ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸರ್ಕಾರದ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ಪ್ರಸ್ತಾಪ; ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಕಾಂಗ್ರೆಸ್‌ನಲ್ಲಿ ಕೆಲಸ ಮಾಡಲು ಯಾರನ್ನಾದರೂ ನೇಮಿಸಬಹುದು. ಆದರೆ, ಸಂಘಟನೆಗಳಲ್ಲಿ ಕೆಲಸ ಮಾಡಬಾರದೆಂಬ ಯಾವ ನೀತಿ ಇದು ಎಂದು ಟೀಕಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಆಗುವ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ಪ್ರಸ್ತಾಪ

-

Profile Siddalinga Swamy Oct 18, 2025 7:37 PM

ಬೆಂಗಳೂರು: ಚಿತ್ತಾಪುರದಲ್ಲಿ ಆರೆಸ್ಸೆಸ್ (RSS) ಪಥ ಸಂಚಲನಕ್ಕೆ ಬಂಟಿಂಗ್, ಬ್ಯಾನರ್ ಹಾಕಲು ಹಾಗೂ ಅನುಮತಿಗೆ ಸಂಬಂಧಿಸಿ ಸುಮಾರು 6 ಸಾವಿರ ಹಣ ಕಟ್ಟಿಸಿಕೊಂಡ ಬಳಿಕ ಅನುಮತಿ ನಿರಾಕರಿಸಿದ್ದು ಹಾಗೂ ಬ್ಯಾನರ್, ಬಂಟಿಂಗ್ ತೆರವು ಮಾಡಿದ್ದು ಸರಿಯಲ್ಲ. ಇದು ಸ್ಥಳೀಯ ಆಡಳಿತದ ದುಂಡಾವರ್ತಿ ಕ್ರಮ, ಪ್ರಿಯಾಂಕ್ ಖರ್ಗೆಯವರ (Priyank Kharge) ದುರ್ನಡತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದೇ ವೇಳೆ ಆರೆಸ್ಸೆಸ್ ಪಥ ಸಂಚಲನಕ್ಕೆ ಸಂಬಂಧಿಸಿ ಪಿಡಿಒ ಒಬ್ಬರ ಅಮಾನತಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆರೆಸ್ಸೆಸ್ ಎಂಬುದು ಒಂದು ರಾಜಕೀಯ ಪಕ್ಷವಲ್ಲ. ಎಲ್ಲ ಸಾರ್ವಜನಿಕ ಸಂಘಟನೆಯಂತೆ ಆರೆಸ್ಸೆಸ್ ಒಂದು ಸಂಘಟನೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕೇಂದ್ರ ಸರ್ಕಾರದ ಆದೇಶವೂ ಇದೆ ಎಂದು ಹೇಳಿದರು.

ಇಷ್ಟೆಲ್ಲ ಮಾತನಾಡುವ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಅವರೇ, ಎಐಸಿಸಿಯಲ್ಲಿ ಅಲೆಮಾರಿ ಸಮುದಾಯಗಳ ಒಂದು ಘಟಕ ಇದೆ. ಈ ಘಟಕಕ್ಕೆ ಕರ್ನಾಟಕದಿಂದ ಡಾ.ಎ.ಎಸ್. ಪ್ರಭಾಕರ್ ಅವರನ್ನು ರಾಷ್ಟ್ರೀಯ ಸಂಚಾಲಕ ಎಂದು ನೇಮಿಸಿದ್ದಾರೆ. ಇವರು ಹಂಪಿ ವಿವಿಯ ಪ್ರೊಫೆಸರ್. ನೀವು ಎಐಸಿಸಿ ಪದಾಧಿಕಾರಿಯನ್ನಾಗಿ ಅವರನ್ನು ನೇಮಿಸಿದ್ದೀರಿ. ಇದು ಕಾನೂನುಬಾಹಿರವೇ? ಅಥವಾ ಸಾಮಾಜಿಕ ಸಂಘಟನೆಯಲ್ಲಿ ಭಾಗಿ ಆಗುವುದು ತಪ್ಪೇ ಎಂದು ಕೇಳಿದರು. ಎಐಸಿಸಿ ಅಧ್ಯಕ್ಷರು ಇದಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನಲ್ಲಿ ಕೆಲಸ ಮಾಡಲು ಯಾರನ್ನಾದರೂ ನೇಮಿಸಬಹುದು. ಆದರೆ, ಸಂಘಟನೆಗಳಲ್ಲಿ ಕೆಲಸ ಮಾಡಬಾರದೆಂಬ ಯಾವ ನೀತಿ ಇದು ಎಂದು ಟೀಕಿಸಿದರು. ರಾಜ್ಯದಲ್ಲಿ ಆಗುವ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ತರುತ್ತಿದ್ದಾರೆ ಎಂದು ದೂರಿದರು. ಆರೆಸ್ಸೆಸ್ ದೇಶದ ಪರವಾಗಿ ಕೆಲಸ ಮಾಡುವ ಸಂಘಟನೆ. ದೇಶಭಕ್ತರ ಕೂಟ ಎಂದರು.

ಈ ಸುದ್ದಿಯನ್ನೂ ಓದಿ | Google AI Hub: ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ಗೂಗಲ್ ಹೂಡಿಕೆ ಕೈತಪ್ಪಿದೆ: ಬೊಮ್ಮಾಯಿ

ನೀವು ಅಧಿಕಾರ ನಡೆಸಲು ಯೋಗ್ಯರಲ್ಲ

ನಿಮಗ್ಯಾಕೆ ಸಚಿವ ಸ್ಥಾನ ಎಂದು ಕೇಳಿದ ಅವರು, ನೀವು ಸಚಿವ ಸ್ಥಾನ ನಿಭಾಯಿಸುವಲ್ಲಿ ವಿಫಲವಾಗಿದ್ದೀರಿ. ಜನರನ್ನು ದಾರಿ ತಪ್ಪಿಸಿ ಅವರ ಜೀವನದಲ್ಲಿ ಆಟ ಆಡುವ ಕೆಲಸ ಮಾಡುತ್ತಿದ್ದೀರಿ ಎಂದು ದೂರಿದರು. ಅತಿವೃಷ್ಟಿ, ಅನಾವೃಷ್ಟಿಗೆ ಹಣ ಕೊಟ್ಟಿಲ್ಲ, ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ; ಶೇ. 80 ಕಮಿಷನ್ ಎಂದು ಅವರು ಹೇಳುತ್ತಿದ್ದಾರೆ. ಇವುಗಳನ್ನು ಪರಿಹರಿಸದೇ ನೀವು ಕ್ಷುಲ್ಲಕ ಕಾರಣ ಇಟ್ಟುಕೊಂಡು ಇದನ್ನೆಲ್ಲ ಮಾಡುತ್ತ ಇದ್ದೀರಲ್ಲವೇ? ನೀವು ಅಧಿಕಾರ ನಡೆಸಲು ಯೋಗ್ಯರಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.