ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಲಿವ್-ಲವ್‌-ಲಫ್ ಫೌಂಡೇಶನ್ನಿಂದ ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಜಾರಿ

ಮೆಕಿನ್ಸೆ ಹೆಲ್ತ್ ಇನ್‌ಸ್ಟಿಟ್ಯೂಟ್ ನಡೆಸಿದ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಭಾರತೀಯ ಉದ್ಯೋಗಿಗಳು ಕೆಲಸದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೇ. 51ರಷ್ಟು ಜನರು ಈ ಒತ್ತಡದಿಂದ ತಮ್ಮಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವೃತ್ತಿಪರರ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ

ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಜಾರಿ

Profile Ashok Nayak Jun 4, 2025 10:25 PM

ಬೆಂಗಳೂರು: ವೃತ್ತಿಪರರದ ಮಾನಸಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಲಿವ್-ಲವ್‌-ಲಫ್ ಫೌಂಡೇಶನ್ (ಎಲ್ಎಲ್ಎಲ್) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಎಂಬ ಕಾರ್ಯಕ್ರಮ ಪ್ರಾರಂಭಿಸುತ್ತಿದೆ. ಇದೊಂದು ಸಮಗ್ರ ಹಾಗೂ ಸಂಶೋಧನಾಧಾರಿತ ಉಪಕ್ರಮ ವಾಗಿದ್ದು, ದೇಶಾದ್ಯಂತ ಮಾನಸಿಕ ಆರೋಗ್ಯ ಕಾಪಾಡುವಂತಹ ವಾತಾವರಣ ನಿರ್ಮಿಸುವ ಗುರಿ ಹೊಂದಿದೆ.

ಈ ಕುರಿತು ಮಾತನಾಡಿದ ಲಿವ್‌-ಲವ್‌-ಲಾಫ್ ಫೌಂಡೇಶನ್‌ನ ಸಿಇಒ ಅನಿಶಾ ಪಡುಕೋಣೆ, ಮೆಕಿನ್ಸೆ ಹೆಲ್ತ್ ಇನ್‌ಸ್ಟಿಟ್ಯೂಟ್ ನಡೆಸಿದ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಭಾರತೀಯ ಉದ್ಯೋಗಿಗಳು ಕೆಲಸದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೇ. 51ರಷ್ಟು ಜನರು ಈ ಒತ್ತಡ ದಿಂದ ತಮ್ಮಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವೃತ್ತಿಪರರ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ.

ಇದನ್ನೂ ಓದಿ: Bangalore palace grounds: ಮೈಸೂರು ರಾಜಮನೆತನಕ್ಕೆ ಟಿಡಿಆರ್:‌ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ರಿಲೀಫ್‌

ಎಲ್ಲಾ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ನೌಕರರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ತಿಳಿಯಲು ಅನಾಮಧೇಯ, ಡೇಟ-ಚಾಲಿತ ಒಳನೋಟ ಸಜ್ಜುಗೊಳಿಸುತ್ತಿದ್ದೇವೆ. ಜೊತೆಗೆ, ಪ್ರತಿ ಕಂಪನಿಯು ಮೌಲ್ಯಮಾಪನದ ಆಧಾರದ ಮೇಲೆ ಕಸ್ಟಮೈಸ್ ಮಾಡಿದ ವರದಿಯನ್ನು, ನಿರ್ಬಂಧಿತ ಪ್ರವೇಶದೊಂದಿಗೆ, ಪಡೆಯುತ್ತದೆ.

LLL 2

ವರದಿಯು ನಾಯಕತ್ವದ ಬದ್ಧತೆ, ಕೆಲಸದ ಹೊರೆಯ ಸುಸ್ಥಿರತೆ, ಆತಂಕ, ಖಿನ್ನತೆ ಮತ್ತು ಯಾತನೆ ಯ ಲಕ್ಷಣಗಳಂತಹ ವಿಷಯಗಳನ್ನು ಹೈಲೈಟ್ ಮಾಡುತ್ತದೆ. ಎಲ್ಎಲ್ಎಲ್, ನಾಯಕತ್ವ ತಂಡದೊಂದಿಗೆ ವರದಿಗಳನ್ನು ಚರ್ಚಿಸುತ್ತದೆ ಮತ್ತು ಡೇಟವನ್ನು ಸ್ಪಷ್ಟ, ಕಾರ್ಯಸಾಧ್ಯ ಆದ್ಯತೆ ಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

ಮೌಲ್ಯಮಾಪನದ ಜೊತೆಗೆ ಲೈವ್‌ಲವ್‌ಲಾಫ್, ಕಂಪನಿಗಳಿಗೆ ಪ್ರಾಯೋಗಿಕ, ಸಂಸ್ಥೆ-ನಿರ್ದಿಷ್ಟ ಶಿಫಾರಸುಗಳೊಂದಿಗೆ ಸೂಕ್ತವಾದ ಮಾರ್ಗಸೂಚಿಯನ್ನು ಒದಗಿಸುತ್ತದೆ, ಇನ್ನೂ ಹಲವು ಉಪಕ್ರಮ ವನ್ನು ಜಾರಿ ಮಾಡಲಾಗುತ್ತದೆ ಎಂದುಹೇಳಿದರು.