ವಿವಿಧ ಕ್ಷೇತ್ರಗಳ 30 ವಿಶಿಷ್ಠ ಸಾಧಕರಿಗೆ ಪ್ರಶಸ್ತಿ ಪ್ರದಾನ
ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಗೌರವ ಪುರಸ್ಕಾರ
ವಿಶ್ವವಾಣಿ ಸೋದರ ಸಂಸ್ಥೆ ಲೋಕಧ್ವನಿಯಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಬೆಂಗಳೂರು: ನಾಲ್ಕು ದಶಕಗಳ ಇತಿಹಾಸವಿರುವ, ಉತ್ತರ ಕನ್ನಡ ಜಿಲ್ಲೆಯ ಮೊದಲ ದೈನಿಕ ಪತ್ರಿಕೆ ಎನ್ನುವ ಹಿರಿಮೆ ಇರುವ ‘ಲೋಕಧ್ವನಿ’ ದಿನಪತ್ರಿಕೆ ವತಿಯಿಂದ ಹಮ್ಮಿ ಕೊಂಡಿದ್ದ ‘ನಮ್ಮ ಹೆಮ್ಮೆಯ ಸಾಧಕರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.
ವಿಶ್ವವಾಣಿ ಸೋದರ ಸಂಸ್ಥೆಯಾಗಿರುವ ಲೋಕಧ್ವನಿಯಿಂದ ಪ್ರಥಮ ಬಾರಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಈ ವಿಭಿನ್ನ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಹಾಗೂ ಕೊಪ್ಪಳ ಜಿಲ್ಲೆಯ ಅಪರೂಪದ ಸಾಧಕರನ್ನು ಗುರುತಿಸಿ ನಾಡಿಗೆ ಪರಿಚಯಿಸಲಾಯಿತು.
ವಿಭಿನ್ನ ಸುದ್ದಿಯ ಮೂಲಕವೇ ಜನಜನಿತವಾಗಿರುವ ಲೋಕಧ್ವನಿ, ತೆರೆಮರೆಯ ಸಾಧಕ ರನ್ನು ಗುರುತಿಸುವ ನಿಟ್ಟಿನಲ್ಲಿ ‘ಲೋಕಧ್ವನಿ ಹೆಮ್ಮೆಯ ಸಾಧಕ -2026’ ನೀಡಲಾಯಿತು. ಎಲೆಮರೆಯ ಕಾಯಿಗಳಂತೆ ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಿರುವ ಕರುನಾಡಿನ ಸಾಧಕರನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. ಅದರಲ್ಲಿ ಯೂ ಉತ್ತರ ಕನ್ನಡ ಹಾಗೂ ಕೊಪ್ಪಳ ಜಿಲ್ಲೆಯ ಭಾಗದಲ್ಲಿ ಸಾಧನೆಯ ಶಿಖರವನ್ನೇರಿದ ಮಹನೀಯರನ್ನು ಪರಿಚಯಿಸುವುದೇ ಮೂಲ ಉದ್ದೇಶ.
ಗುರುವಾರ ಸಂಜೆ ಬೆಂಗಳೂರಿನ ರಾಡಿಸನ್ ಬ್ಲೂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲು ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಜ ತಂಗಡಗಿ, ಮಂಕಾಳ ವೈದ್ಯ, ಹಿರಿಯ ಶಾಸಕ ಶಿವರಾಮ್ ಹೆಬ್ಬಾರ್, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಪ್ರಶಸ್ತಿ ಪುರಸ್ಕೃತರನ್ನು ವಿಶ್ವವಾಣಿಯ ವ್ಯವಸ್ಥಾಪಕ ನಾಗಾರ್ಜುನ್ ಮೋತಿಲಾಲ್, ಲೋಕಧ್ವನಿ ಉತ್ತರ ಕನ್ನಡ ಆವೃತ್ತಿನ ಸ್ಥಾನಿಕ ಸಂಪಾದಕ ನಾಗರಾಜು ಮತ್ತಿಗಾರ್ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೂಪಾ ಗುರುರಾಜ್ ನೆರವೇರಿಸಿದರು.
