ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸಚಿವರ (Cabinet Minister) ಪಟ್ಟಿ ಇದೀಗ ಹೊರ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಇಂದು (ಆ.3-ಸೋಮವಾರ) ಸಂಜೆಯೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವೂ ನಡೆಯಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಈಗಾಗಲೇ ಖುದ್ದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (CM DK Shivakumar) ಅವರು ಸಚಿವರಾಗಿ ಆಯ್ಕೆಗೊಂಡ ಶಾಸಕರಿಗೆ ಕರೆ ಮಾಡಿ ಅಭಿನಂದನೆಯನ್ನು ತಿಳಿಸಿದ್ದಾರೆ ಎನ್ನಲಾಗಿದೆ.
ಯಾರಿಗೆ ಮಂತ್ರಿ ಸ್ಥಾನ?
- ಪಿ.ಎಂ ನರೇಂದ್ರಸ್ವಾಮಿ ಮಳವಳ್ಳಿ (2ನೇ ಬಾರಿ ಸಚಿವ ಸ್ಥಾನ )
- ಶಿವರಾಜ ತಂಗಡಗಿ ಕನಕಗಿರಿ (4ನೇ ಬಾರಿ ಸಚಿವ ಸ್ಥಾನ
- ರುದ್ರಪ್ಪ ಲಮಾಣಿ ಹಾವೇರಿ (ಮೊದಲ ಬಾರಿ ಸಚಿವ ಸ್ಥಾನ)
- ಕೆ.ಎಸ್ ಬಸವಂತಪ್ಪ ಮಾಯಕೊಂಡ (ಮೊದಲ ಬಾರಿ ಸಚಿವ ಸ್ಥಾನ
- ಬಿ.ನಾಗೇಂದ್ರ ಬಳ್ಳಾರಿ (2ನೇ ಬಾರಿ ಸಚಿವ ಸ್ಥಾನ)
- ಟಿ ರಘುಮೂರ್ತಿ ಚಳ್ಳಕೆರೆ (ಮೊದಲ ಬಾರಿ ಸಚಿವ ಸ್ಥಾನ)
- ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ (4 ಬಾರಿ ಸಚಿವ ಸ್ಥಾನ)
- ರಿಜ್ವಾನ್ ಅರ್ಷದ್ ಶಿವಾಜಿನಗರ (ಮೊದಲ ಬಾರಿ ಸಚಿವ ಸ್ಥಾನ)
- ಸಂತೋಷ್ ಲಾಡ್ ಕಲಘಟಗಿ (3ನೇ ಬಾರಿ ಸಚಿವ ಸ್ಥಾನ)
- ಮಧು ಬಂಗಾರಪ್ಪ ಸೊರಬ (2ನೇ ಬಾರಿ ಸಚಿವ ಸ್ಥಾನ)
- ಸಿ ಪುಟ್ಟರಂಗಶೆಟ್ಟಿ ಚಾಮರಾಜನಗರ (2ನೇ ಬಾರಿ ಸಚಿವ ಸ್ಥಾನ)
- ಮಂಕಾಳ ವೈದ್ಯ ಭಟ್ಕಳ (2ನೇ ಬಾರಿ ಸಚಿವ ಸ್ಥಾನ)
- ಅಜಯ್ ಸಿಂಗ್ ಜೇವರ್ಗಿ (ಮೊದಲ ಬಾರಿ ಸಚಿವ ಸ್ಥಾನ
- ಎನ್.ಚಲುವರಾಯಸ್ವಾಮಿ ನಾಗಮಂಗಲ (3ನೇ ಬಾರಿ ಸಚಿವ ಸ್ಥಾನ)
- ಕೆ.ಎಂ ಶಿವಲಿಂಗೇಗೌಡ ಅರಸೀಕೆರೆ ( ಮೊದಲ ಬಾರಿ ಸಚಿವ ಸ್ಥಾನ)
- ಎಚ್.ಸಿ ಬಾಲಕೃಷ್ಣ ಮಾಗಡಿ (ಮೊದಲ ಬಾರಿ ಸಚಿವ ಸ್ಥಾನ)
- ಗಾಯತ್ರಿ ಶಾಂತೇಗೌಡ ಪರಿಷತ್ ಸದಸ್ಯೆ (ಮೊದಲ ಬಾರಿ ಶಾಸಕಿ, ಮೊದಲ ಬಾರಿ ಸಚಿವ ಸ್ಥಾನ)
- ಬಸವರಾಜ್ ರಾಯರೆಡ್ಡಿ ಯಲಬುರ್ಗಾ (4ನೇ ಬಾರಿ ಸಚಿವ ಸ್ಥಾನ)
- ವಿಜಯಾನಂದ ಕಾಶಪ್ಪನವರ್ ಹುನಗುಂದ (ಮೊದಲ ಬಾರಿ ಸಚಿವ ಸ್ಥಾನ)
- ಲಕ್ಷ್ಮಣ ಸವದಿ ಅಥಣಿ (3ನೇ ಬಾರಿ ಸಚಿವ ಸ್ಥಾನ)
- ಇನ್ನು ಸ್ಪೀಕರ್ ಆಗಿ ಜಿಎಸ್ ಪಾಟೀಲ್ ಹಾಗೂ ಡೆಪ್ಯುಟಿ ಸ್ಪೀಕರ್ ಆಗಿ ಎ. ಎಸ್ ಪೊನ್ನಣ್ಣ ಆಯ್ಕೆಯಾಗಿದ್ದಾರೆ.
ಈ ಶಾಸಕರು ಹೆಸರು ಫೈನಲ್ ಲಿಸ್ಟ್‌ನಲ್ಲಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಹೈವೋಲ್ಟೇಜ್ ಸಭೆಯಲ್ಲಿ, ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಕುರಿತು ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಲಾಯಿತು. ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಡಿಕೆ ಶಿವಕುಮಾರ್ ಸಂಪುಟ ಸೇರಲಿರುವ ಹೊಸ ಸಚಿವರ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ.