ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸೂರ್ಯಕುಮಾರ್‌ ದಂಪತಿ

Suryakumar-Devisha: ಸೂರ್ಯಕುಮಾರ್‌ ಯಾದವ್ ಕುಟುಂಬವು 2026 ರಲ್ಲಿ ಸ್ಮರಣೀಯ ಸಮಯವನ್ನು ಕಳೆಯುತ್ತಿದೆ. ಕಳೆದ ವಾರ, ಸೂರ್ಯಕುಮಾರ್ ಭಾರತವನ್ನು T20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದರು. ಅವರು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದಿದ್ದರೂ, ತಂಡವನ್ನು ಉತ್ತಮವಾಗಿ ಮುನ್ನಡೆಸಿದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸೂರ್ಯಕುಮಾರ್‌ ದಂಪತಿ

Suryakumar and Devisha waiting to welcome their first child -

Abhilash BC
Abhilash BC Mar 15, 2026 10:42 AM

ಮುಂಬಯಿ, ಮಾ.15: ಟಿ20 ವಿಶ್ವಕಪ್‌ ಗೆಲುವಿನ ಸಂಭ್ರಮದಲ್ಲಿರುವ ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ(Devisha Shetty) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿಗಳು ಇತ್ತೀಚೆಗೆ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೃದಯಸ್ಪರ್ಶಿ ಬೇಬಿ ಶವರ್ ಸಮಾರಂಭವನ್ನು ಆಚರಿಸಿಕೊಂಡರು. ಶುಭ ಕಾರ್ಯಕ್ರಮದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಕೆಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಸೂರ್ಯಕುಮಾರ್‌ ಯಾದವ್ ಕುಟುಂಬವು 2026 ರಲ್ಲಿ ಸ್ಮರಣೀಯ ಸಮಯವನ್ನು ಕಳೆಯುತ್ತಿದೆ. ಕಳೆದ ವಾರ, ಸೂರ್ಯಕುಮಾರ್ ಭಾರತವನ್ನು T20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದರು. ಅವರು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದಿದ್ದರೂ, ತಂಡವನ್ನು ಉತ್ತಮವಾಗಿ ಮುನ್ನಡೆಸಿದರು.



ಸೂರ್ಯಕುಮಾರ್ ಯಾದವ್ ಅವರು ಜುಲೈ 7, 2016 ರಂದು ದಕ್ಷಿಣ ಭಾರತದ ಸಂಪ್ರದಾಯದಂತೆ ದೇವಿಶಾ ಶೆಟ್ಟಿ ಅವರನ್ನು ವಿವಾಹವಾದರು. ಇವರು ಮುಂಬೈನ ಆರ್.ಎ. ಪೋಡರ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪರಿಚಿತರಾಗಿದ್ದರು. ದೇವಿಶಾ ಶೆಟ್ಟಿ ಭರತನಾಟ್ಯ ಕಲಾವಿದೆ ಮತ್ತು ಸೂರ್ಯಕುಮಾರ್ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರು. ಈ ಕಾರಣದಿಂದಲೇ ಸೂರ್ಯಕುಮಾರ್ ಅವರಿಗೆ ಕರಾವಳಿಯ ದೈವ-ದೇವಸ್ಥಾನಗಳ ಮೇಲೆ ಅಪಾರ ಗೌರವ ಇದೆ.

ಅಯ್ಯರ್‌, ಫಿಲ್‌ ಸಾಲ್ಟ್‌ ಕೈಬಿಟ್ಟ ಕೆಕೆಆರ್‌ ತಂಡವನ್ನು ಟೀಕಿಸಿದ ಅನಿಲ್ ಕುಂಬ್ಳೆ

2019 ರಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಫಿಟ್‌ನೆಸ್ ಹಾಗೂ ಆಟದ ಮೇಲಿನ ಗಮನವನ್ನು ಕಳೆದುಕೊಳ್ಳುತ್ತಿದ್ದಾಗ, ಅವರಿಗೆ ಬೆನ್ನೆಲುಬಾಗಿ ನಿಂತಿದ್ದೇ ದೇವಿಶಾ. ಅವರ ಆಹಾರ, ವ್ಯಾಯಾಮದಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಕಾಳಜಿ ವಹಿಸಿ, ಸೂರ್ಯ ಮತ್ತೆ ಫಾರ್ಮ್‌ಗೆ ಮರಳುವಂತೆ ಮಾಡಿದರು.