30 ಸಾಧಕರಿಗೆ ಸನ್ಮಾನ: ಸಹಕಾರ, ಶಿಕ್ಷಣ, ಬ್ಯಾಂಕಿಂಗ್, ಕೃಷಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 30 ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಎಲೆಮರೆಯ ಕಾಯಿಗಳಾಗಿ ದಶಕಗಳಿಂದ ಸೇವೆಸಲ್ಲಿಸಿದ್ದ ಅಪರೂಪದ ಸಾಧಕರನ್ನು ಮುಖ್ಯಮಂತ್ರಿ ಗಳು ಸನ್ಮಾನಿಸುವ ಕ್ಷಣವನ್ನು ಸೆರೆಹಿಡಿದಿಟ್ಟುಕೊಳ್ಳಲು ಸಾಧಕರ ಕುಟುಂಬ ಸದಸ್ಯರು, ಸ್ನೇಹಿತರು ಸಾಕ್ಷಿಯಾದರು.
ಭಾಗವಹಿಸಿದ ಪ್ರಮುಖರು
ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಮಂಕಾಳ ವೈದ್ಯ, ಬೈರತಿ ಸುರೇಶ, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಕೆಎಸ್‌ಟಿಡಿಸಿ ಅಧ್ಯಕ್ಷ ಸರೋವರ ಶ್ರೀನಿವಾಸ್, ಶಾಸಕರಾದ ಆರ್.ವಿ.ದೇಶಪಾಂಡೆ, ಶಿವರಾಮ್ ಹೆಬ್ಬಾರ್, ಶಾಂತರಾಮ ಸಿದ್ದಿ, ದುಬೈ ಹೋಟೆಲ್ ಉದ್ಯಮಿ ಪ್ರವೀಣ್ ಶೆಟ್ಟಿ, ಅಡಿಗಾಸ್ ಯಾತ್ರಾ ಸಂಸ್ಥಾಪಕರಾದ ಕೆ.ನಾಗರಾಜ ಅಡಿಗ, ವ್ಯಾಲ್ಯೂ ಪ್ರಾಡೆಕ್ಟ್ ಎಂ.ಡಿ ಡಾ.ಶ್ರೀನಿವಾಸಮೂರ್ತಿ, ಪರ್ವ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ.ನೀಲೇಶ್, ಬಲ್ಡೋಟ ಕಾರ್ಪೋರೇಟ್ ಅಧ್ಯಕ್ಷ ಎಚ್.ವೈ. ದೇಸಾಯಿ, ವಿಶ್ವೇಶ್ವರ ಭಟ್ ಪತ್ನಿ, ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಸುಷ್ಮಾ ಭಟ್, ವಿಶ್ವವಾಣಿ ಸಿಇಒ ಚಿದಾನಂದ ಕಡಲಾಸ್ಕರ, ಎಸ್.ಎಂ.ಹೆಗಡೆ ಬಣಗಿ, ರಾಮಕೃಷ್ಣ ಹೆಗಡೆ ಮುದ್ದೇಪಾಲ, ಉದ್ಯಮಿ ಎಸ್.ಷಡಕ್ಷರಿ, ನ್ಯಾಯವಾದಿ ಬಾಲಚಂದ್ರ ಹೆಗಡೆ, ಕೆಡಿಸಿಸಿ ನಿರ್ದೇಶಕ ತಿಮ್ಮಯ್ಯ ಹೆಗಡೆ, ಜೇನು ಕೃಷಿಕ ಮಧುಕೇಶ್ವರ ಹೆಗಡೆ, ಉದ್ಯಮಿ ವಿದ್ಯಾಧರ, ಹೋಟೆಲ್ ಉದ್ಯಮಿ ನಾಗರಾಜ್, ದೇವಭಾಗ್ ಕ್ರೆಡಿಟ್ ಸೊಸೈಟಿಯ ಬಾಬಣ್ಣ ಶೇಟ್, ಸಿದ್ದೇಶ್ ಹಾರನಹಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಮುಖಾಂಶ
