡಿಯೊ ಮಾಡಿರುವ ಲಾಯರ್‌ ಜಗದೀಶ್, ಒಬ್ಬನ ಮೇಲೆ 40 ಜನರ ಕಳಿಸಿದ್ದೀಯಂತಲ್ಲೋ ದರ್ಶನ. ನಿನ್ನ ಗಲೀಜ್ ಫ್ಯಾನ್ಸ್ ಹಾಗೆ ಹೇಳುತ್ತಿದ್ದಾರೆ. ಅದಕ್ಕೆ ಕೇಳುತ್ತಿದ್ದೇನೆ. ಗನ್ ಮ್ಯಾನ್ ಇರಲಿಲ್ಲ. ಇದ್ದಿದ್ರೆ ಗುಂಡಿನ ಸದ್ದು ಕೇಳುತ್ತಿತ್ತು. ನಮ್ಮ ಪ್ರಾಣ, ಆಸ್ತಿಗೆ ಕುತ್ತು ಬಂದರೆ ಗುಂಡು ಹಾರಿಸಲೇಬೇಕು. ನನಗೂ ಗನ್ ಲೈಸೆನ್ಸ್ ಬರುತ್ತದೆ. ಪ್ರಾಣಕ್ಕೆ ತೊಂದರೆ ಕೊಡೋಕೆ ಬಂದರೆ ಸುಮ್ಮನೆ ಇರಲ್ಲ’ ಎಂದು ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

‘ದರ್ಶನ್​ನ ಕೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಿ. ಈಗಲೇ ಫೀಲಿಂಗ್‌ನಲ್ಲಿದ್ದಾನೆ. 40 ಜನರಲ್ಲಿ ಯಾರು ನಿಮ್ಮ ಹುಡುಗರು ಅಂತ ಹೇಳಿ. ಸ್ವಲ್ಪ ಎಚ್ಚರವಾಗಿರಿ. ನಿನ್ನೆ ಗುಂಡಿನ ಶಬ್ದ ಕೇಳಬೇಕಿತ್ತು. ಹೇಗೋ ಬಚಾವ್ ಆದರು. ನೀವು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡರೂ ತೊಂದರೆ ಇಲ್ಲ. ಹಾಗೆಲ್ಲ ಮಾಡಬೇಡಿ ಫ್ಯಾನ್ಸ್. ದರ್ಶನ್​ನ ಸಿಕ್ಕಾಕಿಸಬೇಡಿ. ಹೊಡೆದವರ ಹೆಸರು ಹೇಳೋಕೆ ಹೇಳು. ಮತ್ತೆ ಜೈಲಿಗೆ ಹೋಗೊಕೆ ದರ್ಶನ್​ಗೆ ಇಷ್ಟ ಇಲ್ಲ. ಟ್ರೋಲ್ ಮಾಡೋಕೆ ನನಗೂ ಬರುತ್ತದೆ ಎಂದು ಹೇಳಿದ್ದಾರೆ.



‘ದರ್ಶನ್ ಹುಡುಗರು ಗಲೀಜ್ ಹುಡುಗರು. ದರ್ಶನ್ ಫ್ಯಾನ್ಸ್ ಎಂದುಕೊಂಡು ಅವನಿಗೇ ಗುನ್ನ ಇಡ್ತೀರಲ್ಲೋ. ನನ್ನ ಮೈ ಮುಟ್ಟುವ ಮೊದಲು ಇನ್ಶೂರೆನ್ಸ್ ಮಾಡಿಸಿಕೊಳ್ರೋ... ಎಂದು ಜಗದೀಶ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ | Massage Parlor Attack: ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ದಾಳಿ, 9 ಮಂದಿ ಕಾರ್ಯಕರ್ತರ ಬಂಧನ

ಏನಿದು ಘಟನೆ?

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಲಾಯರ್‌ ಜಗದೀಶ್‌ ಮೇಲೆ ಹಲ್ಲೆ ನಡೆದಿತ್ತು. ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇರುವ ದಾರಿಯಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಲು ಪೆಂಡಾಲ್ ಹಾಕಲಾಗಿತ್ತು. ಇದಕ್ಕೆ ಜಗದೀಶ್ ಅವರು ಆಕ್ಷೇಪ ತೆಗೆದಿದ್ದರು. ಪೆಂಡಾಲ್ ತೆಗೆಯಲು ಸ್ಥಳೀಯರು ಒಪ್ಪಿಲ್ಲ. ಈ ವಿಚಾರವಾಗಿ ಜಗದೀಶ್ ಹಾಗೂ ಒಂದು ಗುಂಪಿನ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಲಾಯರ್‌ ಮೇಲೆ ಕೆಲವರು ಹಲ್ಲೆ ನಡೆಸಿದ್ದರು. ದರ್ಶನ್‌ ವಿರುದ್ಧ ಮಾತನಾಡಿದ್ದಕ್ಕೆ ಅಭಿಮಾನಿಗಳೇ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನ ಕೋಡಿಗೆಹಳ್ಳಿಯ ವಿರೂಪಾಕ್ಷ ನಗರದಲ್ಲಿ ವಕೀಲ ಜಗದೀಶ್ ಮೇಲೆ ಹಲ್ಲೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋಡಿಗೆಹಳ್ಳಿ ಠಾಣೆಗೆ ಲಾಯರ್‌ ಜಗದೀಶ್‌ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಲಾಯರ್‌ ಜಗದೀಶ್‌, ನಮ್ಮ ಕಾಂಪ್ಲೆಕ್ಸ್‌ ಮುಂದೆ ರಸ್ತೆ ಬ್ಲಾಕ್‌ ಮಾಡಿಕೊಂಡು ಅನ್ನಮ್ಮ ದೇವಿ ಕೂರಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ 40 ಜನ ದಾಂಡಿಗರು ಅಟ್ಯಾಕ್ ಮಾಡಿದ್ದಾರೆ. ನನ್ನ ಗನ್‌ ಮ್ಯಾನ್‌ ಮನೆಯಲ್ಲಿದ್ದರು. ನಾನು ವಾಕಿಂಗ್‌ಗೆ ಬಂದಿದ್ದೆ. ರಸ್ತೆ ಬ್ಲಾಕ್‌ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಕ್ಕೆ ಇಷ್ಟೆಲ್ಲಾ ಆಗಿದೆ ಎಂದು ಹೇಳಿದ್ದರು.