ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

16 ಔಷಧ ಅಂಗಡಿಗಳ ಪರವಾನಗಿ ರದ್ದು

ನಕಲಿ ಔಷಧಗಳು ಯಾವ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಗೆ ಪೂರೈಕೆಯಾಗಿದ್ದವು ಎಂಬ ಕುರಿತು ತನಿಖೆ ಮುಂದುವರಿದಿರುವ ಬೆನ್ನ, ಇಲಾಖೆಯು ಹಲವು ಸಗಟು ಮತ್ತು ಚಿಲ್ಲರೆ ಔಷಧ ಮಾರಾಟ ಮಳಿಗೆಗಳ ಪರವಾನಗಿಯನ್ನು ರದ್ದುಪಡಿಸಿದ್ದು, ಇನ್ನೂ ಕೆಲವು ಸಂಸ್ಥೆಗಳ ಲೈಸೆನ್ಸ್‌ಗಳನ್ನು ಅಮಾನತು ಗೊಳಿಸಿದೆ.

ಬೆಂಗಳೂರು: ವಿವಿಧೆಡೆ ನಕಲಿ ಔಷಧಗಳ ಜಾಲ ಪತ್ತೆ ಯಾದ ಬೆನ್ನ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದು, ಶಂಕಿತ ಔಷಧ ಪೂರೈಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ಹಲವು ಫಾರ್ಮಸಿಗಳ ವಿರುದ್ಧ ಕ್ರಮ ಕೈಗೊಂಡಿದೆ. ನಕಲಿ ಔಷಧಗಳು ಯಾವ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಗೆ ಪೂರೈಕೆಯಾಗಿದ್ದವು ಎಂಬ ಕುರಿತು ತನಿಖೆ ಮುಂದುವರಿದಿರುವ ಬೆನ್ನ, ಇಲಾಖೆಯು ಹಲವು ಸಗಟು ಮತ್ತು ಚಿಲ್ಲರೆ ಔಷಧ ಮಾರಾಟ ಮಳಿಗೆಗಳ ಪರವಾನಗಿಯನ್ನು ರದ್ದುಪಡಿಸಿದ್ದು, ಇನ್ನೂ ಕೆಲವು ಸಂಸ್ಥೆಗಳ ಲೈಸೆನ್ಸ್‌ಗಳನ್ನು ಅಮಾನತುಗೊಳಿಸಿದೆ.

ಔಷಧ ಪೂರೈಕೆ ಮಾಡುತ್ತಿದ್ದವರ ಮೇಲೂ ನಿಗಾ: ಕ್ಯಾನ್ಸರ್ ಔಷಧಗಳು, ಜೀವ ರಕ್ಷಕ ಔಷಧ ಗಳು ಹಾಗೂ ಐಸಿಯುಗಳಲ್ಲಿ ಬಳಸುವ ಇಂಜೆಕ್ಷನ್‌ಗಳನ್ನು ಪೂರೈಸುತ್ತಿದ್ದ ಡಿಸ್ಟ್ರಿಬ್ಯೂಟರ್‌ ಗಳು ಮತ್ತು ಮೆಡಿಕಲ್ ರೆಪ್ರೆಸೆಂಟೇ ಟಿವ್‌ಗಳನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಔಷಧ ಸಂಗ್ರಹ, ಮಾರಾಟ ಮತ್ತು ಪೂರೈಕೆಯಲ್ಲಿ ನಿಗದಿತ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆನ್ ಲೈನ್ ಮೂಲಕ ಔಷಧ ಮಾರಾಟ ಮಾಡುತ್ತಿರುವ ಸಂಸ್ಥೆ ಗಳ ಮೇಲೂ ಎಫ್ಡಿಎ ನಿಗಾ ಇರಿಸಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: 8 Courses cancelled: ಜಾನಪದ ವಿವಿಯ 8 ಕೋರ್ಸ್‌ಗಳು ರದ್ದು: ಉನ್ನತ ಶಿಕ್ಷಣ ಇಲಾಖೆ ಆದೇಶ; 25ಕ್ಕೂ ಹೆಚ್ಚು ಬೋಧಕರ ಸೇವೆ ಸ್ಥಗಿತ

ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಔಷಧಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವಾಗ ಪ್ರಿಸ್ಕ್ರಿಪ್ಷನ್ ಪರಿಶೀಲನೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವೈದ್ಯರು ಸೂಚಿಸಿರುವ ಔಷಧದ ಬದಲಿಗೆ ಬೇರೆ ಬ್ರ್ಯಾಂಡ್ ಅಥವಾ ಪರ್ಯಾಯ ಔಷಧವನ್ನು ಗ್ರಾಹಕರಿಗೆ ಶಿಫಾರಸು ಮಾಡುತ್ತಿರುವ ಕುರಿತು ದೂರುಗಳಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ಆನ್‌ಲೈನ್ ಹಾಗೂ ಇತರೆ ಮಾರಾಟ ವೇದಿಕೆಗಳಲ್ಲಿ ಭಾರಿ ರಿಯಾಯಿತಿ ನೀಡಿ ಔಷಧ ಮಾರಾಟ ಮಾಡುತ್ತಿರುವ ಸಂಸ್ಥೆಗಳ ಮೇಲೂ ಇಲಾಖೆ ಕಣ್ಣಿಟ್ಟಿದೆ. ಇಂತಹ ಔಷಧಗಳ ಗುಣಮಟ್ಟವನ್ನು ರ್ಯಾಂಡಮ್ ಸ್ಯಾಂಪ್ಲಿಂಗ್ ಮೂಲಕ ಪರೀಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಕಲಿ ಅಥವಾ ಕಳಪೆ ಗುಣಮಟ್ಟದ ಔಷಧಗಳ ಮಾರಾಟ ಮತ್ತು ಪೂರೈಕೆಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

16 ಫಾರ್ಮಸಿಗಳ ಲೈಸೆನ್ಸ್ ರದ್ದು ‌

ಅವೆಸ್ಕೊ ಹೆಲ್ತ್‌ಕೇರ್

  1. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ
  2. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ
  3. ಪಟೇಲ್ ಮೆಡಿ ಟ್ರೇಡ್
  4. ರಾಜರಾಜೇಶ್ವರಿ ಫಾರ್ಮಾ

೬. ಸೂರ್ಯ ಸ್ಪೆಷಾಲಿಟಿ ಫಾರ್ಮಾ

೭. ಎಸ್‌ಡಬ್ಲ್ಯೂಎಸ್ ಫಾರ್ಮಾ

೮. ಕೃಪಾ ಹೆಲ್ತ್‌ಕೇರ್

೯. ಸೇಂಟ್ ಫಿಲೋಮಿನಾ ಹಾಸ್ಪಿಟಲ್ ಡ್ರಗ್ ಸೆಂಟರ್

೧೦. ಸಾಗರ್ ಫಾರ್ಮಾ

೧೧. ಝೈಮಸ್ ಫಾರ್ಮಾ

೧೨. ಫಾರ್ಚೂನ್ ಮೆಡಿಕಲ್ ಸೊಲ್ಯೂಷನ್ಸ್ ‌

೧೩. ಎಕ್ಸೆಲ್ಕೇರ್ ಫಾರ್ಮಾ

೧೪. ಪಟೇಲ್ ಮೆಡಿಕಲ್ಸ್ ‌

೧೫. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ ೧೬. ಎನ್.ಎಸ್. ಫಾರ್ಮಾ - ಹುಬ್ಬಳ್ಳಿ

ಲೈಸೆನ್ಸ್ ಅಮಾನತುಗೊಂಡಿರುವ ಫಾರ್ಮಸಿಗಳು ‌

೧. ಮೆಡ್ ಫಾರ್ಮಾ

೨. ಸೂರ್ಯ ಸ್ಪೆಷಾಲಿಟಿ ಹಾಸ್ಪಿಟಲ್

೩. ಸಾಗರ್ ಫಾರ್ಮಾ

೪. ವಿವಾಂತ ಫಾರ್ಮಾಸ್ಯುಟಿಕಲ್ಸ್

೫. ಮಾರುತಿ ಮೆಡಿಕಲ್ಸ್

೬. ಹೈ-5 ಫಾರ್ಮಾ

೭. ಫೈಜರ್ ಲಿಮಿಟೆಡ್

೮. ವಿವಾ ಫಾರ್ಮಾ- ಬೆಳಗಾವಿ