ಉತ್ತರ ಕನ್ನಡ ಜಿಲ್ಲೆಯ ನಂ.1 ದಿನಪತ್ರಿಕೆಯಾಗಿರುವ ಲೋಕಧ್ವನಿಯಿಂದ 30 ಸಾಧಕರಿಗೆ ಸನ್ಮಾನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹೆಕ್ಕಿ, ರಾಜ್ಯಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ ಲೋಕಧ್ವನಿ ಜಂಟಿ ಅಧಿವೇಶನ, ಸಚಿವ ಸಂಪುಟ ಸೇರಿದಂತೆ ಹಲವು ಕಾರ್ಯದೊತ್ತಡದ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮದಲ್ಲಿದ್ದ ಸಿದ್ದರಾಮಯ್ಯ ಜತೆಗೆ ಪ್ರಶಸ್ತಿ ಪುರಸ್ಕೃತರು ಹಾಗೂ ಕುಟುಂಬ ಸದಸ್ಯರ ಸೆಲ್ಫಿ ಕ್ರೇಜ್ 35 ನಿಮಿಷಕ್ಕೂ ಹೆಚ್ಚು ಕಾಲ ಭಾಷಣದಲ್ಲಿ ವಿಶ್ವೇಶ್ವರ ಭಟ್ ಹಾಗೂ ವಿಶ್ವವಾಣಿ ಸಮೂಹ ದೊಂದಿಗಿನ ಒಡನಾಟ ಹಂಚಿಕೊಂಡ ಸಿದ್ದರಾಮಯ್ಯ ಲೋಕಧ್ವನಿಯೂ ವಿಶ್ವವಾಣಿಯ ರೀತಿಯಲ್ಲಿ ರಾಜ್ಯ ಮಟ್ಟದ ಪತ್ರಿಕೆಯಾಗಲಿ ಎಂದು ಶುಭ ಹಾರೈಸಿದ ಸಿಎಂ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ ಪ್ರಶಸ್ತಿ ಪುರಸ್ಕೃತರು ಹಾಗೂ ಕುಟುಂಬ ಸದಸ್ಯರು ಕಾರ್ಯಕ್ರಮದ ಆರಂಭದಲ್ಲಿ ಸುಗಮ ಸಂಗೀತ ಹಿರಿಯ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ನಾಗಚಂದ್ರಿಕಾ ಭಟ್ ಅವರಿಂದ ಸಂಗೀತ ಸುಧೆ ನೆರೆದಿದ್ದ ಜನರ ಮನಸೂರೆಗೊಳಿಸಿದ ವಿ.ಸುಭ್ರತಾ ಅವರಿಂದ ಭರತನಾಟ್ಯ ಪ್ರದರ್ಶನ ಅನ್ಯಕಾರ್ಯಕ್ರಮವಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುರಸ್ಕೃತರಿಗೆ ಶುಭ ಹಾರೈಸಿದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ
ಪ್ರಶಸ್ತಿ ಪುರಸ್ಕೃತರು
ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತ ಶಿರಸಿ
ಲಕ್ಷ್ಮೀನಾರಾಯಣ ಎಂ. ಹೆಗಡೆ ಶಿರಸಿ
ನಾಗರಾಜ ಹಮ್ಮಣ್ಣ ನಾಯಕ ಅರೆಗದ್ದೆ
ಸುಹಾಸ ಹೆಗಡೆ ಐತಾಳಿಮನೆ
ನ್ಯಾಯವಾದಿ ನಾಗರಾಜ ವಿ. ನಾಯಕ
ಬಾಲಕೃಷ್ಣ ನಾಯಕ ಯಲ್ಲಾಪುರ
ಶ್ರೀಕಾಂತ್ ಕೃಷ್ಣ ಭಟ್ ತರಂಗ ಇಲೆಕ್ಟ್ರಾನಿಕ್ಸ್
ಕೆಎಲ್‌ಸಿ ವಿಡಿಐಟಿ-ಹಳಿಯಾಳ
ಸುರೇಶ್ಚಂದ್ರ ಹೆಗಡೆ ಕೇಶಿನಮನೆ
ಎ.ರವೀಂದ್ರ ನಾಯ್ಕ ಶಿರಸಿ
ನಾಗರಾಜ ಹಿತ್ತಲಮಕ್ಕಿ ಗೋಕರ್ಣ
ಡಾ.ಮಧು ಹೆಗಡೆ ಶಿರಸಿ
ಕಮಲಾಕರ ಗುರುನಾಥ ಹೆಗಡೆ ಬೊಮ್ಮನಳ್ಳಿ
ಆದರ್ಶ್ ಪೈ ಬಿಳಗಿ
ಎ.ಜೆ.ಎ- ಲಯನ್ ಮನೋಹರ್ ಗೋವಿಂದ ಮಲ್ಮನೆ
ಮಂಜುನಾಥ ಲಕ್ಷ್ಮಣ ನಾಯ್ಕ
ಅಮೋದ್ ಸಿರ್ಸಿಕರ್
ಜೈ ರಂಗನಾಥ್ ಬಿ.ಎಸ್.
ರಾಜು ಎನ್. ಕದಂ
ಯೋಗೇಶ್ ಪದ್ಮನಾಥ ಶಾನಭಾಗ
ಸುಬ್ರಮಣ್ಯ ಗಾಂವಕರ್
ವಿವೇಕ ಹೆಗಡೆ ಬಾಳೆಗದ್ದೆ
ಡಾ.ಗಣೇಶ ನೀಲಪ್ಪ ಬಿಷ್ಟಣ್ಣನವರ್
ಹಿತೇಂದ್ರ ನಾಯ್ಕ
ಪ್ರದೀಪ ಕುಮಾರ್ ಎಲ್ಲನಕರ್
ಶಿವರಾಜ್ ಸಂಗಪ್ಪ ಮುರಡಿ
ಸೋಮನಾಥ ದೊಡ್ಡಮನೆ
ಡಾ. ಬಸವರಾಜ ಅಂಗಡಿ
ವೀರಣ್ಣ ಕಂಬಳ್ಳಿ
ಶರಣೇಗೌಡ ಕೊಂತನೂರ್ ಪೊಲೀಸ್ ಪಟೇಲ್
*
ಹುಟ್ಟು ಆಕಸ್ಮಿಕ, ಸಾವು ಖಚಿತ, ಹುಟ್ಟುಸಾವುಗಳ ನಡುವೆ ನಾವು ಸಾರ್ಥಕತೆ ಕಂಡುಕೊಳ್ಳಬೇಕು. ಯಾವುದೇ ಜಾತಿಧರ್ಮದಲ್ಲಿ ಹುಟ್ಟಿದರೂ ನಾವೆಲ್ಲರೂ ಮನುಷ್ಯ ರಾಗಿ ಬಾಳುವುದು ಮುಖ್ಯ. ಯಾವ ಜಾತಿಧರ್ಮದ ಆಧಾರದ ಮೇಲೆ ಮನುಷ್ಯತ್ವವನ್ನು ಅಳೆಯಬಾರದು. ಜಾತಿಧರ್ಮದ ಆಧಾರದಲ್ಲಿ ಸಮಾಜ ಒಡೆಯಬಾರದು.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಲೋಕಧ್ವನಿ ದಿನಪತ್ರಿಕೆಯ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 30 ಜನರಿಗೆ ಲೋಕಧ್ವನಿ ಹೆಮ್ಮೆಯ ಸಾಧಕ -2026 ಪ್ರಶಸ್ತಿ ನೀಡುತ್ತಿರುವುದು ಉತ್ತಮ ಸಂಗತಿ. ಈ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರು ಮುಂದಿನ ದಿನಗಳಲ್ಲಿ ಇನ್ನೂ ಶ್ರೇಷ್ಠವಾದ ಕೆಲಸ ಮಾಡಲು ಸ್ಪೂರ್ತಿ ಸಿಗಲಿ.
-ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ
ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಜನಜೀವನದ ಅವಿಭಾಜ್ಯ ಅಂಗವಾಗಿ ಲೋಕಧ್ವನಿ ಬೆಳೆದು ಬಂದಿದೆ. ಉತ್ತರ ಕನ್ನಡದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಯಾವುದೇ ಸುದ್ದಿಯಿದ್ದರೂ ಅದು ಲೋಕಧ್ವನಿಯಲ್ಲಿಯೇ ಪ್ರಕಟವಾಗುತ್ತದೆ ಎನ್ನುವಷ್ಟರ ಮಟ್ಟಿಗೆ ಜನರ ನಂಬಿಕೆಯನ್ನು ಈ ಪತ್ರಿಕೆ ಗಳಿಸಿದೆ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು ವಿಶ್ವವಾಣಿ,
ಧರ್ಮದರ್ಶಿ, ಜನಶಕ್ತಿ ವಿಶ್ವಸ್ಥ ಮಂಡಳಿ